Koo App FY21: ಜಾಹೀರಾತುಗಳಿಗಾಗಿ ರೂ. 7 ಕೋಟಿ ಖರ್ಚು ಮಾಡಿದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್!
Koo ಹಾಗೂ Vokal ಮಾತೃ ಸಂಸ್ಥೆ Bombinatate Technologies ಮಾರ್ಚ್ 31, 2021 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ತೆರಿಗೆಯ ನಂತರ ರೂ. 35.18 ಕೋಟಿ ನಷ್ಟ ಅನುಭವಿಸಿದೆ ಎಂದು ತಿಳಿಸಿದೆ.
Tech Desk: ಟ್ವಿಟರ್(Twitter) ಸಾಮಾಜಿಕ ಜಾಲತಾಣಕ್ಕೆ(Social Media) ಪರ್ಯಾಯವಾಗಿರುವ ಮೇಡ್ ಇನ್ ಇಂಡಿಯಾ ಪ್ಲಾಟ್‌ಫಾರ್ಮ್ ಕೂ (Koo) ಮತ್ತು ಸ್ಥಳೀಯ ಭಾಷೆಯ QnA ಅಪ್ಲಿಕೇಶನ್ Vokalನ ಮಾತೃ ಸಂಸ್ಥೆ Bombinatate Technologies ಮಾರ್ಚ್ 31, 2021 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ತೆರಿಗೆಯ ನಂತರ ರೂ. 35.18 ಕೋಟಿ ನಷ್ಟ ಅನುಭವಿಸಿದೆ ಎಂದು ತಿಳಿಸಿದೆ. ಜನರು ತಮ್ಮದೇ ಸ್ಥಳೀಯ ಭಾಷೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು(multi-lingual micro-blogging platform) ಅವಕಾಶ ಮಾಡಿಕೊಡುವ ಮೇಡ್-ಇನ್-ಇಂಡಿಯಾ(Made In India) ಪ್ಲಾಟ್‌ಫಾರ್ಮ್ ಕೂ, ಅಪ್ಲಿಕೇಶನ್ ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು. ನಂತರದ 20 ತಿಂಗಳ ಅಲ್ಪಾವಧಿಯಲ್ಲಿ 1.5 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿರುವುದಲ್ಲದೇ, 9 ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ.
ಒಟ್ಟು ರೂ. 78 ಲಕ್ಷ ಆದಾಯ : FY21ರಲ್ಲಿನ ನಷ್ಟವು 190% ಏರಿಕೆಯಾಗಿದೆ ಅಥವಾ FY20ರಲ್ಲಿ ಉಂಟಾದ ರೂ. 12 ಕೋಟಿಗಿಂತ ಸುಮಾರು 3 ಪಟ್ಟು ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ. FY21ರಲ್ಲಿ ಕಾರ್ಯಾಚರಣೆಗಳಿಂದ (Operations) ರೂ. 7.76 ಲಕ್ಷ ಆದಾಯವನ್ನು ದಾಖಲಿಸಿದೆ. ಬ್ಯಾಂಕ್ ಠೇವಣಿ, ವಿವಿಧ ಆದಾಯ ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿಯನ್ನು ಒಳಗೊಂಡಿರುವ ಅದರ ಇತರ ಆದಾಯದ ಅಡಿಯಲ್ಲಿ, ಇದು ರೂ.70 ಲಕ್ಷ ಗಳಿಕೆಯನ್ನು ದಾಖಲಿಸಿದೆ, ಹೀಗಾಗಿ ಒಟ್ಟು ರೂ. 78 ಲಕ್ಷ ಆದಾಯ ಗಳಿಸಿದೆ ಎಂದು Inc42 ವರದಿ ಮಾಡಿದೆ.
ಇದನ್ನೂ ಓದಿ: Koo app:ಏಷ್ಯಾ ಪೆಸಿಫಿಕ್ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಕೂ ಆ್ಯಪ್!
FY20 ರಲ್ಲಿ, Bombinate Technologies ನ ಕಾರ್ಯಾಚರಣೆಗಳಿಂದ ಆದಾಯ ಶೂನ್ಯವಾಗಿತ್ತು, ಆದರೆ ಅದರ ಇತರ ಆದಾಯವು ರೂ. 1.9 ಕೋಟಿ ಆಗಿತ್ತು. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ FY21 ರಲ್ಲಿ ಒಟ್ಟು ರೂ.24.7 ಕೋಟಿ ಖರ್ಚು ಮಾಡಿದೆ, ಇದು ಮಾರ್ಚ್ 31, 2020 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಖರ್ಚು ಮಾಡಿದ ರೂ. 14.1 ಕೋಟಿ ನಿಂದ 75% ಏರಿಕೆಯಾಗಿದೆ.
ಜಾಹೀರಾತುಗಳಿಗಾಗಿ ರೂ. 7 ಕೋಟಿ: ಇದು ಉದ್ಯೋಗಿ ಪ್ರಯೋಜನಗಳಿಗಾಗಿ (Employee Benifits) ರೂ. 9 ಕೋಟಿ ಖರ್ಚು ಮಾಡಿದ್ದು, ಅದರ ಇತರ ವೆಚ್ಚವು ರೂ. 15 ಕೋಟಿ ಆಗಿದೆ. ಸ್ಟಾರ್ಟಪ್ ರೂ. 11 ಕೋಟಿ ಹಿಂದಿನ ಅವಧಿಯ ವೆಚ್ಚಗಳಿಗಾಗಿ (prior period expenses) ಖರ್ಚು ಮಾಡಿದೆ. ಅದರ ಇತರ ವೆಚ್ಚಗಳ ಅಡಿಯಲ್ಲಿ, ಸ್ಟಾರ್ಟ್ಅಪ್ ಜಾಹೀರಾತುಗಳು ಮತ್ತು ವ್ಯಾಪಾರ ಪ್ರಚಾರಗಳಿಗಾಗಿ ರೂ. 7 ಕೋಟಿ, ತಂತ್ರಜ್ಞಾನಕ್ಕಾಗಿ ರೂ. 4 ಕೋಟಿ ಮತ್ತು ಕಾನೂನು ಮತ್ತು ವೃತ್ತಿಪರ ಶುಲ್ಕಗಳಿಗಾಗಿ ರೂ. 1 ಕೋಟಿ ಖರ್ಚು ಮಾಡಿದೆ. ಆದರೆ ಕೂ FY20 ರಲ್ಲಿ ಕೂ ಕೇವಲ ರೂ. 2 ಕೋಟಿ ಜಾಹೀರಾತಿಗಾಗಿ ಖರ್ಚು ಮಾಡಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: Instagram Subscriptions Feature: ಎಕ್ಸ್‌ಕ್ಲ್ಯೂಸಿವ್ ಕಂಟೆಂಟ್‌ಗಾಗಿ ಭಾರತದಲ್ಲೂ ಇನ್ಸ್ಟಾ ಮಾಸಿಕ ಚಂದಾದಾರಿಕೆ!
ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.