ಎಲನ್ ಮಸ್ಕ್ ಮಾಲೀಕತ್ವದ ಟ್ವಿಟರ್‌ಗೆ ಭಾರತೀಯ ಮೂಲದ ಟೆಕ್ಕಿ ಶ್ರೀರಾಮ ಕೃಷ್ಣನ್ ನೆರವು!
ಎಲನ್ ಮಸ್ಕ್ ತೆಕ್ಕೆಗೆ ಟ್ವಿಟರ್ ಬರುತ್ತಿದ್ದಂತೆ ಹಲವರಿಗೆ ಕೊಕ್ ನೀಡಲಾಗಿದೆ. ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಹಲವು ಪ್ರಮುಖರು ಸಂಸ್ಥೆಯಿಂದ ಹೊರಬಿದ್ದಿದ್ದಾರೆ. ಇದೀಗ ಎಲನ್ ಮಸ್ಕ್ ಟ್ವಿಟರ್ ಸಂಪೂರ್ಣ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಭಾರತೀಯ ಮೂಲಕ ಟೆಕ್ಕಿ ಶ್ರೀರಾಮ ಕೃಷ್ಣನ್ ಹೆಗಲಿಗೆ ವಹಿಸಿದ್ದಾರೆ.
ಕ್ಯಾಲಿಫೋರ್ನಿಯಾ(ಅ.31): ಸಾಮಾಜಿಕ ಜಾಲತಾಣ ಟ್ವಿಟರ್‌ನ ಹೊಸ ಮಾಲೀಕ ಎಲನ್ ಮಸ್ಕ್ ಮಹತ್ವದ ಬದಲಾವಣೆಗಳಿಗೆ ಮುಂದಾಗಿದ್ದಾರೆ. ಟ್ವಿಟರ್‌ನಲ್ಲಿ ಬ್ಲೂ ಟಿಕ್ ವೆರಿಫಿಕೇಶನ್, ಪದಗಳ ಮಿತಿ ಸೇರಿದಂತೆ ಹಲವು ನೀತಿಗಳಲ್ಲಿ ಬದಲಾವಣೆ ಮಾಡಲು ಎಲನ್ ಮಸ್ಕ್ ಮುಂದಾಗಿದ್ದಾರೆ. ಇದಕ್ಕಾಗಿ ಟ್ವಿಟರ್ ತನ್ನ ತೆಕ್ಕೆಗೆ ತೆಗೆದುಕೊಂಡ ದಿನವೇ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಹಲವರಿಕೆ ಕೊಕ್ ನೀಡಲಾಗಿದೆ. ಇದೀಗ ಟ್ವಿಟರ್ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಭಾರತೀಯ ಮೂಲಕ ಟೆಕ್ಕಿ, ಹೂಡಿಕೆದಾರ ಶ್ರೀರಾಮ ಕೃಷ್ಣನ್‌ಗೆ ನೀಡಲಾಗಿದೆ. ಈ ಕುರಿತು ಸ್ವತಃ ಶ್ರೀರಾಮ ಕೃಷ್ಣನ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈಗ ನಾನು ಎಲನ್ ಮಸ್ಕ್ ಟ್ವಿಟರ್ ಸಂಸ್ಥೆಗೆ ತಾತ್ಕಾಲಿಕವಾಗಿ ನೆರವು ನೀಡುತ್ತಿದ್ದೇನೆ. ನಾನು ಹಾಗೂ a16z ಟ್ವಿಟರ್ ಸಂಸ್ಥೆ ಅತ್ಯಂತ ಪ್ರಮುಖ ಹಾಗೂ ವಿಶ್ವದ ಮೇಲೆ ಪ್ರಭಾವ ಬೀರುವ ಸಂಸ್ಥೆಯಾಗಿದೆ. ಇಷ್ಟೇ ಅಲ್ಲ ಎಲನ್ ಮಸ್ಕ್ ಎಲ್ಲವನ್ನೂ ಸಾಧಿಸಲು ಹೊರಟಿದ್ದಾರೆ ಎಂದು ಶ್ರೀರಾಮ ಕೃಷ್ಣನ್ ಟ್ವೀಟ್ ಮಾಡಿ್ದ್ದಾರೆ.
Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್ ಮಸ್ಕ್‌ಗೆ ಸಡ್ಡು?
ಶ್ರೀರಾಮ ಕೃಷ್ಣನ್ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಅಮೆರಿಕ ಪ್ರಜೆಯಾಗಿರುವ ಶ್ರೀರಾಮ ಕೃಷ್ಣನ್ ಟೆಕ್ಕಿಯಾಗಿ ಗಮನಸೆಳೆದಿದ್ದಾರೆ. ಇಷ್ಟೆ ಅಲ್ಲ ಎಂಜಿನಿಯರ್, ಹೂಡಿಕೆದಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಆಂಡ್ರೆಸೆನ್ ಹೊರೊವಿಟ್ಜ್‌ನಲ್ಲಿ ಪಾಲುದಾರರಾಗಿದ್ದಾರೆ. ಆಂಡ್ರೆಸೆನ್ ಹೊರೊವಿಟ್ಜ್‌ನಲ್ಲಿ ಸಂಸ್ಥೆ a16z ಎಂದು ಗುರುತಿಸಿಕೊಂಡಿದೆ. ಹಲವು ಸ್ಟಾರ್ಟ್ಆಪ್‌ಗಳಲ್ಲಿ ಹೂಡಿಕೆ ಮಾಡಿರುವ ಶ್ರೀರಾಮ ಕೃಷ್ಣನ್ ಕ್ರಿಪ್ಟೋ/ವೆಬ್ 3 ನಲ್ಲಿ ಹೂಡಿಕೆ ಮಾಡಿದ್ದರೆ. ಶ್ರೀರಾಮ ಕೃಷ್ಮನ್ ಟ್ವಿಟರ್‌ನ ಕೋರ್ ಗ್ರಾಹಕರ ತಂಡವನ್ನು ಮುನ್ನಡೆಸಿದ್ದಾರೆ. a16z ಗೂ ಮೊದಲು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಶ್ರೀರಾಮ ಕೃಷ್ಣನ್ ಈ ಹಿಂದೆ ಫೇಸ್‌ಬುಕ್ ಹಾಗೂ ಸ್ನ್ಯಾಪ್ ಸಂಸ್ಥೆಗೆ ಹಲವು ಮೊಬೈಲ್ ಜಾಹೀರಾತು ಉತ್ಪನ್ನಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಫೇಸ್‌ಬುಕ್ ನೆಟವರ್ಕ್, ಡೈರೆಕ್ಟ್ ರೆಸ್ಪಾನ್ಸ್ ಜಾಹೀರಾತು, ಪ್ರದರ್ಶನ ಜಾಹೀರಾತು ಸೇರಿದಂತೆ ಹಲವು ಮಜಲುಗಳಲ್ಲಿ ಅನುಭವ ಹೊಂದಿರುವ ಶ್ರೀರಾಮ ಕೃಷ್ಣನ್ ಇದೀಗ ಎಲನ್ ಮಸ್ಕ್‌ಗೆ ನೆರವು ನೀಡುತ್ತಿದ್ದಾರೆ.
Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್: ಪರಾಗ್ ಅಗರವಾಲ್ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?
ಟ್ವಿಟರ್ ಅನ್ನು ಖರೀದಿಸಿದ ಬಳಿಕ ಅದನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಯಿಸಲು ಹೊರಟಿರುವ ಎಲಾನ್ ಮಸ್ಕ್, ಈ ಹೊಣೆಯನ್ನು ಭಾರತೀಯ ಮೂಲದ ಖ್ಯಾತನಾಮ ಟೆಕ್ಕಿ, ಹೂಡಿಕೆದಾರ ಶ್ರೀರಾಮ ಕೃಷ್ಣನ್ ಅವರಿಗೆ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಟ್ವಿಟರ್ ಹೇಗಿರಬೇಕು ಎಂಬ ಸಲಹೆಯನ್ನು ಮಸ್ಕ್ ಮುಂದಿಟ್ಟಿದ್ದು, ಅದನ್ನು ಜಾರಿಗೆ ತರುವ ಕೆಲಸ ಮಾಡುತ್ತಿರುವುದಾಗಿ ಸ್ವತಃ ಶೀರಾಮ ಕೃಷ್ಣನ್ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಶ್ರೀರಾಮ್ ಕೃಷ್ಣನ್ ಅವರನ್ನೇ ಕಂಪನಿಯ ನೂತನ ಸಿಇಒ ಆಗಿ ನೇಮಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತೀಯ ಮೂಲದ ಸಿಇಒ ಪರಾಗ್ ಅಗರ್‌ವಾಲ್ ಅವರನ್ನು ಮಸ್‌್ಕ ವಜಾಗೊಳಿಸಿದ್ದರು. ಚೆನ್ನೈ ಮೂಲದ ಕೃಷ್ಣನ್ ಟ್ವಿಟರ್, ಮೆಟಾ, ಮೈಕ್ರೋಸಾಫ್‌್ಟ, ಸ್ನಾಪ್‌ಚಾಟ್ ಮೊದಲಾದ ಕಂಪನಿಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ಅನುಭವ ಹೊಂದಿದ್ದಾರೆ.