Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್ ಮಸ್ಕ್‌ಗೆ ಸಡ್ಡು?
ಎಲಾನ್ ಮಸ್ಕ್ ‘ಬಲವಂತವಾಗಿ’ ಟ್ವಿಟ್ಟರ್ ಖರೀದಿಸಿದ್ದಾರೆ ಎಂಬ ಆಕ್ಷೇಪ ಮೂಲ ಟ್ವಿಟ್ಟರ್ ಕಂಪನಿಯ ಪ್ರವರ್ತಕರಲ್ಲಿದೆ. ಈ ವರ್ಷದ ಮೇ ತಿಂಗಳಲ್ಲಿ ಟ್ವಿಟ್ಟರ್ ಕಂಪನಿಯ ಆಡಳಿತ ಮಂಡಳಿಯನ್ನು ತೊರೆದಿರುವ ಹಾಗೂ 2021ರಲ್ಲೇ ಟ್ವಿಟ್ಟರ್‌ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ಜಾಕ್ ಡೋರ್ಸಿ ಅವರು ಎಲಾನ್ ಮಸ್ಕ್‌ಗೆ ಸಡ್ಡು ಹೊಡೆಯಲೆಂದೇ ಬ್ಲೂಸ್ಕೈ ಜಾಲತಾಣ ಹುಟ್ಟುಹಾಕುತ್ತಿದ್ದಾರೆ ಎನ್ನಲಾಗಿದೆ.
ವಾಷಿಂಗ್ಟನ್: ಜಗತ್ಪ್ರಸಿದ್ಧ ಸೋಷಿಯಲ್ ಮೀಡಿಯಾ (Social Media) ಕಂಪನಿ ಟ್ವಿಟ್ಟರ್ (Twitter) ಅನ್ನು ಜಗತ್ತಿನ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಖರೀದಿಸಿದ ಬೆನ್ನಲ್ಲೇ ಟ್ವಿಟ್ಟರ್‌ನ ಸಹ ಸಂಸ್ಥಾಪಕ ಜಾಕ್ ಡೋರ್ಸಿ (Jack Dorsey) ಇನ್ನೊಂದು ಸಾಮಾಜಿಕ ಜಾಲತಾಣ ಹುಟ್ಟುಹಾಕಲು ಸಜ್ಜಾಗಿದ್ದಾರೆ. ಟ್ವಿಟ್ಟರ್‌ಗೆ ಪರ್ಯಾಯವಾದ, ‘ಬ್ಲೂಸ್ಕೈ’ (Blue Sky) ಹೆಸರಿನ ಜಾಲತಾಣದ ಬೀಟಾ ಅವತರಣಿಕೆ (ಪ್ರಾಯೋಗಿಕ) ಈಗಾಗಲೇ ಬಿಡುಗಡೆಯಾಗಿದೆ.
ಎಲಾನ್ ಮಸ್ಕ್ ‘ಬಲವಂತವಾಗಿ’ ಟ್ವಿಟ್ಟರ್ ಖರೀದಿಸಿದ್ದಾರೆ ಎಂಬ ಆಕ್ಷೇಪ ಮೂಲ ಟ್ವಿಟ್ಟರ್ ಕಂಪನಿಯ ಪ್ರವರ್ತಕರಲ್ಲಿದೆ. ಈ ವರ್ಷದ ಮೇ ತಿಂಗಳಲ್ಲಿ ಟ್ವಿಟ್ಟರ್ ಕಂಪನಿಯ ಆಡಳಿತ ಮಂಡಳಿಯನ್ನು ತೊರೆದಿರುವ ಹಾಗೂ 2021ರಲ್ಲೇ ಟ್ವಿಟ್ಟರ್‌ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ಜಾಕ್ ಡೋರ್ಸಿ ಅವರು ಎಲಾನ್ ಮಸ್ಕ್‌ಗೆ ಸಡ್ಡು ಹೊಡೆಯಲೆಂದೇ ಬ್ಲೂಸ್ಕೈ ಜಾಲತಾಣ ಹುಟ್ಟುಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್: ಪರಾಗ್ ಅಗರವಾಲ್ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?
2019ರಲ್ಲೇ ಜಾಕ್ ಡೋರ್ಸಿ ಬ್ಲೂಸ್ಕೈ ಕಂಪನಿಯನ್ನು ನೋಂದಣಿ ಮಾಡಿಸಿದ್ದರು. ಇದೊಂದು ವಿಕೇಂದ್ರೀಕೃತ ಸೋಷಿಯಲ್ ಆ್ಯಪ್ ಆಗಿರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಬ್ಲೂಸ್ಕೈ ಈಗಾಗಲೇ ಬೀಟಾ ಟೆಸ್ಟರ್‌ಗಳಿಗಾಗಿ ಲಿಂಕ್ ಬಿಡುಗಡೆ ಮಾಡಿದೆ. ಆಸಕ್ತರು ಟೆಸ್ಟರ್‌ಗಳಾಗಲು ನೋಂದಣಿ ಮಾಡಿಕೊಳ್ಳಬಹುದು. ಆ್ಯಪ್ ಸಂಪೂರ್ಣ ಸಿದ್ಧವಾದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಶೇ.75ರಷ್ಟು ಸಿಬ್ಬಂದಿ ಕಡಿತಕ್ಕೆ ಎಲಾನ್ ಮಸ್ಕ್ ಚಾಲನೆ
ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಅನ್ನು 3.6 ಲಕ್ಷ ಕೋಟಿ ರೂ.ಗೆ ಖರೀದಿಸಿದ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, ಸಿಇಒ ಪರಾಗ್ ಅರ್ಗವಾಲ್ ಸೇರಿದಂತೆ ಹಲವು ಹಿರಿಯರನ್ನು ತೆಗೆದು ಹಾಕಿದ ಬೆನ್ನಲ್ಲೇ ಇದೀಗ ಒಟ್ಟಾರೆ ಸಿಬ್ಬಂದಿ ಪೈಕಿ ಶೇ.75 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಸಿಂಕ್ ಹಿಡಿದು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ Elon Musk..!
ಮೂಲಗಳ ಪ್ರಕಾರ ಮ್ಯಾನೇಜರ್‌ಗಳಿಗೆ ಉದ್ಯೋಗಿಗಳ ಕಡಿತಕ್ಕಾಗಿ ಪಟ್ಟಿ ತಯಾರಿಸುವಂತೆ ಸೂಚಿಸಲಾಗಿದ್ದು, ಶೇ. 75ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಗುರುವಾರ ಟ್ವಿಟ್ಟರ್ ಖರೀದಿ ಒಪ್ಪಂದ ಕುದುರಿದ ಬೆನ್ನಲ್ಲೇ ಮಸ್ಕ್ ಉದ್ಯೋಗಿಗಳ ಕಡಿತಕ್ಕಾಗಿ ಸೂಚನೆ ನೀಡಿದ್ದರು. ಪ್ರಸ್ತುತ 7500 ಜನರು ಟ್ವಿಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 1ಕ್ಕೂ ಮುನ್ನ ವಜಾಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.