ಸ್ವತಃ ಟ್ವಿಟರ್‌ನಿಂದ ಹೂಡಿಕೆ ಪಡೆದುಕೊಂಡಿದ್ದ ಜಾಕ್‌ ಡೋರ್ಸೆ, ತಾವು ಟ್ವಿಟರ್‌ನಲ್ಲಿದ್ದಾಗಲೇ ಬ್ಲ್ಯೂಸ್ಕೈ ಪ್ರಾಜೆಕ್ಟ್‌ಅನ್ನು 2019ರಲ್ಲಿ ಆರಂಭ ಮಾಡಿದ್ದರು. ಫೆಬ್ರವರಿಯಲ್ಲಿ ಟ್ವಿಟರ್‌ ರೀತಿಯಲ್ಲೇ ಇರುವ ಬ್ಲ್ಯೂಸ್ಕೈ ಅಪ್ಲಿಕೇಶನ್‌ಅನ್ನು ಐಒಎಸ್‌ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿತ್ತು.

ನವದೆಹಲಿ (ಏ.21): ಸಾಮಾಜಿಕ ಜಾಲತಾಣ ದೈತ್ಯವಾಗಿರುವ ಎಲಾನ್‌ ಮಸ್ಕ್‌ ಮಾಲೀಕತ್ವದ ಟ್ವಿಟರ್‌ ಶುಕ್ರವಾರದಿಂದ ಟ್ವಿಟರ್‌ ಬ್ಲ್ಯೂಅನ್ನು ಅಧಿಕೃತ ಮಾಡಿದ್ದಾರೆ. ಇದರಿಂದಾಗಿ ಬಹುತೇಕ ಸೆಲಬ್ರಿಟಿಗಳು ತಮ್ಮ ಬ್ಲ್ಯೂಟಿಕ್‌ಅನ್ನು ಕಳೆದುಕೊಂಡಿದ್ದಾರೆ. ಹಾಗೇನಾದರೂ ಬ್ಲ್ಯೂಟಿಕ್‌ ಬೇಕಾದಲ್ಲಿ ಅದಕ್ಕೆ ಹಣಪಾವತಿ ಮಾಡಿಕೊಂಡು ಪಡೆಯಬೇಕಿದೆ. ಭಾರತದಲ್ಲಿ ಟ್ವಿಟರ್‌ ಖಾತೆ ಹೊಂದಿರುವವರು ಒಂದು ವರ್ಷಕ್ಕೆ 6800 ರೂಪಾಯಿ ಮೊತ್ತವನ್ನು ಬ್ಲ್ಯೂಟಿಕ್‌ಗಾಗಿ ನೀಡಬೇಕಾಗುತ್ತದೆ. ಇಲ್ಲಿಯವರೆಗೂ ಯಾರೆಲ್ಲಾ ಈ ಹಣ ಪಾವತಿ ಮಾಡಿಲ್ಲವೋ ಅವರೆಲ್ಲರ ಖಾತೆಯ ಬ್ಲ್ಯೂಟಿಕ್‌ಅನ್ನು ಮಸ್ಕ್‌ ಒಂದೇ ಕ್ಷಣಕ್ಕೆ ತೆಗೆದುಬಿಟ್ಟಿದ್ದಾರೆ. ಇದರ ನಡುವೆ ಟ್ವಿಟರ್‌ನ ಮಾಜಿ ಸಿಇಒ ಆಗಿದ್ದ ಜಾಕ್‌ ಡಾರ್ಸೆ, ಟ್ವಿಟರ್‌ಗೆ ಪರ್ಯಾಯವಾಗಿ ಆರಂಭಮಾಡಿದ್ದ 'ಬ್ಲ್ಯೂಸ್ಕೈ' ಅಪ್ಲಿಕೇಶನ್‌ಅನ್ನು ಶುಕ್ರವಾರದಿಂದಲೇ ಆಂಡ್ರಾಯ್ಡ್‌ ಸಾಫ್ಟ್‌ವೇರ್‌ ಹೊಂದಿರುವ ಮೊಬೈಲ್‌ಗೆ ರೋಲ್‌ಔಟ್‌ ಮಾಡಿದ್ದಾರೆ. ಬ್ಲ್ಯೂಸ್ಕೈ, ಟ್ವಿಟರ್ ರೀತಿಯಲ್ಲೇ ಇರುವ ಸೋಶಿಯಲ್‌ ಮೀಡಿಯಾ ವೇದಿಕೆಯಾಗಿದೆ. 2019ರಲ್ಲಿ ಟ್ವಿಟರ್‌ನಲ್ಲಿದ್ದಾಗಲೇ ಜಾಕ್‌ ಡಾರ್ಸೆ, ಟ್ವಿಟರ್‌ ಸಂಸ್ಥೆಯಿಂದಲೇ ಹಣಕಾಸು ನೆರವು ಪಡೆದು ಸೈಡ್‌ ಪ್ರಾಜೆಕ್ಟ್‌ ರೂಪದಲ್ಲಿ ಇದನ್ನು ಆರಂಭಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಐಓಎಸ್‌ ಸಾಫ್ಟ್‌ವೇರ್‌ ಹೊಂದಿರುವ ಮೊಬೈಲ್‌ಗಳಿಗೆ ಇದನ್ನು ರೋಲ್‌ಔಟ್‌ ಮಾಡಿದ್ದರೆ, ಈಗ ಆಂಡ್ರಾಯ್ಡ್‌ ಮೊಬೈಲ್‌ಗಳಿಗೂ ಬ್ಲ್ಯೂಸ್ಕೈ ಸೇವೆ ಸಿಗಲಿದೆ. 

ನ್ಯೂಯಾರ್ಕ್‌ ಪೋಸ್ಟ್‌ ಈ ಕುರಿತಾಗಿ ಈ ವರದಿ ಮಾಡಿದ್ದು, ಟ್ವಿಟರ್‌ನ ಮಾಜಿ ಸಹ ಸಂಸ್ಥಾಪಕ ಹಾಗೂ ಟ್ವಿಟರ್‌ನ ಮಾಜಿ ಸಿಇಒ ಜಾಕ್‌ ಡಾರ್ಸೆ, ಆಂಡ್ರಾಯ್ಡ್‌ಗೆ ಹೊಸ ಅಪ್ಲಿಕೇಶನ್‌ ಆದ ಬ್ಲ್ಯೂ ಸ್ಕೈಅನ್ನು ಅನಾವರಣ ಮಾಡಿದ್ದಾರೆ. ಇದು ಎಲಾನ್‌ ಮಸ್ಕ್‌ ಅವರ ಮೈಕ್ರೋಬ್ಲಾಗಿಂಗ್‌ ವೇದಿಕೆಯ ರೀತಿಯಲ್ಲೇ ಇರುತ್ತದೆ ಎಂದು ಬರೆದಿದೆ. ಇನ್ನು ಆಪ್‌ನ ವೆಬ್‌ಸೈಟ್‌ ಪ್ರಕಾರ, ಭವಿಷ್ಯದ "ಸಾಮಾಜಿಕ ಇಂಟರ್ನೆಟ್" ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಮತ್ತು ಕ್ರಿಯೇಟರ್‌ಗಳಿಗೆ "ಪ್ಲಾಟ್‌ಫಾರ್ಮ್‌ಗಳಿಂದ ಸ್ವಾತಂತ್ರ್ಯ" ನೀಡುತ್ತದೆ. ಆದಾಗ್ಯೂ, ಅಪ್ಲಿಕೇಶನ್ ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಕಾರಣ, ಇನ್ವೈಟ್‌ ಕೋಡ್‌ ಬಳಸಿ ಮಾತ್ರವೇ ಈ ಆಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Twitter ಸ್ಥಾಪಕನಿಂದ ಶೀಘ್ರ ಹೊಸ App ಸ್ಥಾಪನೆ: ಎಲಾನ್‌ ಮಸ್ಕ್‌ಗೆ ಸಡ್ಡು?

"ನಾವು ಎಟಿ ಪ್ರೋಟೋಕಾಲ್ ಅನ್ನು ನಿರ್ಮಿಸುತ್ತಿದ್ದೇವೆ, ಇದು ಸಾಮಾಜಿಕ ನೆಟ್‌ವರ್ಕಿಂಗ್‌ಗೆ ಹೊಸ ಅಡಿಪಾಯವಾಗಿದೆ, ಇದು ಪ್ಲಾಟ್‌ಫಾರ್ಮ್‌ಗಳಿಂದ ರಚನೆಕಾರರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ, ಡೆವಲಪರ್‌ಗಳಿಗೆ ನಿರ್ಮಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಬಳಕೆದಾರರಿಗೆ ಅವರ ಅನುಭವದಲ್ಲಿ ಆಯ್ಕೆಯನ್ನು ನೀಡುತ್ತದೆ" ಎಂದು ವೆಬ್‌ಸೈಟ್ ಹೇಳಿದೆ.

ಅದಾನಿ ಆಯ್ತು,ಈಗ ಟ್ವಿಟ್ಟರ್ ಮಾಜಿ ಸಿಇಒ ಮೇಲೆ ಹಿಂಡೆನ್ ಬರ್ಗ್ ಕೆಂಗಣ್ಣು;ಡೋರ್ಸೆ ಮೇಲಿನ ಆರೋಪಗಳೇನು?

ಟ್ವಿಟರ್‌ನಿಂದ ಆರ್ಥಿಕ ಸಹಾಯ ಪಡೆದು, ಡಾರ್ಸೆ ಅವರು 2019 ರಲ್ಲಿ ಬ್ಲೂಸ್ಕಿಯನ್ನು ಸೈಡ್ ಪ್ರಾಜೆಕ್ಟ್ ಆಗಿ ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು. ಫೆಬ್ರವರಿ ಅಂತ್ಯದಲ್ಲಿ, ಇದನ್ನು ಮೊದಲು ಐಒಎಸ್‌ ಬಳಕೆದಾರರಿಗೆ ಬಿಡುಗಡೆ ಮಾಡಲಾಯಿತು.ಟೆಕ್‌ಕ್ರಂಚ್‌ ಮಾಹಿತಿ ಪ್ರಕಾರ, ಟ್ವಿಟರ್‌ನಲ್ಲಿ ಲಭ್ಯವಿರುವ ಲೈಕ್‌ಗಳು ಅಥವಾ ಬುಕ್‌ಮಾರ್ಕ್‌ಗಳು, ಟ್ವೀಟ್‌ಗಳನ್ನು ಬದಲಾವಣೆ ಮಾಡುವುದು, ಕೋಟ್‌ ಟ್ವೀಟ್‌, ಡೈರೆಕ್ಟ್‌ ಮೆಸೇಜ್‌, ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಮೂಲಭೂತ ವೈಶಿಷ್ಟ್ಯಗಳು ಪ್ರಾರಂಭದಲ್ಲಿ ಬ್ಲೂಸ್ಕಿಯಲ್ಲಿ ಇರುವುದಿಲ್ಲ. ಇದು ಅಪ್ಲಿಕೇಶನ್ ಅನ್ನು ಆರಂಭದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಹೆಚ್ಚು ಟ್ವಿಟರ್‌ನ ಸುವ್ಯವಸ್ಥಿತ ಆವೃತ್ತಿಯನ್ನಾಗಿ ಮಾಡುತ್ತದೆ. ಈ ಅಪ್ಲಿಕೇಶನ್‌ಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಪ್ರಸ್ತುತ 20,000 ಸಕ್ರಿಯ ಬಳಕೆದಾರರನ್ನು ಹೊಂದಿದೆ.