ಉದ್ಯೋಗಿಗಳನ್ನು ವಜಾ ಬಳಿಕ ಮತ್ತೆ ಕೈಕೊಟ್ಟ ಟ್ವಿಟರ್ ಸೇವೆ, ಬಳಕೆದಾರರ ಪರದಾಟ!
ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಟ್ವಿಟರ್ ಪ್ರತಿ ದಿನ ಸುದ್ದಿಯಾಗುತ್ತಲೇ ಇದೆ. ಇತೀಚೆಗೆ ಹಲವು ಬಾರಿ ಟ್ವಿಟರ್ ಸೇವೆ ವ್ಯತ್ಯಯ್ಯ ಅನ್ನೋ ಮಾತುಗಳು ಕೇಳಿಬರುತ್ತಲೆ ಇದೆ. ಇಂದು ಕೂಡ ಟ್ವಿಟರ್ ಕೆಲ ಗಂಟೆಗಳ ಸೇವೆ ನಿಲ್ಲಿಸಿತ್ತು
ನ್ಯೂಯಾರ್ಕ್(ಮಾ.01): ಮಾರ್ಚ್ ತಿಂಗಳ ಆರಂಭದಲ್ಲೇ ಟ್ವಿಟರ್ ಕೆಲ ಕಾಲ ಕೈಕೊಟ್ಟ ಘಟನೆ ನಡೆದಿದೆ. ಇಂದು ಟ್ವಿಟರ್ ಕೆಲ ಗಂಟೆಗಳ ಕಾಲ ಸೇವೆ ನಿಲ್ಲಿಸಿತ್ತು. ಸಂಜೆ ಕೆಲ ಸಮಯ ಫೀಡ್, ಫಾಲೋವರ್ಸ್ ಪಟ್ಟಿಹಾಗೂ ಟ್ವೀಟ್‌ಗಳು ಕಾಣಿಸದೇ ಹೋಗಿತ್ತು. ರಿಫ್ರೆಶ್ ಆಗುತ್ತಿರಲಿಲ್ಲ. ಹೊಸ ಟ್ವೀಟ್ ಕಾಣಿಸುತ್ತಲೇ ಇರಲಿಲ್ಲ. ಇದರಿಂದ ಬಳೆಕದಾರರ ಕೆಲ ಗಂಟೆಗಳ ಕಾಲ ಪರದಾಡಿದ್ದಾರೆ. ಇತ್ತೀಚೆಗೆ ಎಲಾನ್ ಮಸ್ಕ್ ಟ್ವಿಟರ್ ಉದ್ಯೋಗಿಗಳ ವಜಾ ಮಾಡಿದ್ದರು. ಈ ಘಟನೆ ಬಳಿಕ ಪದೇ ಪದೇ ಟ್ವಿಟರ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ.
ಕಳೆದ ಎರಡು ತಿಂಗಳಲ್ಲಿ ಇದೀಗ ಟ್ವಿಟರ್ ಹಿಗ್ಗಾಮುಗ್ಗಾ ಟ್ರೋಲ್‌ಗೆ ಗುರಿಯಾಗಿದೆ. ಕಳೆದೆರಡು ತಿಂಗಳಲ್ಲಿ ಹಲವು ಬಾರಿ ಟ್ವಿಟರ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಈ ಬಾರಿ ಬಳಕೆದಾರರು ಟ್ವೀಟ್ ಮಾಡಲು ಸಾಧ್ಯವಾಗಿದೆ. ಆದರೆ ಫೀಡ್ ಅಪ್‌ಡೇಟ್ ಆಗದೆ ಸಮಸ್ಯೆ ಎದುರಿಸಿದ್ದರು.ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಹಲವು ಬದಲಾವಣಗಳಾಗಿದೆ. ಇದರಲ್ಲಿ ಪ್ರಮುಖವಾಗಿ ಕಂಪನಿ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು. ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿತ್ತು. ಟ್ವಿಟರ್ ಸೇವೆಯಲ್ಲಿ ವ್ಯತ್ಯಯವಾಗಲು ಉದ್ಯೋಗಿಗಳು, ಎಂಜಿನೀಯರ್ ವಜಾ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ಗೆ ಹೊಸ CEO ನೇಮಿಸಿದ ಎಲಾನ್ ಮಸ್ಕ್, ತಲೆಕೆಟ್ಟು ಎಡವಟ್ಟಾಯ್ತಾ ಎಂದ ನೆಟಿಜೆನ್ಸ್!
ಇಂದು ಟ್ವಿಟರ್ ಸೇವೆ ಸಮಸ್ಯೆ ಟ್ವಿಟರ್‌ನಲ್ಲೇ ಟ್ರೆಂಡ್ ಆಗಿದೆ. ಟ್ವಿಟರ್ ಡೌನ್ ಎಂದು ಟ್ರೆಂಡ್ ಆಗಿದೆ. ಇದಕ್ಕೆ ಕಾರಣವೂ ಇದೆ. ಈ ಬಾರಿ ಟ್ವಿಟರ್ ಸಮಸ್ಯೆ ಫೀಡ್ , ಫಾಲೋವರ್ಸ್ ಅಪ್‌ಡೇಟ್ ಆಗದೆ ಸಮಸ್ಯೆಯಾಗಿತ್ತು. ಆದರೆ ಟ್ವೀಟ್ ಮಾಡಲು ಸಾಧ್ಯವಾಗಿತ್ತು. ಹೀಗಾಗಿ ಬಳಕೆಗಾರರು ಟ್ವಿಟರ್ ಡೌನ್ ಟ್ರೆಂಡ್ ಮಾಡಿದ್ದಾರೆ. ಟ್ವಿಟರ್ ಸಮಸ್ಯೆ ಬಹುತೇಕ ದೇಶದಲ್ಲಿ ಕಂಡುಬಂದಿದೆ. ಹಲವು ದೇಶಗಳ ಬಳಕೆದಾರರು ಟ್ವಿಟರ್ ಸಮಸ್ಯೆ ಕುರಿತು ದೂರು ನೀಡಿದ್ದಾರೆ. ಹೀಗಾಗಿ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟರ್‌ಡೌನ್ ಎಂಬುದು ಟ್ವೀಟರ್‌ನಲ್ಲೇ ಟ್ರೆಂಡ್ ಆಗಿತ್ತು.ಕೆಲ ಹೊತ್ತಿನ ಬಳಿ ಟ್ವಿಟರ್ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.
ಟ್ವಿಟರ್ ಡೌನ್ ಕುರಿತು ಹಲವು ಮೇಮೆಗಳು ಹರಿದಾಡುತ್ತಿದೆ. ಇತ್ತೀಚೆಗೆ ಎಲಾನ್ ಮಸ್ಕ್ ಟ್ವಿಟರ್‌ಗೆ ಹೊಸ ಸಿಇಒ ನೇಮಕವಾಗಿದ್ದಾರೆ ಎಂದು ತಮ್ಮ ನಾಯಿಯ ಫೋಟೋ ಹಾಕಿದ್ದರು. ಇದೀಗ ಟ್ರೋಲಿಗರು ಅದೇ ಟ್ವೀಟ್ ಹಿಡಿದು ಎಲಾನ್ ಮಸ್ಕ್ ಜಾಡಿಸಿದ್ದಾರೆ. ಟ್ವಿಟರ್ ತುಂಬಾ ಚೆನ್ನಾಗಿತ್ತು. ಯಾವಾಗ ಟ್ವಿಟರ್‌ಗೆ ಈ ನಾಯಿ ಸಿಇಒ ಆಗಿ ಬಂತೋ, ಅಲ್ಲಿಂದ ಸಮಸ್ಯೆಗಳ ಸುರಿಮಳೆಯಾಗುತ್ತಿದೆ ಎಂದು ಮೇಮೆ ಮಾಡಿದ್ದಾರೆ.
Twitter India ಭಾರತದ ಮೇಲೇ ಮಸ್ಕ್ ಕಣ್ಣು, ಬೆಂಗಳೂರು ಬಿಟ್ಟು ಇನ್ನುಳಿದ ಕಚೇರಿಗೆ ಬೀಗ!
ಅಕ್ಟೋಬರ್‌ನಲ್ಲಿ ಟ್ವೀಟರ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಮಸ್‌್ಕ ಸಿಬ್ಬಂದಿ ವಜಾ, ಟ್ವೀಟರ್ ಚಂದಾಹಣ ನೀತಿ ಮೊದಲಾದವುಗಳನ್ನು ಜಾರಿಗೆ ತಂದು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ನಡೆಸಿದ ಪೋಲ್‌ನಲ್ಲಿ ಭಾಗಿಯಾದ 1.7 ಕೋಟಿ ಜನರ ಪೈಕಿ ಶೇ.57.5ರಷ್ಟುಜನರು ಮಸ್‌್ಕ ಸಿಇಒ ಹುದ್ದೆಯಿಂದ ಕೆಳಗಿಳಿಯುವುದೇ ಸೂಕ್ತ ಎಂದು ಹೇಳಿದ್ದರು.ಈ ಆದೇಶವನ್ನು ವ್ಯಂಗ್ಯವಾಡಿದ ಎಲಾನ್ ಮಸ್ಕರ್ ತಮ್ಮ ನಾಯಿಯ ಫೋಟೋ ಪೋಸ್ಟ್ ಮಾಡಿ, ಟ್ವಿಟರ್ ನೂತನ ಸಿಇಒ ಎಂದಿದ್ದರು. ಈ ಮೂಲಕ ಈ ಹಿಂದಿನ ಸಿಇಒ ಪರಾಗ್ ಅಗರ್ವಾಲ್‌ಗೂ ಟಾಂಟ್ ನೀಡಿದ್ದರು.