ಟ್ವಿಟರ್‌ಗೆ ಹೊಸ CEO ನೇಮಿಸಿದ ಎಲಾನ್ ಮಸ್ಕ್, ತಲೆಕೆಟ್ಟು ಎಡವಟ್ಟಾಯ್ತಾ ಎಂದ ನೆಟಿಜೆನ್ಸ್!

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ತೆಗೆದುಕೊಂಡ ನಿರ್ಧಾರಗಳು, ಪೋಸ್ಟ್‌ಗಳ ಬಾರಿ ವೈರಲ್ ಆಗಿದೆ. ಇದೀಗ ಟ್ವಿಟರ್ ಸಂಸ್ಥೆಗೆ ಹೊಸ ಸಿಇಒ ನೇಮಕ ಮಾಡಿದ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ನೋಡಿದ ಜನ ಮಸ್ಕ್‌ಗೆ ತಲೆಕೆಟ್ಟಿದೆಯಾ ಎಂದು ಪ್ರಶ್ನಿಸಿದ್ದಾರೆ.

Elon musk Appoint his pet dog as new CEO of Twitter says he is batter than Ex parag agarwal ckm

ನ್ಯೂಯಾರ್ಕ್(ಫೆ.15): ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಹಲವು ನೀತಿಗಳಲ್ಲಿ ಬದಲಾಾವಣೆ ತಂದಿದ್ದಾರೆ. ಮಸ್ಕ್ ಮಾಲೀಕ, ಹಾಗಾದರೆ ಟ್ವಿಟರ್ ಸಂಸ್ಥೆಯ ಸಿಇಒ ಯಾರು? ಟ್ವಿಟರ್ ಖರೀದಿಸಿದ ಬಳಿಕ ಸಿಇಒ ಸ್ಥಾನದಿಂದ ಪರಾಗ್ ಅಗರ್ವಾಲ್ ಅವರನ್ನು ವಜಾ ಮಾಡಿದ್ದರು. ಬಳಿಕ ಮಸ್ಕ್ ಸಿಇಓ ಜವಾಬ್ದಾರಿ ವಹಿಸಿಕೊಂಡಿದ್ದರು. ಹಲವು ಬಾರಿ ಮಸ್ಕ್ ಟ್ವಿಟರ್ ಜವಾಬ್ದಾರಿಯನ್ನು ಸೂಕ್ತರಿಗೆ ನೀಡುವುದಾಗಿ ಹೇಳಿಕೊಂಡಿದ್ದರು. ಇಂದು ಏಕಾಏಕಿ ಟ್ವಿಟರ್ ಸಿಇಒ ನೇಮಕ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಎಲ್ಲರೂ ತೀವ್ರ ಕುತೂಹಲದಿಂದ ಯಾರು ನೂತನ ಸಿಇಒ ಎಂದು ಕಣ್ಣಾಡಿಸಿದ್ದಾರೆ. ಆದರೆ ನಾಯಿ ಫೋಟೋ ಪೋಸ್ಟ್ ಮಾಡಿ ಇವರು ಟ್ವಿಟರ್ ನೂತನ ಸಿಇಒ ಎಂದು ಮಸ್ಕ್ ಹೇಳಿದ್ದಾರೆ.

ಸತತ ನಾಯಿ ಫೋಟೋಗಳ ಟ್ವೀಟ್ ಮಾಡಿ ಹೊಸ ಟ್ವಿಟರ್ ಸಿಇಒ ಕುರಿತು ಭಾರಿ ಪ್ರಚಾರ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಳೇ ಟ್ವಿಟರ್ ಸಿಇಒಗೆ ತಿರುಗೇಟು ನೀಡಿದ್ದಾರೆ. ಆ ವ್ಯಕ್ತಿಗಿಂತ ಇವರು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹಳೇ ಸಿಇಒಗೆ ಟಾಂಗ್ ನೀಡಿದ್ದಾರೆ. ಇಷ್ಟಕ್ಕೆ ಮಸ್ಕ್ ಸುಮ್ಮನಾಗಿಲ್ಲ. ಹೊಸ ಟ್ವೀಟರ್ ಸಿಇಒ ಅಮೇಜಿಂಗ್ ಆಗಿದ್ದಾರೆ. ಇವರು ನಂಬರ್ಸ್‌ನಲ್ಲಿ ಚಾಣಕ್ಯ ಎಂದಿದ್ದಾರೆ.

ಟ್ವಿಟ್ಟರ್‌ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್‌ ಮಸ್ಕ್‌..!

ಎಲಾನ್ ಮಸ್ಕ್ ಹೊಸ ಸಿಇಒ ಆಗಿ ನಾಯಿ ಫೋಟೋ ಹಾಕಿದ್ದಾರೆ. ಮಸ್ಕ್ ಯಾವುದೇ ನಾಯಿ ಫೋಟೋ ಹಾಕಿಲ್ಲ. ಇದು ಎಲಾನ್ ಮಸ್ಕ್ ಅವರ ಮುದ್ದಿನ ಸಾಕು ನಾಯಿ ಶಿಬಾ ಇನು. ಕುರ್ಚಿ ಮೇಲೆ ಕುಳಿತಿರುವ ನಾಯಿ ಫೋಟೋ ಹಂಚಿಕೊಂಡು ತಾನು ವಜಾ ಮಾಡಿದ ಈ ಹಿಂದಿನ ಸಿಇಓ ಹಾಗೂ ಇತರ ಉನ್ನತ ಅಧಿಕಾರಿಗಳ ವಿರುದ್ದವೇ ಸಮರ ಸಾರಿದ್ದಾರೆ. ಎಲಾನ್ ಮಸ್ಕ್ ನೂತನ ಸಿಇಒ ಪೋಸ್ಟ್ ಬೆನ್ನಲ್ಲೇ ನೆಟ್ಟಿಗರು ಏನಾಗಿದೆ ತಲೆಕೆಟ್ಟಿದೆಯಾ ಎಂದು ಪ್ರಶ್ನಿಸಿದ್ದಾರೆ.

ಟ್ವೀಟರ್‌ ಕಂಪನಿಯನ್ನು ಖರೀದಿಸುತ್ತಿದ್ದಂತೆಯೇ ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿ ನಾಲ್ವರು ಹಿರಿಯ ಅಧಿಕಾರಿಗಳನ್ನು  ಎಲಾನ್ ಮಸ್ಕ್ ವಜಾ ಮಾಡಿದ್ದರು. ಟ್ವೀಟರ್‌ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿಯಾಗಿದ್ದ ಭಾರತೀಯ ಮೂಲದ ಪರಾಗ್‌ ಅಗರವಾಲ್‌, ನೀತಿ ವಿಭಾಗದ ಮುಖ್ಯಸ್ಥೆಯಾಗಿದ್ದ ಭಾರತೀಯ ಮೂಲದ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್‌ ಸೆಗಲ್‌ ಮತ್ತು ಜನರಲ್‌ ಕೌನ್ಸಿಲ್‌ ಸೀನ್‌ ಎಡ್ಜೆಟ್‌ ಅವರನ್ನು ಮಸ್ಕ್ ವಜಾ ಮಾಡಿದ್ದರು. ‘ಇವರು ನಕಲಿ ಖಾತೆಗಳ ಮಾಹಿತಿ ನೀಡಲು ಮೀನ ಮೇಷ ಎಣಿಸಿ ನನ್ನ ದಿಕ್ಕು ತಪ್ಪಿಸಿದ್ದರು’ ಎಂದು ಆರೋಪಿಸಿ ಹುದ್ದೆಯಿಂದ ವಜಾಗೊಳಿಸಿದ್ದರು. ಖರೀದಿ ಒಪ್ಪಂದದ ವೇಳೆ, ಟ್ವೀಟರ್‌ನ ಮುಖ್ಯ ಕಚೇರಿಯಲ್ಲಿದ್ದ ಪರಾಗ್‌ ಮತ್ತು ಸೆಗಲ್‌ ಅವರು, ಖರೀದಿ ಘೋಷಣೆ ಹೊರಬೀಳುತ್ತಿದ್ದಂತೆಯೇ ಹೊರ ಹೋಗಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿತ್ತು.

ಒಂದೇ ವರ್ಷದಲ್ಲಿ ದಾಖಲೆಯ 15 ಲಕ್ಷ ಕೋಟಿ ಕಳೆದುಕೊಂಡ ಎಲಾನ್‌ ಮಸ್ಕ್‌!

ಇತ್ತೀಚೆಗೆ ಭಾರತದಲ್ಲಿ ಬ್ಲೂಟಿಕ್ ಸೇವೆಗೆ ದರ ನಿಗದಿಪಡಿಸಲಾಗಿದೆ. ವೆರಿಫೈಡ್‌ ಖಾತೆಗಳಿಗೆ ಬ್ಲೂಟಿಕ್‌ ನೀಡುವ ಸೇವೆಯನ್ನು ಟ್ವೀಟರ್‌ ಸಂಸ್ಥೆ ಭಾರತದಲ್ಲೂ ಆರಂಭಿಸಿತ್ತು. ಈ ಯೋಜನೆಯಡಿ ವೆಬ್‌ ಬಳಕೆದಾರರಿಗೆ ಮಾಸಿಕ 650 ರೂಪಾಯಿ ಮತ್ತು ಮೊಬೈಲ್‌ ಬಳಕೆದಾರರಿಗೆ 900 ರೂಪಾಯಿ ಶುಲ್ಕ ನಿಗದಿಪಡಿಸಿದೆ. ಅಲ್ಲದೇ 6,800 ರು.ಗಳ ವಾರ್ಷಿಕ ಬ್ಲೂಟಿಕ್‌ ರಿಯಾಯಿತಿ ಯೋಜನೆಯನ್ನು ಘೋಷಿಸಲಾಗಿದೆ. ಭಾರತದೊಂದಿಗೆ, ಬ್ರೆಜಿಲ್‌ ಮತ್ತು ಇಂಡೋನೇಷ್ಯಾಕ್ಕೂ ಸೇವೆ ವಿಸ್ತರಿಸಲಾಗಿದೆ. ಬ್ಲೂಟಿಕ್‌ ಚಂದಾದಾರರಿಗೆ ಶೇ.50 ರಷ್ಟುಕಡಿಮೆ ಜಾಹಿರಾತು ಪ್ರದರ್ಶಿಸಲಾಗುತ್ತದೆ.

Latest Videos
Follow Us:
Download App:
  • android
  • ios