TikTok ಬದಲು ಬರುತ್ತಿದೆ ಅಪ್ಪಟ ಕನ್ನಡಿಗರ ಅತ್ಯಾಧುನಿಕ snapshot ಆ್ಯಪ್!
ತಂತ್ರಜ್ಞಾನ, ಟೆಕ್ನಾಲಜಿಯಲ್ಲಿ ಕರ್ನಾಟಕ ಇತರ ಎಲ್ಲಾ ರಾಜ್ಯ ಮಾತ್ರವಲ್ಲ, ಇತರ ದೇಶಗಳಿಗಿಂತಲೂ ಮುಂದಿದೆ. ಇದೀಗ ಇದೇ ಕರ್ನಾಟಕದ ಅಪ್ಪಟ ಕನ್ನಡಿಗರ ಬಳಗ ಹೊಚ್ಚ ಹೊಸ ಹಾಗೂ ಅತ್ಯಾಧುನಿಕ ಆ್ಯಪ್ snapshot ಬಿಡುಗಡೆ ಮಾಡುತ್ತಿದೆ. ಡ್ಯಾನ್ಸ್, ಹಾಡು, ಡೈಲಾಗ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಅವಕಾಶ ನೀಡಬಲ್ಲ ಹಾಗೂ ಹತ್ತು ಹಲವು ಫೀಚರ್ಸ್ ಹೊಂದಿರುವ ವಿನೂತನ ಆ್ಯಪ್‌ಗೆ ಸ್ಯಾಂಡಲ್‌ವುಡ್ ದಿಗ್ಗಜರು ಶಹಬ್ಬಾಷ್‌ಗಿರಿ ಹೇಳಿದ್ದಾರೆ. ವಿನೂತನ ಆ್ಯಪ್ ವಿಶೇಷತೆ ಹಾಗೂ ಬಳಕೆ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.27): ಡ್ಯಾನ್ಸ್, ಹಾಡು, ಡೈಲಾಗ್ ಸೇರಿದಂತೆ ನಿಮ್ಮಲ್ಲಿನ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆ ಒದಗಿಸಬಲ್ಲ ವಿನೂತನ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ. ಟಿಕ್‌ಟಾಕ್ ಬದಲಿಯಾಗಿ ಭಾರತದಲ್ಲಿ ವಿನೂತನ ಹಾಗೂ ಹಲವು ವಿಶೇಷತೆಗಳನ್ನೊಳಗೊಂಡ ಅತ್ಯಾಧುನಿಕ snapshot ಆ್ಯಪ್ ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದೆ. ಇದು ಕರ್ನಾಟಕದ ಅಪ್ಪಟ ಕನ್ನಡಿಗರ ಆ್ಯಪ್ ಅನ್ನೋದು ಮತ್ತೊಂದು ವಿಶೇಷ.
ಟಿಕ್‌ಟಾಕ್, ಶೇರ್‌ಇಟ್ ಬಳಿಕ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್‌ಗೆ ಕೇಂದ್ರ ನಿರ್ಧಾರ
ಚೀನಾ ಮೂಲಕ ಟಿಕ್‌ಟಾಕ್ ಆ್ಯಪ್ ಬ್ಯಾನ್ ಆಗಿದೆ. ಹೀಗಾಗಿ ಪ್ರತಿಭೆಗೆ ವೇದಿಕೆ ಇಲ್ಲ ಅಂತಾ ಕೊರಗಬೇಕಿಲ್ಲ. ಕಾರಣ ಟಿಕ್‌ಟಾಕ್ ಮೀರಿಸಬಲ್ಲ ಆ್ಯಪ್ ಇದಾಗಿದ್ದು, ಹಲವು ಫೀಚರ್ಸ್ ಈ snapshot ಆ್ಯಪ್‌ನಲ್ಲಿದೆ. ಡ್ಯಾನ್ಸ್ ,ಹಾಡುಗಾರಿಕೆ ,ಸಿನಿಮಾ ಪ್ರಚಾರ ಹೀಗೆ ನಾನಾವಿಧವಾದ ಪ್ರತಿಭೆ , ಕ್ರಿಯಾಶೀಲತೆಗೆ ಸರಳ , ಸುಂದರ ಮತ್ತು ಸುಲಭವಾಗಿ ಜನರಿಗೆ ಪರಿಚಯಿಸಲು ಈ ಆಪ್ ಸಹಕಾರಿಯಾಗಲಿದ್ದು ಒಂದು ಉತ್ತಮ ವೇದಿಕೆಯಾಗಲಿದೆ. ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವಿದೇಶಿ ಆಪ್ ಗಳ ಮೊರೆಹೋಗುತ್ತಿದ್ದ ಅದೆಷ್ಟು ಮಂದಿಗೆ ಈ ವಿಶೇಷ ರೀತಿಯಲ್ಲಿ ಮೂಡಿಬಂದಿರುವ ಈ ದೇಸಿ ಆಪ್ ಹೆಚ್ಚು ಉಪಯೋಗಕಾರಿಯಾಗಲಿದೆ.
ಚೀನಾಗೆ ಟ್ರಂಪ್ ಬಿಗ್ ಪಂಚ್..! ಅಮೆರಿಕದಲ್ಲಿ ರಾತ್ರೋರಾತ್ರಿ ಟಿಕ್‌ಟಾಕ್ ಜೊತೆ ವಿಚಾಟ್ ಕೂಡಾ ಬ್ಯಾನ್
ಇನ್ನೂ ಇದು ತಾಂತ್ರಿಕ ವಿಭಾಗದ ಎಲ್ಲಾ ವಿಭಾಗದ ಕೆಲಸಗಳನ್ನು ಮುಗಿಸಿಕೊಂಡಿದ್ದು ಗೂಗಲ್ ಸಂಸ್ಥೆಯಿಂದಲೂ ಮಾನ್ಯತೆ ಪಡೆದಿದೆ ಅಲ್ಲದೆ ಬಿಡುಗಡೆಗೆ ಕೂಡ ಸಜ್ಜಾಗಿದೆ. ಇದೀಗ ಕನ್ನಡ ಚಿತ್ರರಂಗದ ಅನೇಕ ನಟ - ನಟಿಯರು ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದು ತಮ್ಮ ಶುಭಹಾರೈಕೆಗಳನ್ನು ತಿಳಿಸುತ್ತಿದ್ದಾರೆ . ತಂಡದ ಪ್ರಕಾರ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಸ್ನ್ಯಾಪ್ ಶಾಟ್ ನಿಮಗೆ ಲಭ್ಯವಿರಲಿದೆ.
ಈ ಆಪ್ಲಿಕೇಶನ್ ಪರಿಶೀಲಿಸಿದ ಸಂಗೀತ ಖ್ಯಾತ ನಿರ್ದೇಶಕ ವಿ ಮನೋಹರ್ snapshot ತಂಡಕ್ಕೆ ಶುಭಕೋರಿದ್ದಾರೆ. ಕನ್ನಡ ಚಿತ್ರರಂಗ ಹಲವು ಸಿನಿ ತಾರೆಯರು snapshot ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶುಭಕೋರಿದ್ದಾರೆ . ಈ ಆ್ಯಪ್ ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಸ್ನೇಹಿತರೊಂದಿಗೆ ಮನದಾಳವನ್ನು ಹಚ್ಚಿಕೊಳ್ಳುವ ವೇದಿಕೆ ಕೂಡ ಆಗಿದೆ. ಅತ್ಯುತ್ತಮ interface ಮತ್ತು ಗುಣಮಟ್ಟದ ಮೂಲಕ ಈ snapshot ಹೊರಬಲಿದೆ. ಕನ್ನಡದ snapshot ಅಪ್ಲೀಕೇಶನ್ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಯೋಜನೆಗೆ ಪೂರಕವೆಂಬಂತೆ ಕನ್ನಡಿಗರ ಈ ತಂಡ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಿ ಆ್ಯಪ್‌ಗೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದೆ.