ಚೀನಾಗೆ ಟ್ರಂಪ್ ಬಿಗ್ ಪಂಚ್..! ಅಮೆರಿಕದಲ್ಲಿ ರಾತ್ರೋರಾತ್ರಿ ಟಿಕ್‌ಟಾಕ್ ಜೊತೆ ವಿಚಾಟ್ ಕೂಡಾ ಬ್ಯಾನ್
ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆದ ಬೆನ್ನಲ್ಲೇ ಇದೀಗ ಅಮೆರಿಕದಲ್ಲೂ ಟಿಕ್‌ಟಾಕ್ ಸಂಪೂರ್ಣ ಬ್ಯಾನ್ ಆಗಲಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟ ಅಮೆರಿಕ ಅಧ್ಯಕ್ಷ ಟ್ರಂಪ್ ಗುರುವಾರ ರಾತ್ರಿ ಟಿಕ್‌ಟಾಕ್ ಬ್ಯಾನ್ ಮಾಡುವ ಕಾರ್ಯಕಾರಿ ಆದೇಶದಕ್ಕೆ ಸಹಿ ಮಾಡಿದ್ದಾರೆ. ಇದರ ಜೊತೆಗೆ ವಿಚಾಟ್ ಕೂಡಾ ಭಾಗಶಃ ಬ್ಯಾನ್ ಆಗಿದೆ.
ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆದ ಬೆನ್ನಲ್ಲೇ ಇದೀಗ ಅಮೆರಿಕದಲ್ಲೂ ಟಿಕ್‌ಟಾಕ್ ಸಂಪೂರ್ಣ ಬ್ಯಾನ್ ಆಗಲಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟ ಅಮೆರಿಕ ಅಧ್ಯಕ್ಷ ಟ್ರಂಪ್ ಗುರುವಾರ ರಾತ್ರಿ ಟಿಕ್‌ಟಾಕ್ ಬ್ಯಾನ್ ಮಾಡುವ ಕಾರ್ಯಕಾರಿ ಆದೇಶದಕ್ಕೆ ಸಹಿ ಮಾಡಿದ್ದಾರೆ.
ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್ ಚೀನಾಕ್ಕೆ ಹೆಚ್ಚಿನ ಆದಾಯವನ್ನು ನೀಡುತ್ತಿತ್ತು. ಇದೀಗ ಅಮೆರಿಕದಲ್ಲಿಯೂ ಮುಂದಿನ 45 ದಿನಗಳಲ್ಲಿ ಟಿಕ್‌ಟಾಕ್ ಬ್ಯಾನ್ ಆಗಲಿದೆ.
ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!
ವಿಡಿಯೋ ಮಾಡುವ, ವಿಡಿಯೋ ಎಡಿಟ್ ಮಾಡುವ ಬೈಟ್‌ಡ್ಯಾನ್ಸ್ ಲಿಮಿಟೆಡ್‌ನ ಟಿಕ್‌ಟಾಕ್ ಆ್ಯಪ್‌ನಿಂದ ದೇಶದ ಭದ್ರತೆಗೆ ತೊಂದರೆ ಇರಲಿದ್ದು, ಆ್ಯಪ್ ಬಳಕೆದಾರರಿಂದ ಮಾಹಿತಿ ಸಂಗ್ರಹಿಸಿ ಚೀನಾ ಸರ್ಕಾರಕ್ಕೆ ನೀಡುತ್ತಿದೆ ಎಂಬ ಆರೋಪವಿದೆ. ಈ ನಿಟ್ಟಿನಲ್ಲಿ ಟಿಕ್‌ಟಾಕ್ ಬ್ಯಾನ್ ಮಾಡಲು ಅಮೆರಿಕ ನಿರ್ಧರಿಸಿದೆ.
ಟಿಕ್‌ಟಾಕ್ ತನ್ನ ಬಳಕೆದಾರರಿಂದ ತನ್ನಂತಾನೇ ಇಂಟರ್‌ನೆಟ್ ಹಾಗೂ ಇತರ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಿದೆ. ಬಳಕೆದಾರನ ಇರುವ ಸ್ಥಳ, ಅಲ್ಲಿನ ಇಂಟರ್‌ನೆಟ್, ಬ್ರೌಸಿಂಗ್ ಮತ್ತು ಸರ್ಚ್ ಹಿಸ್ಟರಿಯನ್ನೂ ಟಿಕ್‌ಟಾಕ್ ಸಂಗ್ರಹಿಸುತ್ತಿದೆ ಎಂದು ಕಾರ್ಯಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
TikTok ಖರೀದಿಗೆ ಮೈಕ್ರೋಸಾಫ್ಟ್ ಯತ್ನ, ಬ್ಯಾನ್ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್
ಈ ಎಲ್ಲ ಮಾಹಿತಿ ಚೀನಾ ಕಮ್ಯುನಿಸ್ಟ್ ಪಕ್ಷದ ಕೈ ಸೇರುವುದರಿಂದ ದೇಶದ ಭದ್ರತೆಗೆ ತೊಂದರೆಯಾಗಲಿದೆ. ಈ ಮೂಲಕ ಅವರು ಅಮೆರಿಕನ್ನರ ಮಾಹಿತಿ ಕಲೆ ಹಾಕಲಿದ್ದಾರೆ. ಈ ಮೂಲಕ ಜನರನ್ನು ಬ್ಲಾಕ್ ಮೇಲ್ ಮಾಡುವುದು ಸೇರಿದಂತೆ ಹಲವು ರೀತಿ ತೊಂದರೆಯಾಗಲಿದೆ ಎಂದು ವಿವರಿಸಲಾಗಿದೆ.
ಈ ನಡುವೆಯೇ ಟಿಕ್‌ಟಾಕ್‌ನ್ನು ಮೈಕ್ರೋಸಾಫ್ಟ್ ಖರೀದಿಸಲಿದೆ ಎಂಬ ಸುದ್ದಿ ಇದ್ದರೂ ಈ ಸಂಬಂಧ ಅಮೆರಿಕ ಆಡಳಿತ ನಿಗಾ ವಹಿಸಿದೆ. ಮೈಕ್ರೋಸಾಫ್ಟ್ ಅಥವಾ ಯಾವುದೇ ಅಮೆರಿಕದ ಕಂಪನಿಯು ಟಿಕ್‌ಟಾಕ್ ಖರೀದಿಸಿದಲ್ಲಿ ಇದರಲ್ಲಿ ಚೀನಾದ ಯಾವುದೇ ಪಾಲುದಾರಿಕೆ ಇಲ್ಲ ಎಂಬುದನ್ನು ಖಚಿತಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಟಿಕ್‌ಟಾಕ್, ಶೇರ್‌ಇಟ್ ಬಳಿಕ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್‌ಗೆ ಕೇಂದ್ರ ನಿರ್ಧಾರ!
ಟಿಕ್‌ಟಾಕ್ ಜೊತೆ ಕೆಲಸ ಮಾಡುವ ಅಮೆರಿಕದ ಕಂಪನಿಗೆ ತನ್ನ ಪಾಲುದಾರಿಕೆ ಸಂಬಂಧಿಸಿದ ಎಲ್ಲ ಸಂಬಂಧ ಕೊನೆಗೊಳಿಸಲು 45 ದಿನಗಳ ಕಾಲಾವಕಾಶ ನೀಡಲಾಗಿದೆ. ಇದರೊಂದಿಗೆ ಮೆಸೇಜಿಂಗ್ ಆ್ಯಪ್ ವಿ ಚಾಟ್‌ನ್ನೂ ಭಾಗಶಃ ಬ್ಯಾನ್ ಮಾಡಲಾಗಿದೆ. ಗುರುವಾರ ಟ್ರಂಪ್ ಹೊರಡಿಸಿ ಆದೇಶ ಟೆನ್ಸೆಂಟ್ ಕಂಪನಿ ಜೊತೆಗಿನ ಎಲ್ಲ ಹಣಕಾಸಿನ ವ್ಯವಹಾರವನ್ನೂ ಬ್ಯಾನ್ ಮಾಡಿದೆ. ವಿಚಾಟ್‌ಗೆ ಅಮೆರಿಕದಲ್ಲಿ ಬಿಲಿಯನ್ ಗಟ್ಟಲೆ ಜನ ಬಳಕೆದಾರರಿದ್ದಾರೆ.