'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ
- ಯುವಪೀಳಿಗೆಯಲ್ಲಿ ಭಾರೀ ಜನಪ್ರಿವಾಗಿರೋ ಟಿಕ್‌ಟಾಕ್
- ದುರ್ಬಳಕೆಯಾಗುತ್ತಿರುವ ಬಗ್ಗೆ ಬಹಳಷ್ಟು ದೂರುಗಳು
- ಹೊಸ ಫೀಚರ್ ಮೊರೆ ಹೋದ ಟಿಕ್‌ಟಾಕ್
ಬೆಂಗಳೂರು (ಫೆ. 21): ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಪೈಕಿ ಅತೀ ಹೆಚ್ಚು ವಿವಾದ ಸೃಷ್ಟಿಸಿವುದು ಟಿಕ್‌ಟಾಕ್ ಎಂದರೆ ತಪ್ಪಾಗಲಾರದು. ಟಿಕ್‌ಟಾಕನ್ನು ಬ್ಯಾನ್ ಮಾಡ್ಬೇಕು ಎಂಬ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವುದು ಇದಕ್ಕೆ ಸಾಕ್ಷಿ.
ಟಿಕ್‌ಟಾಕ್ ಕೆಲವರಿಗೆ ತಮ್ಮ ಪ್ರತಿಭೆಗಳನ್ನು ಹೊರ ಹಾಕುವ ಮಾಧ್ಯಮವಾದರೆ, ಇನ್ನೂ ಕೆಲವರಿಗೆ ಕುಚೇಷ್ಠೆಯ ವಿಧಾನ. ಅದಕ್ಕಾಗಿ ಇದು ದುರ್ಬಳಕೆ ಆಗೋದನ್ನ ಕೂಡಾ ನಾವು ನೋಡ್ತೀವಿ.
ಅದಕ್ಕಿಂತ ಹೆಚ್ಚು ಈ ಟಿಕ್‌ಟಾಕ್ ಹದಿಹರೆಯದ ವಿದ್ಯಾರ್ಥಿಗಳಿಗೆ ಮತ್ತು ಯುವಕ-ಯುವತಿಯರಿಗೆ ಚಟವಾಗಿ ಬಿಟ್ಟಿರುವುದು ಹೆಚ್ಚು ಕಳವಳಕಾರಿ. ಅಪ್ರಾಪ್ತರು ಲೈಂಗಿಕ ಕಿರುಕುಳ, ಲೈಂಗಿಕ ಶೋಷಣೆಗೊಳಗಾಗುವ ಆರೋಪಗಳು ಕೂಡಾ ಕೇಳಿಬಂದಿವೆ.
ಇದನ್ನೂ ಓದಿ | ಬೆತ್ತಲೆ ಸೆಲ್ಫಿ, ಫೋಟೋ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇದು ಅಂತಿಂತಹ ಫೋನ್ ಅಲ್ಲ
ಮೊನ್ನೆ ಮೊನ್ನೆ ತಾನೇ ನಾವು ಜಪಾನಿನ ವಿಶಿಷ್ಟ ಫೋನ್ ಬಗ್ಗೆ ನೋಡಿದ್ವಿ. ಈಗ ಅದೇ ರರೀತಿ ಟಿಕ್‌ಟಾಕ್‌ನಲ್ಲೂ ಕೂಡಾ ಹೊಸ ಫೀಚರ್ ಪರಿಚಯಿಸಲಾಗಿದೆ. ಫ್ಯಾಮಿಲಿ ಸೇಫ್ಟಿ ಮೋಡ್ ಎಂಬ ಈ ಫೀಚರ್‌ನಲ್ಲಿ ಹೆತ್ತವರು/ಪೋಷಕರು ಕೂಡಾ ಮಕ್ಕಳ ಟಿಕ್‌ಟಾಕ್ ಚಟುವಟಿಕೆಗಳನ್ನು ನಿಯಂತ್ರಿಸಬಹುದು.
ಈ ಹೊಸ ಫೀಚರ್ ಮೂಲಕ ಸ್ಕ್ರೀನ್ ಟೈಮ್, ಮೆಸೇಜಿಂಗ್ ಮತ್ತು ಬೇಡವಾದ ವಿಡಿಯೋಗಳನ್ನು ಪೋಷಕರು ತಮ್ಮ ಖಾತೆಯಿಂದಲೇ ನಿಯಂತ್ರಿಸಬಹುದಾಗಿದೆ.
ಇದನ್ನೂ ಓದಿ | ನೀವು ಅಂದ್ಕೊಂಡಂಗಿಲ್ಲ 'ಡಿಲೀಟ್ ಫಾರ್ ಎವ್ರಿ ಒನ್' ಆಪ್ಶನ್! ಒಳಗಿನ ಕಥೆ ಬೇರೇನೆ!.
ಈ ಫೀಚರ್ ವರ್ಕ್ ಆಗ್ಬೇಕಾದ್ರೆ ಪೋಷಕರು ಮತ್ತು ಮಕ್ಕಳು ತಮ್ಮ ತಮ್ಮ ಖಾತೆಯಲ್ಲಿ ಫ್ಯಾಮಿಲಿ ಮೋಡ್ ಆಯ್ಕೆ ಮಾಡಿಕೊಳ್ಳಬೇಕು. ಅಲಲ್ಇ ಲಭ್ಯವಿರುವ ಕ್ಯೂಆರ್ ಕೋಡ್ ಮೂಲಕ ಪರಸ್ಪರ ಖಾತೆಗಳನ್ನು ಲಿಂಕ್ ಮಾಡಿಕೊಳ್ಳಬೇಕು.
ಸದ್ಯಕ್ಕೆ ಈ ಫೀಚರ್ ಇಂಗ್ಲಂಡ್‌ನಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಅಮೆರಿಕಾ ಮತ್ತು ಇತರ ದೇಶಗಳಲ್ಲಿ ಶುರುವಾಗಲಿದೆ.
ಫೆಬ್ರವರಿ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ