ನವದೆಹಲಿ(ಜೂ.04): ಕೇಂದ್ರ ಸರ್ಕಾರ ತಂದಿರುವ ಹೊಸ ಐಟಿ ನಿಯಮ ಭಾರತೀಯರು ಹಾಗೂ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಿದರೆ, ಕಂಪನಿಗಳಿಗೆ ಇನ್ನಿಲ್ಲದ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರದ ಕುರಿತು ದೆಹಲಿ ಹೈಕೋರ್ಟ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಇದೀಗ ಟೆಲಿಕಾಂ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್, ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿ ಕುರಿತು ಖಡಕ್ ಸೂಚನೆ ನೀಡಿದ್ದಾರೆ.

ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!

ಮಹಿಳೆಯ ಮಾರ್ಫಿಂಗ್ ಮಾಡುವುದು, ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಅಮಾಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ರೀತಿ ಹಲವು ಪ್ರಕರಣಗಳಲ್ಲಿ ಕೋರ್ಟ್ ಖಡಕ್ ಸೂಚನೆಯನ್ನು ನೀಡಿದೆ. ಈ ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳು ತಾಂತ್ರಿಕ ಕಾರಣ ಹಾಗೂ ಅಭಿವ್ಯಕ್ತಿ ಕಾರಣ ಒಡ್ಡಿ ಪರದೆಯ ಹಿಂದೆ ಸರಿದುಕೊಂಡಿದೆ. ಆದರೆ ಹೊಸ ನಿಯಮ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನೂತನ ಮಾರ್ಗಸೂಚಿ ಪ್ರಕಾರ ಹಿಂಸಾಚಾರ, ಕೋಮು ದ್ವೇಷ, ಗಲಭೆಗಳು, ಜನಸಮೂಹ ಹತ್ಯೆ, ಭಯೋತ್ಪಾದನೆ ಮತ್ತು ಅತ್ಯಾಚಾರ, ಮಹಿಳೆಯರ ಮಾರ್ಫಡ್ ಚಿತ್ರಗಳು ಅಥವಾ ಮಕ್ಕಳ ಅಶ್ಲೀಲ ಅಥವಾ ದುರುಪಯೋಗದ ಚಿತ್ರ ಅಥವಾ ವಿಡಿಯೋಗಳ ಮೂಲ ಪತ್ತೆಹಚ್ಚಲು ಹೊಸ ನಿಯಮ ಸಹಕಾರಿಯಾಗಿದೆ. ಜೊತೆಗೆ ತಕ್ಷಣಕ್ಕೆ ಪರಿಹಾರ ಹಾಗೂ ಸಮಸ್ಯೆಯಿಂದ ಮುಕ್ತಿ ಪಡೆಯಲು ನೊಡೆಲ್ ಅಧಿಕಾರಿಗಳ ನೇಮಕ ಕೂಡ ಹೊಸ ನಿಯಮ ಹೇಳುತ್ತದೆ.

ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ? 

ಹೊಸ IT ನಿಯಮ ಈ ದೇಶದ ಸುರಕ್ಷತೆ, ಐಕ್ಯತೆ ದೃಷ್ಟಿಯಂದ ರೂಪಿಸಿದ ಕಾನೂನು. ಈ ದೇಶದ ಕಂಪನಿಗಳು ಇಲ್ಲಿ ನಿಯಮ ಪಾಲಿಸಬೇಕೇ ಹೊರತು, ಅಮೆರಿಕ ನಿಯಮವಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸಾಮಾಜಿಕ ಮಾದ್ಯಮಗಳು ಬಳಕೆದಾರರ ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿ ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಓರ್ವ ಮಹಿಳೆ ನನ್ನ ಮಾರ್ಫ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನನಗೆ ರಕ್ಷಣೆ ನೀಡಿ ಎಂದಾಗ ಸಾಮಾಜಿಕ ಮಾಧ್ಯಮಗಳು ತಾಂತ್ರಿಕ ಕಾರಣದ ಹಿಂದ ಆಶ್ರಪಡೆಯುವುದು ಅನ್ಯಾಯವಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ದುರುದ್ದೇಶಕ್ಕೆ ಬಳಸುವ, ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚುವ ಜವಾಬ್ದಾರಿ ಹಾಗೂ ಬಳಕೆದಾರರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಇದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ