ಗುಡ್ ಮಾರ್ನಿಂಗ್ ಸಂದೇಶ ಕಳುಹಿಸುವ ಅಭ್ಯಾಸ ಇದೆಯಾ? ಎಚ್ಚರ ಬ್ಯಾನ್ ಆಗಲಿದೆ ನಿಮ್ಮ WhatsApp!

ವ್ಯಾಟ್ಸ್ಆ್ಯಪ್ ಮೂಲಕ ಗುಡ್ ಮಾರ್ನಿಂಗ್ ಸಂದೇಶ ಕಳುಹಿಸುವ ಅಭ್ಯಾಸ ಎಲ್ಲರಿಗೂ ಇದೆ. ಆದರೆ ಒಬ್ಬರಿಗೋ , ಇಬ್ಬರಿಗೋ ಕಳುಹಿಸಿದರೆ ಒಕೆ,  ಹೆಚ್ಚಿನವರಿಗೆ ಗುಡ್ ಮಾರ್ನಿಂಗ್ ಸಂದೇಶ ಕಳುಹಿಸಿದರೆ ವ್ಯಾಟ್ಸ್ಆ್ಯಪ್ ಖಾತೆ ಬ್ಲಾಕ್ ಆಗಲಿದೆ.
 

Sending too many good morning message land you in trouble app can count its spam and ban your account ckm

ನವದೆಹಲಿ(ಅ.20):  ಗುಡ್ ಮಾರ್ನಿಂಗ್....ಆಪ್ತರಿಗೆ, ಗೆಳೆಯರಿಗೆ, ಕುಟುಂಬಸ್ಥರಿಗೆ ಸಾಮಾನ್ಯವಾಗಿ ಈ ಸಂದೇಶ ಕಳುಹಿಸಲಾಗುತ್ತದೆ. ವ್ಯಾಟ್ಸ್ಆ್ಯಪ್ ಮೂಲಕ ಆಪ್ತರ ಜೊತೆ ನಿರಂತರ ಸಂಪರ್ಕದಲ್ಲಿರಲು, ಆತ್ಮೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ವ್ಯಾಟ್ಸ್ಆ್ಯಪ್ ಮೂಲಕ ದಿನಕ್ಕೊಂದು ಗುಡ್ ಮಾರ್ನಿಂಗ್ ಸಂದೇಶ ಕಳುಹಿಸುವುದು ಸಾಮಾನ್ಯ. ಆದರೆ ಈ ಅಭ್ಯಾಸ ಅತೀಯಾದರೆ ನಿಮ್ಮ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಲಿದೆ. ಹೌದು, ಪ್ರತಿ ದಿನ ಗುಡ್ ಮಾರ್ನಿಂಗ್ ಸಂದೇಶ ಹೆಚ್ಚು ಹೆಚ್ಚು ಕಳುಹಿಸಿದರೆ ವ್ಯಾಟ್ಸ್ಆ್ಯಪ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡಲಿದೆ. ಒಂದಷ್ಟು ಗೆಳೆಯರಿಗೆ, ಕೆಲ ಗ್ರೂಪ್‌ಗಳಿಗೆ ಗುಡ್ ಮಾರ್ನಿಂಗ್ ಸಂದೇಶ ಕಳುಹಿಸಿದರೆ ನಿಮ್ಮ ವ್ಯಾಟ್ಸ್ಆ್ಯಪ್ ಖಾತೆಯನ್ನು ಅಸಹಜ ಚಟುವಟಿಕೆ ಹಾಗೂ ಪರಿಶೀಲಿಸದ ಫಾರ್ವಡ್ ಮಾಹಿತಿ ಎಂದು ವ್ಯಾಟ್ಸ್ಆ್ಯಪ್ ಪರಿಗಣಿಸಲಿದೆ. ಇಷ್ಟೇ ಅಲ್ಲ ಅದೆ ತಿಂಗಳ ಅಂತ್ಯದಲ್ಲಿ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಲಿದೆ. 

ಹೆಚ್ಚು ಹೆಚ್ಚು ಗುಡ್ ಮಾರ್ನಿಂಗ್ ಸಂದೇಶಗಳನ್ನು ವ್ಯಾಟ್ಸ್ಆ್ಯಪ್ ಸ್ಪಾಪ್ ಎಂದು ಪರಿಗಣಿಸುತ್ತದೆ. ಇಷ್ಟೇ ಅಲ್ಲ ಅದು ಪರಿಶೀಲಿಸದೆ ಕಳುಹಿಸುವ ಫಾರ್ವಡ್ ಮೆಸೇಜ್ ಎಂದು ಪರಿಗಣಿಸುತ್ತಿದೆ. ಹೀಗಾಗಿ ಒಂದೊಳ್ಳೆ ಉದ್ದೇಶಕ್ಕಾಗಿ ಕಳುಹಿಸಿದ ಗುಡ್ ಮಾರ್ನಿಂಗ್ ಸಂದೇಶದಿಂದ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗಲಿದೆ. 

ಎಡಿಟ್ ಮಾಡಿದ ವಾಟ್ಸಾಪ್ ಮೇಸೆಜ್ ಮೇಲೆ ಲೇಬಲ್!

ಪರಿಶೀಲಿಸದ ಮಾಹಿತಿ ಫಾರ್ವಡ್ ಮಾಡುವುದು, ಅತೀ ಹೆಚ್ಚು ಗುಡ್ ಮಾರ್ನಿಂಗ್ ಸಂದೇಶಗಳನ್ನು ಕಳುಹಿಸುವುದು, ವ್ಯಾಟ್ಸ್ಆ್ಯಪ್ ಬ್ರಾಡ್‌ಕಾಸ್ಟ್ ಹೆಚ್ಚಾಗಿ ಬಳಸುವುದು ಕಂಪನಿಯ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತವೆ. ವಿಶೇಷವಾಗಿ ಇದು ಸ್ಪ್ಯಾಮ್, ಸ್ಕ್ಯಾಮ್‌ಗಳನ್ನು ಒಳಗೊಂಡಿದ್ದರೆ ಅಥವಾ WhatsApp ಬಳಕೆದಾರರ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸಿದರೆ, ವ್ಯಾಟ್ಸ್ಆ್ಯಪ್ ನಿಮ್ಮ ಖಾತೆ ಮೇಲೆ ಕ್ರಮ ಕೈಗೊಳ್ಳಲಿದೆ. ಪ್ರತಿ ತಿಂಗಳ ಅಂತ್ಯದಲ್ಲಿ ವ್ಯಾಟ್ಸ್ಆ್ಯಪ್ ಈ ರೀತಿ ನಿಯಮ ಉಲ್ಲಂಘಿಸಿದ ಪಟ್ಟಿಯನ್ನು ಸಲ್ಲಿಸುತ್ತದೆ. ಇಷ್ಟೇ ಅಲ್ಲ ಈ ಪಟ್ಟಿಯಲ್ಲಿ ಉಲ್ಲೇಖಿಸಿರುವ ಖಾತೆಗಳನ್ನು ವ್ಯಾಟ್ಸ್ಆ್ಯಪ್ ಬ್ಯಾನ್ ಮಾಡುತ್ತದೆ. ವ್ಯಾಟ್ಸ್ಆ್ಯಪ್ ಮಾಸಿಕ ವರದಿ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದ 2.3 ಮಿಲಿಯನ್ ಖಾತೆ ನಿಷೇಧಿಸಿದೆ.  

WhatsAppನಲ್ಲಿ ಶೀಘ್ರದಲ್ಲೇ ಈ 7 ಬದಲಾವಣೆ: ಅತ್ಯಾಕರ್ಷಕ ವೈಶಿಷ್ಟ್ಯಗಳು ಹೀಗಿವೆ..

ವ್ಯಾಟ್ಸ್ಆ್ಯಪ್ ತನ್ನ ಗ್ರಾಹಕರಲ್ಲಿ ಬಲ್ಕ್ ಮೆಸೇಜ್ ಕಳುಹಿಸುವುದನ್ನು ನಿರ್ಬಂಧಿಸಿ ಎಂದು ಸೂಚಿಸಿದೆ. ಅನಧಿಕೃತ ಸಂದೇಶ, ಸುಳ್ಳು ಸಂದೇಶ, ವಿಡಿಯೋ, ಫೋಟೋಗಳನ್ನು ಫಾರ್ವರ್ಡ್ ಮಾಡುವುದು ನಿಲ್ಲಿಸಿ ಎಂದು ಗ್ರಾಹಕರಿಗೆ ಸೂಚಿಸಿದೆ. ವ್ಯಾಟ್ಸ್ಆ್ಯಪ್ ನಿಯಮ ಉಲ್ಲಂಘಿಸಿದರೆ ನಿಮ್ಮ ಖಾತೆ ಬ್ಯಾನ್ ಅಥವಾ ಬ್ಲಾಕ್ ಆಗಲಿದೆ. 
 

Latest Videos
Follow Us:
Download App:
  • android
  • ios