Screen Glass Protector:ಇನ್ನು ಫೋನ್ ಸ್ಕ್ರೀನ್ ಒಡೆಯಲ್ಲ ಬಿಡಿ, ಬರ್ತಿದೆ ಅಲ್ಟ್ರಾಹಾರ್ಡ್ ಗ್ಲಾಸ್!

ಸಾಮಾನ್ಯವಾಗಿ ಹೊಸ ಫೋನು (Phone) ಖರೀದಿಸಿದಾಗ ಸ್ಕ್ರೀನ್ ಗಾರ್ಡ್ ಖರೀದಿಸಿಯೇ ಇರುತ್ತಾರೆ. ಯಾಕೆಂದರೆ, ಫೋನು ಬಿದ್ದರೆ ಸ್ಕ್ರೀನ್ ಹಾಳಾಗಬಾರದು ಎಂದು. ಆದರೆ, ಇನ್ನು ಮುಂದೆ ಒಡೆಯದಂಥ ಫೋನ್ ಸ್ಕ್ರೀನ್ ಬರಬಹುದು. ಸಂಶೋಧಕರು ಅಂಥ ಅಲ್ಟ್ರಾ ಹಾರ್ಡ್ (Ultrahard) ಸ್ಕ್ರೀನ್ ಅಭಿವೃದ್ಧಿಪಡಿಸುತ್ತಿದ್ದಾರೆ. 

Scientists developed New Ultrahard Glass and that can be used for phone screen Protector

ಹೊಸ ಮೊಬೈಲ್ (Mobile) ಖರೀದಿಸಿದವರು ಮೊದಲು ಮಾಡುವ ಕೆಲಸವೇನು ಗೊತ್ತಾ? ಆಫ್‌ಕೋರ್ಸ್,  ಸ್ಕ್ರೀನ್ ಗಾರ್ಡ್ (Screen guard) ಮತ್ತು ಬ್ಯಾಕ್ ಕವರ್‌ಗಳನ್ನು ಖರೀದಿಸೋದು ಅಲ್ಲವೇ? ಕೆಲವು ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್ (Smartphone) ಜತೆಗೆ ಈ ಎರಡೂ ಅಸೆಸ್ಸರೀಸ್‌ಗಳನ್ನು ನೀಡುತ್ತವೆ. ಅಂದರೆ, ಈ ಎರಡೂ ಸಾಧನಗಳು ಸ್ಮಾರ್ಟ್‌ಫೋನ್‌ಗಳಿಗೆ ತುಂಬ ಮುಖ್ಯ ಎನ್ನುವಂತಾಯಿತು. ಇದರಲ್ಲೇನೂ ಅನುಮಾನವಿಲ್ಲ. ಯಾಕೆಂದರೆ, ಹೊಸ ಸ್ಮಾರ್ಟ್‌ಫೋನ್‌ ಕೈಯಿಂದ ಜಾರಿ ಬಿದ್ದರೆ ಮೊದಲಿಗೆ ಒಡೆಯೋದು ಸ್ಕ್ರೀನ್. ಗ್ಲಾಸಿನಿಂದ ಮಾಡಲಾಗಿರುವ ಈ ಸ್ಕ್ರೀನ್ ಸ್ವಲ್ಪವೇ ಪೆಟ್ಟು ಬಿದ್ದರೂ ಸಾಕು ಒಡೆದು ಚೂರಾಗುತ್ತದೆ. ಹಾಗಾಗಿಯೇ ಎಲ್ಲರೂ ಸ್ಕ್ರೀನ್ ಗಾರ್ಡ್ ತೆಗೆದುಕೊಳ್ಳುತ್ತಾರೆ. ಒಂದು ವೇಳೆ, ಸ್ಕ್ರೀನ್ ಒಡೆಯದೇ ಇರುವಂಥದ್ದು ಬಂದರೆ ಹೇಗೆ? ಖಂಡಿತ ಆ ದಿನಗಳು ಬಹಳ ದೂರವಿಲ್ಲ ಎನ್ನಬಹುದು. ಯಾಕೆಂದರೆ, ಸಂಶೋಧಕರು ಎಂಥದ್ದೇ ಸಂದರ್ಭದಲ್ಲೂ ಒಡೆಯಲಾರದ ಫೋನ್ ಸ್ಕ್ರೀನ್ ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಈ ಗಾಜನ್ನು ಸ್ಮಾರ್ಟ್‌ಫೋನ್‌ಗಳಿಗೆ ಬಳಸಲು ಸಾಧ್ಯವಾದರೆ, ಹೊಸ ಫೋನ್ ಖರೀದಿ ಜತೆಗೆ ಸ್ಕ್ರೀನ್ ಗಾರ್ಡ್ ಕೂಡ ಖರೀದಿಸುವ ಅಗತ್ಯವೇ ಬೀಳದೇ ಇರಬಹುದು.

ಜಗತ್ತಿನಲ್ಲೇ ಅತಿ ಕಠಿಣ ಎನ್ನಬಹುದಾದ ಅಲ್ಟ್ರಾಹಾರ್ಡ್ (Ultrahard) ಕಾರ್ಬನ್ (Carbon) ಗ್ಲಾಸ್ ಅನ್ನು ಅಮೆರಿಕದ Carnegie Institution for Scienceನ  ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಜಗತ್ತಿನಲ್ಲಿ ಅತ್ಯಂತ ಕಠಿಣ ವಸ್ತು ಎಂದರೆ ಅದು ವಜ್ರ(Diamond). ಯಾಕೆಂದರೆ,, ಕಾರ್ಬನ್ ಆಧರಿತವಾಗಿರುವ ವಜ್ರವನ್ನು ನಿರ್ದಿಷ್ಟ ಪ್ಯಾಟರ್ನ್‌ನಲ್ಲಿ ಮಾಡುವುದರಿಂದ ಅದು ಜಗತ್ತಿನ ಅತಿ ಹಾರ್ಡ್ ವಸ್ತು ಎಂಬ ಕೀರ್ತಿಗೆ ಪಾತ್ರವಾಗಿದೆ. ಉಳಿದ ಕಾರ್ಬನ್ ಮಾದರಿ ಗಳೆಂದರೆ, ಗ್ರಾಫೈಟ್ (Graphite) ಎಂದು ಹೇಳಬಹುದು. ಆದರೆ, ವಜ್ರವನ್ನು ಬಳಸಿಕೊಂಡು ಗ್ಲಾಸ್ ಮಾಡುವುದು ತುಂಬ ವೆಚ್ಚದಾಯಕ ಎನಿಸಿಕೊಳ್ಳುತ್ತದೆ. ಹಾಗಾಗಿ, ಸಂಶೋಧಕರು ಟೊಳ್ಳಾದ ಚೆಂಡನ್ನು (hollow ball) ರೂಪಿಸಲು ಜೋಡಿಸಲಾದ 60 ಅಣುಗಳಿಂದ ಕೂಡಿದ ಇಂಗಾಲದ ರೂಪವನ್ನು ಬಳಸಿಕೊಂಡು ಸಂಶೋಧಕರು ಈ ನಿಟ್ಟಿನಲ್ಲಿ ಪ್ರಗತಿಯನ್ನು ಕಂಡಿದ್ದಾರೆ. ಒತ್ತಡದ ಮೂಲಕ ಇಂಗಾಲವನ್ನು ವಜ್ರದಂಥ ಸ್ಫಟಿಕಕ್ಕೆ ತಿರುಗಿಸುವ ಮೊದಲು, ಚೆಂಡು ತನ್ನದೇ ಆದ ಮೇಲೆ ಬೀಳಲು ಅನುಮತಿಸುವಷ್ಟು ಈ ವಸ್ತುವನ್ನು ಬಿಸಿಮಾಡಲಾಯಿತು. ಆ ನಂತರ ವಜ್ರದಂತಹ ಗಾಜನನ್ನು ಸಂಶ್ಲೇಷಿಸಲು ದೊಡ್ಡ ಪ್ರಮಾಣದ ಬಹು-ಅನ್ವಿಲ್ ಪ್ರೆಸ್ ಬಳಸಲಾಯಿತು. ಗಾಜಿನ ಪಾತ್ರವನ್ನು ನಿರೂಪಿಸಲು ಸಾಕಷ್ಟು ದೊಡ್ಡದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಪರಮಾಣು ರಚನೆಯನ್ನು ಪರೀಕ್ಷಿಸಲು ಹೆಚ್ಚಿನ ರೆಸಲ್ಯೂಶನ್ ತಂತ್ರಗಳು ಅದರ ಗುಣಲಕ್ಷಣಗಳನ್ನು ದೃಢಪಡಿಸಿದವು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

Mobile Launch: ಮುಂದಿನ ತಿಂಗಳು ಭಾರತದಲ್ಲಿ OnePlus RT ಬಿಡುಗಡೆ ಸಾಧ್ಯತೆ 

ಈ ಅಲ್ಟ್ರಾ ಹಾರ್ಡ್ ಗ್ಲಾಸ್ (Ultrahard Glass) ಸಂಶೋಧನಾ ತಂಡದ ಪ್ರಮುಖರಲ್ಲಿ ಒಬ್ಬರಾಗಿರುವ ಯೀಂಗ್ವೀ ಫೀ ಅವರು, ಇಂಥ ಅದ್ಭುತ ವಸ್ತುಗಳನ್ನು ಬಳಸಿಕೊಂಡು ಮಾಡಲಾಗುವ ಗ್ಲಾಸ್ ಹೊಸ ಅಪ್ಲಿಕೇಷನ್‌ಗಳಿಗೆ ದಾರಿ ತೆರೆಯಲಿದೆ. ಹೊಸ ಗಾಜಿನ ವಸ್ತುಗಳ ಬಳಕೆಯು ದೊಡ್ಡ ತುಂಡುಗಳನ್ನು ತಯಾರಿಸುವುದರ ಮೇಲೆ ಅವಲಂಬಿತವಾಗಿದ್ದು, ಹಿಂದೆ ಇದು ಬಹಳ ದೊಡ್ಡ ಸವಾಲುಮಯವಾಗಿತ್ತು. ಈಗ ಅಂಥ ಯಾವುದೇ ಸವಾಲುಗಳಿಲ್ಲ ಎನ್ನುತ್ತಾರೆ. ಅಂದರೆ, ಮುಂದಿ ಕೆಲವೇ ದಿನಗಳಲ್ಲಿ ಅಲ್ಟ್ರಾಹಾರ್ಡ್ (Ultrahard) ಗ್ಲಾಸ್ ಬಳಕೆಯು ಸಾಧ್ಯವಾಗಲಿದೆ. ಇದರಿಂದ ಅತ್ಯಂತ ಕಠಿಣ ಫೋನ್ ಸ್ಕ್ರೀನ್‌ಗಳನ್ನು ರಚಿಸಬಹುದಾಗಿದೆ.

ಅಲ್ಟ್ರಾ ಹಾರ್ಡ್ ಗ್ಲಾಸ್ ಇನ್ನೂ ಸಂಶೋಧನೆಯ ಹಂತದಲ್ಲಿದೆ. ಪರಿಪೂರ್ಣವಾಗಿ ಅಭಿವೃದ್ಧಿಯಾದರೆ ಖಂಡಿತವಾಗಿಯೂ ಮುಂಬರುವ ಫೋನ್‌ಗಳ ಸ್ಕ್ರೀನ್‌ಗಳು ಕಠಿಣವಾಗಿರಲಿವೆ. ಕೈಯಿಂದ ಫೋನು ಜಾರಿ ಬಿದ್ದರೂ ಒಡೆಯಲಾರವು .

Infinix Note 11S: ಭಾರತದಲ್ಲಿ ಶೀಘ್ರ ಲಾಂಚ್

Latest Videos
Follow Us:
Download App:
  • android
  • ios