Asianet Suvarna News Asianet Suvarna News

Mobile Launch: ಮುಂದಿನ ತಿಂಗಳು ಭಾರತದಲ್ಲಿ OnePlus RT ಬಿಡುಗಡೆ ಸಾಧ್ಯತೆ

ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್‌ಗಳ ಮೂಲಕ ತನ್ನದೇ ಆದ ಗ್ರಾಹಕವಲಯವನ್ನು ಹೊಂದಿರುವ ಒನ್‌ಪ್ಲಸ್ (OnePlus) ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಮುಂದಿನ ತಿಂಗಳು ಲಾಂಚ್ ಮಾಡುವ ಸಾಧ್ಯತೆ ಇದೆ. ಕಳೆದ ತಿಂಗಳು ಚೀನಾದಲ್ಲಿ ಬಿಡುಗಡಯಾಗಿದ್ದ ಒನ್‌ಪ್ಲಸ್ 9ಆರ್‌ಟಿ ಫೋನ್, ಭಾರತದಲ್ಲಿ ಒನ್‌ಪ್ಲಸ್ ಆರ್‌ಟಿ (OnePlus RT) ಹೆಸರಿನಲ್ಲಿ ಬಿಡುಗಡೆಯಾಗಲಿದೆಯೇ?

OnePlus RT likely to be launched in India on year end
Author
Bengaluru, First Published Nov 24, 2021, 5:11 PM IST

ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿರುವ ಒನ್‌ಪ್ಲಸ್ 9ಆರ್‌ಟಿ (OnePlus 9 RT) ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿದೆಯಾ? ಆನ್‌ಲೈನ್‌ ವೆಬ್‌ತಾಣಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ ಹೌದು. ಚೀನಾ ಮಾರುಕಟ್ಟೆಯಲ್ಲಿ  ಒನ್‌ಪ್ಲಸ್  9ಆರ್‌ಟಿ (OnePlus 9 RT) ಬ್ರ್ಯಾಂಡ್ ನೇಮ್‌ನಡಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಆರ್‌ಟಿ (OnePlus RT)  ಬ್ರ್ಯಾಂಡ್‌ನೇಮ್‌ನಡಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಇದರ ಜತೆಗೆ ಕಂಪನಿಯು ಒನ್‌ಪ್ಲಸ್ ಬಡ್ಸ್ ಜೆಡ್ 2 (OnePlus Buds Z 2) ಕೂಡ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಒನ್‌ಪ್ಲಸ್‌ನ ಈ ಹೊಸ ಫೋನು ಮುಂದಿನ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಒನ್‌ಪ್ಲಸ್ (OnePlus) ತನ್ನ ಪ್ರೀಮಿಯಂ ಸ್ಮಾರ್ಟ್‌ಪೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆ (Indian Smartphone Market) ಯಲ್ಲಿ ಬಹುದೊಡ್ಡ ಪಾಲನ್ನುಹೊಂದಿದೆ. ಇದೀಗ ಹೊಸ ಸ್ಮಾರ್ಟ್‌ಫೋನ್ ಮೂಲಕ ಮತ್ತೆ ಸದ್ದು ಮಾಡಲು ಮುಂದಾಗಿದೆ. ಇದರ ಜತೆಗೆ ಕಂಪನಿಯು ಒನ್‌ಪ್ಲಸ್ ಬಡ್ಸ್ ಜೆಡ್ 2 ಕೂಡ ಬಿಡುಗಡೆಯಾಗುತ್ತಿರುವುದು ಬಳಕೆದಾರರಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿರುವ ಒನ್‌ಪ್ಲಸ್ ಆರ್‌ಟಿ (OnePlus RT) ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಒನ್‌ಪ್ಲಸ್ ಆರ್‌ಟಿ ಟ್ರಿಪಲ್ ಕ್ಯಾಮೆರಾ, ಅಮೋಎಲ್ಇಡಿ ಡಿಸ್‌ಪ್ಲೇ ಮತ್ತು ಕ್ವಾಲಕಾಂ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆರ್‌ಗಳೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಹ್ಯಾಕರ್ ಬ್ಲ್ಯಾಕ್ (Hacker Black), ನ್ಯಾನೋ ಸಿಲ್ವರ್ (Nano Silver) ಬಣ್ಣಗಳ ಆಯ್ಕೆಯಲ್ಲಿ ಈ ಫೋನು ಮಾರಾಟಕ್ಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

Best Laptops for Students: 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ 

ಈಗಾಗಲೇ ತಿಳಿಸಿರುವಂತೆ ಒನ್‌ಪ್ಲಸ್ ಆರ್‌ಟಿ ಸ್ಮಾರ್ಟ್‌ಫೋನ್ 6.62 ಇಂಚ್ ಅಮೋಎಲ್ಇಡಿ ಡಿಸ್‌ಪ್ಲೇ, 12 ಜಿಬಿ ರ್ಯಾಮ್‌ನೊಂದಿಗೆ ಸಂಯೋಜಿತವಾಗಿರುವ Snapdragon 888 ಪ್ರೊಸೆಸರ್ ಇರಲಿದೆ. ಫೋನಿನಲ್ಲಿ 156 ಜಿಬಿ ಸ್ಟೋರೇಜ್ ಸಾಮರ್ಥ್ಯವಿರಲಿದೆ.  ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರಬಹುದು. ಮೂರು ಕ್ಯಾಮೆರಾಗಳ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಬಹುದು ಎಂದು ಹೇಳಲಾಗುತ್ತಿದೆ. ಉಳಿದ ಎರಡು ಕ್ಯಾಮೆರಾಗಳು 16 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳು ಇರಲಿವೆ. 

ಇನ್ನು ಸೆಲ್ಫಿ ಹಾಗೂ ವಿಡಿಯೋ ಕಾಲ್‌ ಮಾಡಲು ಒನ್‌ಪ್ಲಸ್ ಆರ್‌ಟಿ ಸ್ಮಾರ್ಟ್‌ಫೋನ್‌ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಬಹುದು. ಜೊತೆಗೆ, 65 ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 4,500 ಎಂಎಎಚ್ ಸಾಮರ್ಥ್ಯದ  ಬ್ಯಾಟರಿಯನ್ನು ಕಂಪನಿ ನೀಡಲಿದೆ. ಇಷ್ಟು ಮಾತ್ರವಲ್ಲದೇ ಅನೇಕ ಹೊಸ ಹೊಸ ಫೀಚರ್‌ಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ನಿರೀಕ್ಷಿಸಬಹುದಾಗಿದೆ.

ಒನ್‌ಪ್ಲಸ್ ಬಡ್ಸ್ ಜೆಡ್ 2 (OnePlus Buds Z2)  ಕೂಡ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಈ ಸಾಧನ ಕೂಡ ಒನ್‌ಪ್ಲಸ್ ಆರ್‌ಟಿ (OnePlus RT) ಸ್ಮಾರ್ಟ್‌ಫೋನ್ ಜತೆಗೆ ಮುಂದಿನ ತಿಂಗಳ ಭಾರತದಲ್ಲಿ ಬಿಡುಗಡೆಯಾಗಲಿದೆ.  11 ಎಂಎಂ ಡೈನಾಮಿಕ್ ಡ್ರೈವರ್, ಬ್ಲೂಟೂಥ್ ವಿ5.2 (Bluetooth V5.20) ಕನೆಕ್ಟಿವಿಟಿ ಹೊಂದಿರಲಿದೆ. ಜೊತೆಗೆ, ANC ಸಪೋರ್ಟ್ ಇರಲಿದೆ.  ಇವಿಷ್ಟು ಸೇರಿ ಇನ್ನು ಒಂದಿಷ್ಟು ಸಂಗತಿಗಳು ಇದೀಗ ಆನ್‌ಲೈನ್ ಸೋರಿಕೆಯಾಗಿವೆ. ಆದರೆ, ಈ ಸಾಧನ ಬಗ್ಗೆ ನಿಜವಾದ ವಿಶೇಷತೆಗಳು ಬಿಡುಗಡೆಯಾದ ಬಳಿಕವಷ್ಟೇ ಗೊತ್ತಾಗಲಿವೆ.

Whatsapp: ಯಾವ ಹೊಸ ಫೀಚರ್‌ ಅಭಿವೃದ್ಧಿಪಡಿಸತ್ತಿದೆ ವಾಟ್ಸಾಪ್?

Follow Us:
Download App:
  • android
  • ios