ಸ್ಯಾಮ್ಸಸಂಗ್ ಅಧಿಕೃತ ಆನ್ ಲೈನ್ ಸ್ಟೋರ್‌ಗಳಲ್ಲಿ ಲಭ್ಯ ಟಿವಿ ಖರೀದಿ ವೇಳೆ 20,000 ರಿಯಾಯಿತಿ  ಆಫರ್ ಏಪ್ರಿಲ್ 7-18 ರವರೆಗೆ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ

ನವದೆಹಲಿ(ಏ.12): ನಿಯೋ QLED TV ಅತ್ಯಾಧುನಿಕ 2022ರ ಸರಣಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರವೇ ಭಾರತದಲ್ಲಿ ದೊರೆಯಲಿದೆ. 2022 ರ ಏಪ್ರಿಲ್ 7-18 ರಿಂದ, ನಿಯೋ ಕ್ಯು ಎಲ್ ಇ ಡಿ 8ಕೆ ಮತ್ತು ನಿಯೋ ಕ್ಯು ಎಲ್ ಇ ಡಿ ಟೆಲಿವಿಷನ್ ಗಳನ್ನು ಸ್ಯಾಮ್ ಸಂಗ್ ನ ಅಧಿಕೃತ ಆನ್ ಲೈನ್ ಸ್ಟೋರ್‌ಗಳಲ್ಲಿ ಬುಕಿಂಗ್ ಮಾಡಿಕೊಳ್ಳಬುಹುದು.

ಬಳಕೆದಾರರು ನಿಯೋ ಕ್ಯು ಎಲ್ ಇ ಡಿ 8ಕೆ ಟಿವಿಯನ್ನು ರೂ 10,000 ಕ್ಕೆ ಮುಂಗಡ ಕಾಯ್ದಿರಿಸಬಹುದಾಗಿದೆ. ವಿಶೇಷ ಅಂದರೆ ಅಂತಿಮ ಖರೀದಿಯ ಸಮಯದಲ್ಲಿ ರೂ 20,000 ರಿಯಾಯಿತಿ ಪಡೆಯಬಹುದಾಗಿದೆ. ನಿಯೋ ಕ್ಯು ಎಲ್ ಇ ಡಿ ಟಿವಿಯನ್ನು ರೂ 5,000 ಕ್ಕೆ ಮುಂಗಡ ಕಾಯ್ದಿರಿಸಬಹುದಾಗಿದೆ. ಟಿವಿಯನ್ನು ಅಂತಿಮವಾಗಿ ಖರೀದಿಸುವಾಗ ರೂ 10,000 ರಿಯಾಯಿತಿ ದೊರೆಯಲಿದೆ.

6,000mAh ಬ್ಯಾಟರಿಯೊಂದಿಗೆ ಬಜೆಟ್‌ ಬೆಲೆಯಲ್ಲಿ Samsung Galaxy M33 5G ಭಾರತದಲ್ಲಿ ಲಾಂಚ್

ಎಲ್ಲೆಡೆಯೂ ಸ್ಕ್ರೀನ್ಸ್, ಎಲ್ಲರಿಗೂ ಸ್ಕ್ರೀನ್ಸ್’ ದೃಷ್ಟಿಕೋನದೊಂದಿಗೆ, ಸ್ಯಾಮ್ ಸಂಗ್ ನಿಯೋ ಕ್ಯು ಎಲ್ ಇ ಡಿ 8ಕೆ ಮತ್ತು ನಿಯೋ ಕ್ಯು ಎಲ್ ಇ ಡಿ ಟೆಲಿವಿಷನ್ ಗಳು ಗಾಢ ವೈಯಕ್ತೀಕರಣಕ್ಕಾಗಿ ಮತ್ತು ಸಂಪರ್ಕಕ್ಕಾಗಿ ತಡೆರಹಿತ ಸಂಪರ್ಕ ನೀಡಲಿದ್ದು, ಪ್ರತಿಯೊಬ್ಬರ ಸಂದರ್ಭ ಹಾಗೂ ಜೀವನಶೈಲಿಗೆ ಹೊಂದುವ ಸ್ಕ್ರೀನ್ ನೀಡಲಾಗುತ್ತಿದೆ.

ಹೊಚ್ಚ ಹೊಸ ನಿಯೋ ಕ್ಯು ಎಲ್ ಇ ಡಿ ಟಿವಿ ಶ್ರೇಣಿ ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನ ಪ್ರೋ, ರಿಯಲ್ ಡೆಪ್ತ್ ಎನ್ಹಾನ್ಸರ್, ಡಾಲ್ಬಿ ಅಟ್ಮಾಸ್, ಎಐ ಧ್ವನಿ ಬೆಂಬಲ, ಪೂರ್ವನಿರ್ಮಿತ ಹೋಂ ಐಓಟಿ ಇತ್ಯಾದಿಗಳಿಂದ ಸುಸಜ್ಜಿತವಾಗಿದೆ. ಈ ಟೆಲಿವಿಷನ್ ಗಳು ಸ್ಮಾರ್ಟ್ ಮತ್ತು ಇಂಟೆಲಿಜೆAಟ್ ವೈಶಿಷ್ಟ್ಯಗಳು ಮತ್ತು ಬಳಕೆದಾರರ ಇಂಟರ್‍ಫೇಸ್ ನೊಂದಿಗೆ ಲಭ್ಯವಿದೆ. ಇವೆಲ್ಲವೂ ಸ್ಯಾಮ್ ಸಂಗ್ ಟಿವಿಯನ್ನು ವೀಕ್ಷಣಾ ವಲಯ, ಸಾಧನಗಳ ನಿಯಂತ್ರಣ, ಆಟ ಆಡಲು, ವರ್ಕ್ ಔಟ್ ಇತ್ಯಾದಿಗಳಿಗೆ ಪ್ರಮುಖ ಕೇಂದ್ರವಾಗಿಸಿದೆ.

₹20,000-45,000 ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಮಾರುಕಟ್ಟೆ ಪಾಲು 40% ಕ್ಕೆ ಹೆಚ್ಚಿಸುವ ಗುರಿ: ಸ್ಯಾಮ್‌ಸಂಗ್

ಸ್ಯಾಮ್ಸಂಗ್‌ 600 ಮೆಗಾಪಿಕ್ಸೆಲ್‌ ಮೊಬೈಲ್‌ ಕ್ಯಾಮೆರಾ!
ನಮ್ಮ ಕಣ್ಣು ಗ್ರಹಿಸುವುದಕ್ಕಿಂತ ಹೆಚ್ಚು ನಿಖರವಾಗಿ ಎದುರಿನ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿರುವ 600 ಮೆಗಾಪಿಕ್ಸೆಲ್‌ ಮೊಬೈಲ್‌ ಕ್ಯಾಮೆರಾವನ್ನು ಪ್ರಸಿದ್ಧ ಮೊಬೈಲ್‌ ಉತ್ಪಾದಕ ಕಂಪನಿ ಸ್ಯಾಮ್ಸಂಗ್‌ ಸಿದ್ಧಪಡಿಸುತ್ತಿದೆ. ಕಂಪನಿಯ ಆಂತರಿಕ ಮಾಹಿತಿಗೆಂದು ಸಿದ್ಧಪಡಿಸಿದ ದಾಖಲೆಯೊಂದು ಸೋರಿಕೆಯಾಗಿದ್ದು, ಅದರಲ್ಲಿ ಈ ಅಂಶವಿದೆ.

ಸದ್ಯ ಮೊಬೈಲ್‌ಗಳಲ್ಲಿ 48, 64 ಹಾಗೂ 108 ಮೆಗಾಪಿಕ್ಸೆಲ್‌ವರೆಗಿನ ಕ್ಯಾಮೆರಾಗಳು ಬರುತ್ತಿವೆ. ಸ್ಯಾಮ್ಸಂಗ್‌ ಕಂಪನಿ ಇನ್ನಷ್ಟುಹೆಜ್ಜೆ ಮುಂದೆ ಹೋಗಿ 600 ಮೆಗಾಪಿಕ್ಸೆಲ್‌ ಮೊಬೈಲ್‌ ಕ್ಯಾಮೆರಾ ಸೆನ್ಸರ್‌ ಸಿದ್ಧಪಡಿಸುತ್ತಿದೆ. ನಮ್ಮ ಕಣ್ಣು ಸಾಮಾನ್ಯವಾಗಿ 500 ಮೆಗಾಪಿಕ್ಸೆಲ್‌ ಕ್ಯಾಮೆರಾದಷ್ಟುನಿಖರವಾಗಿ ಎದುರಿನ ದೃಶ್ಯಗಳನ್ನು ಗ್ರಹಿಸುತ್ತದೆ. ಹೀಗಾಗಿ ಸ್ಯಾಮ್ಸಂಗ್‌ ತಯಾರಿಸುತ್ತಿರುವ ಕ್ಯಾಮೆರಾ ನಮ್ಮ ಕಣ್ಣಿಗಿಂತ ಹೆಚ್ಚು ವಿವರಗಳನ್ನು ಗ್ರಹಿಸಲಿದೆ.

ಇಷ್ಟುಅಗಾಧ ಪ್ರಮಾಣದ ಮೆಗಾಪಿಕ್ಸೆಲ್‌ನ ಕ್ಯಾಮೆರಾ ಸೆನ್ಸರ್‌ ತಯಾರಿಸಿದರೆ ಅದನ್ನು ಮೊಬೈಲ್‌ ಫೋನ್‌ನಲ್ಲಿ ಅಳವಡಿಸುವುದು ಕಷ್ಟ. ಕ್ಯಾಮೆರಾವೇ ಮೊಬೈಲ್‌ ಫೋನ್‌ನ ಇಡೀ ದೇಹವನ್ನು ಆವರಿಸುತ್ತದೆ. ಹೀಗಾಗಿ ಅದರ ಗಾತ್ರ ಕಡಿಮೆ ಮಾಡಿ ಸಣ್ಣದಾದ 600 ಮೆಗಾಪಿಕ್ಸೆಲ್‌ ಕ್ಯಾಮೆರಾ ಸೆನ್ಸರ್‌ ತಯಾರಿಕೆಯಲ್ಲಿ ಸ್ಯಾಮ್ಸಂಗ್‌ ಕಂಪನಿಯ ವಿಜ್ಞಾನಿಗಳು ತೊಡಗಿದ್ದಾರೆಂದು ತಿಳಿದುಬಂದಿದೆ. ಕ್ಯಾಮೆರಾದಲ್ಲಿ ಮೆಗಾಪಿಕ್ಸೆಲ್‌ ಹೆಚ್ಚಾದಷ್ಟೂಚಿತ್ರದ ಗುಣಮಟ್ಟಹೆಚ್ಚುತ್ತದೆ.