ಮುಂಬೈ (ಅ.21): ಮೊಬೈಲ್ ಸೇವೆ ಒದಗಿಸುವ ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಈಗ 'ಆಲ್-ಇನ್-ಒನ್' ಪ್ಲಾನನ್ನು ಬಿಡುಗಡೆ ಮಾಡಿದೆ. 

ಹೊಸ ಪ್ಲಾನ್‌ಗಳು ಸರಳ ಹಾಗೂ ಗೊಂದಲರಹಿತವಾಗಿದ್ದು, ಎಲ್ಲ ಸೇವೆಗಳೂ ಒಂದೇ ಪ್ಲಾನ್‌ನಲ್ಲಿ ಲಭ್ಯವಿರುವುದರ ಜೊತೆಗೆ ಅವುಗಳ ದರವನ್ನು ನೆನಪಿಟ್ಟುಕೊಳ್ಳುವುದೂ ಸುಲಭವಾಗಿದೆ. ಅಪರಿಮಿತ ವಾಯ್ಸ್, ಎಸ್ಸೆಮ್ಮೆಸ್, ಆಪ್‌ಗಳ ಜೊತೆಗೆ ಪ್ರತಿದಿನ 2 ಜಿಬಿ ಡೇಟಾವನ್ನೂ ಈ ಪ್ಲಾನ್‌ಗಳು ಒಳಗೊಂಡಿವೆ.

ಮೂಲ ಪ್ಲಾನ್ ದರದ ಮೇಲೆ ಹೆಚ್ಚುವರಿಯಾಗಿ ಪಾವತಿಸುವ ಪ್ರತಿ ರೂ. 111 ಹೆಚ್ಚುವರಿ ಪಾವತಿಗೆ ಪ್ರತಿಯಾಗಿ ಗ್ರಾಹಕರು ಒಂದು ತಿಂಗಳ ಸೇವೆ ಪಡೆಯಬಹುದಾಗಿದೆ. ಅಂದರೆ, ಕೇವಲ ರೂ. 111ರಲ್ಲಿ ಒಂದು ತಿಂಗಳ ಸೇವೆ ಪಡೆದುಕೊಳ್ಳುವುದು ಈ ಮೂಲಕ ಸಾಧ್ಯವಾಗಲಿದೆ.

ಜಿಯೋ ಸದ್ಯ ನೀಡುತ್ತಿರುವ ದೈನಿಕ 1.5 ಜಿಬಿ ಪ್ಲಾನ್‌ನೊಡನೆ ಹೋಲಿಸಿದಾಗ:

ಸದ್ಯ ದೈನಿಕ 1.5 ಜಿಬಿ ಪ್ಲಾನ್‌ ಬಳಸುತ್ತಿರುವ ಗ್ರಾಹಕರಿಗೆ ಈ ಹೊಸ ಪ್ಲಾನ್‌ಗಳು ಒಂದು ರೂಪಾಯಿಗೆ ಒಂದು ಜಿಬಿಯಂತೆ ಹೆಚ್ಚುವರಿ ಡೇಟಾ ನೀಡಲಿವೆ. ಅಷ್ಟೇ ಅಲ್ಲದೆ, 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳೂ ಅವರಿಗೆ ಉಚಿತವಾಗಿ ದೊರಕಲಿವೆ. ಇದೇ ಸೌಲಭ್ಯವನ್ನು ಪ್ರತ್ಯೇಕವಾಗಿ ಖರೀದಿಸಿದ್ದಲ್ಲಿ ಅವರು ರೂ. 80 ವೆಚ್ಚ ಮಾಡಬೇಕಾಗುತ್ತಿತ್ತು.

ಉದಾಹರಣೆಗೆ, ರೂ. 399ರ 3 ತಿಂಗಳ ಪ್ಲಾನ್ ಜೊತೆಗೆ ಗ್ರಾಹಕರು ಇದೀಗ ರೂ. 45 ಹೆಚ್ಚುವರಿಯಾಗಿ ಪಾವತಿಸಲಿದ್ದು, ಪ್ರತಿ ಜಿಬಿಗೆ ಅಂದಾಜು ರೂ. 1ರಂತೆ 42 ಜಿಬಿ ಹೆಚ್ಚುವರಿ ಡೇಟಾ ಪಡೆಯಲಿದ್ದಾರೆ. ಇದರ ಜೊತೆಗೆ ಅವರು 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳನ್ನು - ಸುಮಾರು ರೂ. 80 ಶುಲ್ಕ ಪಾವತಿಸದೆಯೇ - ಪಡೆಯಲಿದ್ದಾರೆ.

ಇದನ್ನೂ ಓದಿ | ಜಿಯೋನಿಂದ ದೀಪಾವಳಿಗೆ 498 ರೂ. ಉಚಿತ ರೀಚಾರ್ಜ್!? ಆಫರ್ ಹೌದೋ? ಅಲ್ವೋ? #FactCheck...

ಜಿಯೋ ಸದ್ಯ ನೀಡುತ್ತಿರುವ ದೈನಿಕ 2 ಜಿಬಿ ಪ್ಲಾನ್‌ನೊಡನೆ ಹೋಲಿಸಿದಾಗ:

ಮೂರು ತಿಂಗಳ ದೈನಿಕ 2 ಜಿಬಿ ಪ್ಯಾಕ್ ಇದೀಗ ರೂ. 448ರ ಬದಲಿಗೆ ರೂ. 444ಕ್ಕೇ ಲಭ್ಯವಾಗಲಿದ್ದು, ಸುಮಾರು ರೂ. 80 ಮೌಲ್ಯದ 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳೂ ಹೆಚ್ಚುವರಿಯಾಗಿ ದೊರಕಲಿವೆ.

ಎರಡು ತಿಂಗಳ ಪ್ಲಾನ್ ಈ ಹಿಂದಿನ ದರವಾದ ರೂ. 396 (198x2) ಬದಲಿಗೆ ಇದೀಗ ರೂ. 333ಕ್ಕೆ ದೊರಕಲಿದೆ. ಇದರ ಜೊತೆಗೆ 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳು - ಸುಮಾರು ರೂ. 80 ಶುಲ್ಕ ಪಾವತಿಸುವ ಅಗತ್ಯವಿಲ್ಲದೆಯೇ - ಹೆಚ್ಚುವರಿಯಾಗಿ ದೊರಕಲಿವೆ.