ಜಿಯೋ ಗ್ರಾಹಕರಿಕೆ ಬಂಪರ್ ಆಫರ್, ಜಿಯೋಟಿವಿ ಪ್ರಿಮಿಯಂ ಪ್ಲಾನ್ ಪರಿಚಯಿಸಿದ ರಿಲಯನ್ಸ್!
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಪ್ರಿಮಿಯಂ ಪ್ಲಾನ್ ಪರಿಚಯಿಸಿದೆ. ಅನ್‌ಲಿಮಿಟೆಡ್ ಮನೋರಂಜನೆ, ಅನ್‌ಲಿಮಿಟೆಡ್ ಡೇಟಾ, ವಾಯ್ಸ್ ಕಾಲ್, SMS, ಒಟಿಟಿ ಸಬ್‌ಸ್ಕ್ರಿಪ್ಶನ್ ಸೇರಿದಂತೆ ಹಲವು ಸೌಲಭ್ಯಗಳು ಈ ಪ್ಲಾನ್‌ನಲ್ಲಿದೆ.
ಬೆಂಗಳೂರು(ಡಿ.16): ರಿಲಯನ್ಸ್ ಜಿಯೋ ಇದೀಗ ಮತ್ತೊಂದು ಹೊಸ ಪ್ಲಾನ್ ಮೂಲಕ ಗ್ರಾಹಕರಿಗೆ ಹಲವು ಆಫರ್ ನೀಡಿದೆ. ಇದೀಗ ಜಿಯೋ ತನ್ನ ಪ್ರೇಪೇಯ್ಡ್ ಗ್ರಾಹಕರಿಗೆ ಪ್ರಿಮಿಯಂ ಪ್ಲಾನ್ ಪರಿಚಯಿಸಿದೆ. ಜಿಯೋ ಪ್ರೀಪೇಯ್ಡ್ ಬಳಕೆದಾರರು ಈಗ ಜಿಯೋಟಿವಿ ಪ್ರೀಮಿಯಂ ಪ್ಲಾನ್ ಗಳ ಜತೆಗೆ ನಿರಂತರವಾದ ಹಾಗೂ ಕೊನೆಯಿಲ್ಲದ ಮನರಂಜನೆಯನ್ನು ಆನಂದಿಸಬಹುದು.ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಈ ಪ್ಲಾನ್ ನೊಂದಿಗೆ ಬರುತ್ತದೆ. ಇದರ ಮೂಲಕ ಅನಿಯಮಿತ ಡೇಟಾ, ಧ್ವನಿ, ಎಸ್ಸೆಮ್ಮೆಸ್ ಹಾಗೂ ಹದಿನಾಲ್ಕು ಪ್ರಮುಖ ಒಟಿಟಿ (ಓವರ್ ದಿ ಟಾಪ್)ಗಳಿಗೆ ಚಂದಾದಾರಿಕೆ ಪಡೆಯಬಹುದು. ಒಂದು ಸಾವಿರ ರೂಪಾಯಿ ಮೌಲ್ಯದ ಒಟಿಟಿ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ದೊರೆಯುತ್ತದೆ.
ಪ್ಲಾನ್ ಗಳು ತಿಂಗಳಿಗೆ 398 ರೂಪಾಯಿಯೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ ಹದಿನಾಲ್ಕು ಒಟಿಟಿಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋಗಳು ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮಂಟ್ ನಲ್ಲಿ ವಾರ್ಷಿಕ ಪ್ಲಾನ್ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್ ಬೆಂಬಲ ಸಹ ದೊರೆಯುತ್ತದೆ.
ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್, ಅತೀ ಕಡಿಮೆ ಬೆಲೆಗೆ ಅನ್‌ಲಿಮಿಡೆಟ್ 5G ಡೇಟಾ, 14 OTT ಸಬ್‌ಸ್ಕ್ರಿಪ್ಶನ್
ಯಾವ್ಯಾವ ಆಪ್ ಗಳು ದೊರೆಯುತ್ತವೆ?
ರಾಷ್ಟ್ರೀಯ ಆ್ಯಪ್: ಜಿಯೋಸಿನಿಮಾ ಪ್ರೀಮಿಯಂ, ಡಿಸ್ನಿ+ ಹಾಟ್ ಸ್ಟಾರ್, ಝೀ5, ಸೋನಿಲಿವ್
ಅಂತಾರಾಷ್ಟ್ರೀಯ ಆ್ಯಪ್: ಪ್ರೈಮ್ ವಿಡಿಯೋ (ಮೊಬೈಲ್), ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಡಾಕ್ಯುಬೇ
ಪ್ರಾದೇಶಿಕ ಆ್ಯಪ್: ಸನ್ ನೆಕ್ಸ್ಟ್, ಹೊಯ್ ಚೊಯ್, ಪ್ಲಾನೆಟ್ ಮರಾಠಿ, ಚೌಪಾಲ್, ಎಪಿಕ್ ಆನ್, ಕಂಚಾ ಲಂಕಾ
ಇದೊಂದು ಪ್ಲಾನ್ ಖರೀದಿಸಿದವರಿಗೆ ವಿವಿಧ ಒಟಿಟಿಗಳಿಗೆ ಸಬ್ ಸ್ಕ್ರೈಬ್ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಹಲವು ಲಾಗಿನ್ ಐಡಿ ಬೇಕು, ಪ್ರತಿ ಆಪ್ ಗೂ ಪ್ರತ್ಯೇಕವಾಗಿ ಪಾಸ್ ವರ್ಡ್ ಬೇಕು ಅಂತಿಲ್ಲ. ಒಂದೇ ಕಡೆಗೆ ಎಲ್ಲ ವಿವಿಧ ಕಂಟೆಂಟ್ ಗಳು ದೊರೆಯುತ್ತದೆ. ಇನ್ನು ಗ್ರಾಹಕರು ತಮಗೆ ಬೇಕಾದ ಕಂಟೆಂಟ್ ಹುಡುಕುವುದು ಸಹ ಸುಲಭವಾಗಿದ್ದು, ಶಿಫಾರಸಿಗಾಗಿಯೇ ಉತ್ತಮವಾದ ಹುಡುಕಾಟದ ಎಂಜಿನ್ ವ್ಯವಸ್ಥೆ ಇದೆ. ಅದೇ ರೀತಿ ಗ್ರಾಹಕರು ತಮ್ಮ ಆದ್ಯತೆಯಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲಾನ್ ಗಳ ವ್ಯಾಲಿಡಿಟಿಯನ್ನು ಆರಿಸಿಕೊಳ್ಳಬಹುದು. ಒಂದೇ ಕ್ಲಿಕ್ ನಲ್ಲಿ ಕಸ್ಟಮರ್ ಕೇರ್ ಕಾಲ್ ಬ್ಯಾಕ್ ಸೇವೆ ಲಭ್ಯ ಇದ್ದು, ವಾರ್ಷಿಕ ಪ್ಲಾನ್ ರೀಚಾರ್ಜ್ ಗೆ ಇಎಂಐ ಸೌಲಭ್ಯ ಸಹ ದೊರೆಯಲಿದೆ.
ಜಿಯೋ ಏರ್‌ಫೈಬರ್‌ಗೆ ಬೂಸ್ಟರ್ ಪ್ಲಾನ್ ಘೋಷಿಸಿದ ಆಕಾಶ್ ಅಂಬಾನಿ, ಅತ್ಯಂತ ಕಡಿಮೆ ದರಕ್ಕೆ 1000GB ಡೇಟಾ ಲಭ್ಯ!
ಪ್ರೀಮಿಯಂ ಒಟಿಟಿ ಕಂಟೆಂಟ್ ಬಳಸುವುದು ಹೇಗೆ?
• ಮೊದಲಿಗೆ ಜಿಯೋಟಿವಿ ಪ್ರೀಮಿಯಂನ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡಬೇಕು
• ಅದೇ ಜಿಯೋ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಜಿಯೋ ಟಿವಿ ಆಪ್ ಗೆ ಸೈನ್ ಇನ್ ಆಗಬೇಕು
• ಜಿಯೋಟಿವಿ ಪ್ರೀಮಿಯಂ ಟ್ಯಾಬ್ ಮೂಲಕವಾಗಿ ಪ್ರೀಮಿಯಂ ಒಟಿಟಿ ಆಪ್ ಕಂಟೆಂಟ್ ಅನ್ನು ಆನಂದಿಸಬಹುದು
• ಪ್ರತ್ಯೇಕವಾದ ಲಾಗಿನ್ ಅಥವಾ ಪಾಸ್ ವರ್ಡ್ ಅಗತ್ಯ ಇಲ್ಲ.
• ಬಳಕೆದಾರರ ಮೈಜಿಯೋ ಕೂಪನ್ ವಿಭಾಗದಲ್ಲಿ ದೊರೆಯುವ ಕೂಪನ್ ಮೂಲಕವಾಗಿ ಜಿಯೋಸಿನಿಮಾ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. ಪ್ರೀಮಿಯಂ ಕಂಟೆಂಟ್ ಬೇಕು ಅಂತಾದಲ್ಲಿ ಜಿಯೋಸಿನಿಮಾ ಆಪ್ ನಲ್ಲಿ ಕೂಪನ್ ರಿಡೀಮ್ ಮಾಡಬೇಕು.
• ತಮ್ಮ ಬಳಿ ಇರುವಂಥ ಆಯಾ ಆಪ್ ಮೂಲಕವಾಗಿ ಪ್ರೈಮ್ ವಿಡಿಯೋ (ಮೊಬೈಲ್) ಮತ್ತು ಡಿಸ್ನಿ+ ಹಾಟ್ ಸ್ಟಾರ್ ಕಂಟೆಂಟ್ ಗಳನ್ನು ನೋಡಬಹುದು.
• ಮೈಜಿಯೋ ಮೂಲಕ ಬಳಕೆದಾರರು ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಸಕ್ರಿಯಗೊಳಿಸಬೇಕಾಗುತ್ತದೆ. ಆಪ್ ಗೆ ಲಾಗಿನ್ ಆಗುವಾಗ ಡಿಸ್ನಿ+ ಹಾಟ್ ಸ್ಟಾರ್ ಆಕ್ಟಿವೇಟ್ ಆಗುತ್ತದೆ.