Asianet Suvarna News

ಜೂಮ್ ಬಿಟ್ಟು ಮೀಟ್ ಆಗೋಣ ಬನ್ನಿ ಎಂದ ರಿಲಾಯನ್ಸ್!

ಎಲ್ಲವೂ ಆನ್‌ಲೈನ್ ಆಗಿರುವ ಈ ಸಂದರ್ಭದಲ್ಲಿ ಕಚೇರಿ ಕೆಲಸಕ್ಕೆ, ಮೀಟಿಂಗ್, ವಿಡಿಯೋ ಕಾನ್ಫರೆನ್ಸ್, ತರಗತಿಗಳಿಗೆ ಸುಲಭವಾಗುವಂತೆ ಹೊಸ ಹೊಸ ಆ್ಯಪ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಸುರಕ್ಷತೆ. ಬಗ್ಗೆ ಜನರು ಚಿಂತಿಸುತ್ತಿರುವ ಸಮಯದಲ್ಲಿ ರಿಲಾಯನ್ಸ್ ಗ್ರಾಹಕರಿಗೆ ಜಿಯೋ ಮೀಟ್‌ನ್ನು ಸದ್ಯದಲ್ಲೇ ಪರಿಚಯಿಸುವುದಾಗಿ ಹೇಳಿಕೊಂಡಿದೆ. ಉತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಈ ಆ್ಯಪ್ ಕಚೇರಿ ಕೆಲಸಕ್ಕಷ್ಟೇ ಅಲ್ಲದೇ ತರಗತಿಗಳನ್ನು ಮಾಡಲು ಉಪಯುಕ್ತ ಎಂದು ಹೇಳಲಾಗಿದೆ.

Reliance is competing with Zoom!
Author
Bangalore, First Published May 4, 2020, 4:34 PM IST
  • Facebook
  • Twitter
  • Whatsapp

ಲಾಕ್‌ಡೌನ್ ಅಂತೂ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಕೊರೋನಾ ಬಂದ ಮೇಲೆ ಎಲ್ಲ ಚಟುವಟಿಕೆ ಬಹುತೇಕ ನಿಂತಿವೆ. ಆದರೆ, ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆಹೋಗಿದ್ದರಿಂದ ಆ ವೃತ್ತಿಯಲ್ಲಿರುವವರಿಗೆ ಕೆಲಸ ಎಂಬುದು ಇದೆ. ಆದರೆ, ಅದಕ್ಕೆ ಬೇಕಾದ ಮೂಲಸೌಕರ್ಯ ಬಹುತೇಕ ಕಂಪನಿಗಳಲ್ಲಿ ಇಲ್ಲದಿದ್ದರಿಂದ ಖಾಸಗೀ ಆ್ಯಪ್‌ಗಳ ಮೊರೆ ಹೋಗುವುದು ಸಹಜ. ಹೀಗೆ ಮೊದಲಿಗೆ ವೀರಾವೇಶದಿಂದ ಜನಪ್ರಿಯತೆ ಪಡೆದು ನಂತರ ಅಷ್ಟೇ ವೇಗವಾಗಿ ಹ್ಯಾಕರ್ಸ್‌ಗಳ ದಾಳಿಗೆ ತುತ್ತಾಗಿ ಕಳಂಕಹೊತ್ತುಕೊಂಡಿರುವ ಜೂಮ್ ಆ್ಯಪ್‌ಗೆ ಕೊನೆಗೂ ಪರ್ಯಾಯಗಳು ಹುಟ್ಟಿಕೊಳ್ಳಲಾರಂಭಿಸಿವೆ.

ಈಗ ಬದಲಿ ಆ್ಯಪ್‌ಗಳತ್ತ ಬಹುತೇಕರು ಮುಖಮಾಡುತ್ತಿದ್ದು, ಗೂಗಲ್, ವಾಟ್ಸ್‌ಆ್ಯಪ್ ಸೇರಿದಂತೆ ಅನೇಕ ಕಂಪನಿಗಳ ಆ್ಯಪ್‌ಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಈಗ ವಿಡಿಯೋ ಕಾಲಿಂಗ್, ಕಾನ್ಫರೆನ್ಸ್ ಸೌಲಭ್ಯದೊಂದಿಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಮತ್ತಷ್ಟು ಪ್ರಾಬಲ್ಯ ಹೊಂದಲು ರಿಲಾಯನ್ಸ್ ಮುಂದಾಗಿದೆ. ಇದಕ್ಕಾಗಿ ಹೊಸ ಆ್ಯಪ್‌ ಅನ್ನು ಹೊರತರಲು ಮುಂದಾಗಿದೆ. ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರದಿಂದಾಗಿ ದಿಗ್ಗಜ ಕಂಪನಿಗಳನ್ನೇ ತತ್ತರಿಸುವಂತೆ ಮಾಡಿರುವ ರಿಲಾಯನ್ಸ್ ಈಗ ಈ ಹೊಸ ಆ್ಯಪ್‌ನಲ್ಲಿ ಏನು ಮೋಡಿ ಮಾಡಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ. 

ಇದನ್ನು ಓದಿ: ವೋಡಾಫೋನ್-ಐಡಿಯಾ ಡೇಟಾ ಡಬಲ್ ಧಮಾಕಾ

ಜಿಯೋ ಮೀಟ್
ಮನೆಯಿಂದಲೇ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳಿಗೆ ಮೀಟಿಂಗ್‌ಗೆ, ವಿಡಿಯೋ ಕಾನ್ಫರೆನ್ಸ್‌ಗಳಿಗೆ ಯಾವುದೇ ಅಡಚಣೆ ಇಲ್ಲದೆ ಅನುಕೂಲವಾಗುವಂತಹ ಆ್ಯಪ್ ಬೇಕೇ ಬೇಕು. ಇದರ ಸಂಪೂರ್ಣ ಲಾಭವನ್ನು ಪಡೆಯಲು ಮುಂದಾಗಿರುವ ರಿಲಾಯನ್ಸ್ ಜೂಮ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಜಿಯೋ ಮೀಟ್ ಆ್ಯಪ್‌ ಅನ್ನು ಸದ್ಯದಲ್ಲೆ ಪರಿಚಯಿಸಲು ಮುಂದಾಗಿದೆ. ಅಷ್ಟೇ ಅಲ್ಲದೆ, ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿರುವುದಾಗಿಯೂ ಹೇಳಿಕೊಂಡಿದೆ. ಈ ಮೂಲಕ ಜೂಮ್‌ಗೆ ನೇರವಾಗಿಯೇ ಸೆಡ್ಡು ಹೊಡೆಯಲು ಮುಂದಾಗಿದೆ. 

100 ಜನರಿಗೆ ಅವಕಾಶ
ಜೂಮ್‌ನಲ್ಲಿ ಒಮ್ಮೆಲೆ 100 ಜನ ವಿಡಿಯೋ ಕಾನ್ಫರೆನ್ಸ್ ಮಾಡುವ ಅವಕಾಶವಿತ್ತು. ಇದೇ ಇದರ ಪ್ಲಸ್ ಪಾಯಿಂಟ್ ಆಗಿದ್ದರಿಂದ ಬಹುತೇಕರು ಈ ಆ್ಯಪ್ ಅನ್ನು ಡೌನ್ ಮಾಡಿಕೊಂಡಿದ್ದಲ್ಲದೆ, ತಮ್ಮ ಹತ್ತಿರದವರಿಗೂ ಬಳಸಲು ಸೂಚಿಸಿದ್ದರು. ಹೀಗೆ ಏಕಾಏಕಿ ಪ್ರಸಿದ್ಧಿಯನ್ನು ಪಡೆಯಲು ಅನುಕೂಲವಾಯಿತು. ಆದರೆ, ಈಗ ಇದೇ ಮಾದರಿಯಲ್ಲಿ ಹೆಜ್ಜೆ ಇಟ್ಟಿರುವ ರಿಲಾಯನ್ಸ್ ಒಮ್ಮೆಗೆ ನೂರು ಜನರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಹೀಗಾಗಿ ಇದು ಸಹಜವಾಗಿಯೇ ಜನರನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. 

ಇದನ್ನು ಓದಿ: ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!

ಎಲ್ಲ ಆಪರೇಟಿಂಗ್ ಸಿಸ್ಟಮ್‌ಗೂ ಸಪೋರ್ಟ್ ಮಾಡುತ್ತೆ
ಈ ಆ್ಯಪ್‌ನ್ನು ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸಲು ಸುಲಭವಾಗುವಂತೆ ಡಿಸೈನ್ ಮಾಡಲಾಗಿದೆ. ಲ್ಯಾಪ್‌ಟಾಪ್, ಡೆಸ್ಕ್ ಟಾಪ್ ಸೇರಿದಂತೆ ಎಲ್ಲ ಆಪರೇಟಿಂಗ್ ಸಿಸ್ಟಮ್‌ಗಳಲ್ಲೂ ಇದನ್ನು ಬಳಸಲು ಸುಲಭವಾಗುವಂತೆ ತಯಾರಿಸಲಾಗಿದೆ. 

ಆನ್‌ಲೈನ್ ಆರೋಗ್ಯ ತಪಾಸಣೆ 
ಇದರ ವಿಶೇಷತೆಯೆಂದರೆ ಈ ಆ್ಯಪ್‌ನ ವಿಡಿಯೋ ಕಾನ್ಪರೆನ್ಸ್, ಜಿಯೋನ ಇ-ಹೆಲ್ತ್ ಕೇರ್ ಸೇವೆಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಆನ್‌ಲೈನ್‌ನಲ್ಲಿ ಆರೋಗ್ಯ ತಪಾಸಣೆ ಹಾಗೂ ಟೆಲಿಮೆಡಿಸಿನ್ ಸೌಲಭ್ಯವಿದೆ ಎಂದಿರುವುದು ಗಮನಾರ್ಹ ಅಂಶವಾಗಿದೆ.

ತರಗತಿಗಳಿಗೆ ಅನುಕೂಲ ವೇದಿಕೆ 
ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸತ್ತಾದರೂ, ಸುರಕ್ಷತಾ ದೃಷ್ಟಿಯಿಂದ ಮಕ್ಕಳ ಪಾಲಕರು ಈ ಬಗ್ಗೆ ಭಯಬೀತರಾಗಿದ್ದರು. ಈಗ ಅದಕ್ಕೆ ಸುರಕ್ಷತೆಯೊಂದಿಗೆ ಬರುತ್ತಿರುವ ಈ ಆ್ಯಪ್‌ ವಿದ್ಯಾರ್ಥಿ ಸ್ನೇಹಿಯಾಗಿದೆ. ಶಿಕ್ಷಕರು ತರಗತಿಗಳಲ್ಲಿ ಪಾಠ ಮಾಡುವಂತೆಯೆ ಇಲ್ಲಿ ಸೆಟ್ಟಿಂಗ್ಸ್ ಮಾಡಿಕೊಳ್ಳ ಬಹುದಾಗಿದೆ. ಮಕ್ಕಳಿಗೂ ತರಗತಿಯಲ್ಲಿಯೇ ಪಾಠ ಕೇಳಿದ ಅನುಭವ ಕೊಡುವುದಾಗಿ ರಿಲಯನ್ಸ್ ಹೇಳಿಕೊಂಡಿದೆ.

ಇದನ್ನು ಓದಿ: ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!

ಫೋನ್‌ನಲ್ಲೂ ಆ್ಯಕ್ಸೆಸ್ ಮಾಡಿ 
ನೀವು ಈ ಆನ್‌ಲೈನ್ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ನಲ್ಲಿ ಮಾತ್ರವಲ್ಲದೆ, ಮೊಬೈಲ್‌ನಲ್ಲೂ ವೀಕ್ಷಿಸಬಹುದಾಗಿದೆ. ಅಲ್ಲದೆ, ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳದೆಯೂ ಬಳಸಲು ಅವಕಾಶವಿದ್ದು, ಕ್ರೋಮ್ ಮೂಲಕ ಸುಲಭವಾಗಿ ಬಳಕೆ ಮಾಡಬಹುದಾಗಿದೆ.

Follow Us:
Download App:
  • android
  • ios