ನಾಲ್ಕೂವರೆ ಸಾವಿರ ರೂಪಾಯಿ ರೆಡ್‌ಮಿ ಗೋ; ಗುಣಮಟ್ಟಕ್ಕೆ ಹೋಲಿಸಿದರೆ ಬೆಸ್ಟ್ ಬೈ
ರೆಡ್‌ಮಿ ಗೋ; ಗುಣಮಟ್ಟಕ್ಕೆ ಹೋಲಿಸಿದರೆ ಬೆಸ್ಟ್ ಬೈ| ಕಡಿಮೆ ಬೆಲೆಗೆ ಒಳ್ಳೆಯ ಫೋನ್ ಕೊಳ್ಳಬೇಕು ಎನ್ನುವವರ ಪಾಲಿಗೆ ರೆಡ್‌ಮಿ ಗೋ ಒಳ್ಳೆಯ ಆಯ್ಕೆ| ನಾಲ್ಕೂವರೆ ಸಾವಿರ ರೂಪಾಯಿಗೆ ಸಿಗುವ ಈ ಫೋನ್ ಕೊಳ್ಳಲು 5 ಕಾರಣಗಳಿವೆ...
ಒಂದು ಜಿಬಿ ರ‍್ಯಾಮ್, 8 ಜಿಬಿ ರಾಮ್ ಡಿಸ್ಕ್, 8 ಮೆಗಾಫಿಕ್ಸೆಲ್ ಕೆಮರಾ, 5 ಮೆಗಾಫಿಕ್ಸೆಲ್ ಫ್ರಂಟ್ ಕೆಮರಾ, ಎರಡು ಸಿಮ್‌ಕಾರ್ಡ್, 3000 ಎಂಎಚ್ ಬ್ಯಾಟರಿ!
ಸಣ್ಣ ಫೋನ್. ಕಳೆದುಕೊಂಡರೂ ಭಯವಿಲ್ಲ. ಮುಷ್ಟಿಯೊಳಗೆ ಹಿಡಿಸುವ ಗಾತ್ರ. ಕೈ ಜಾರಿ ಬೀಳುವ ಸಾಧ್ಯತೆ ಕಡಿಮೆ.
ಶಯೋಮಿ ರೆಡ್‌ಮಿ ಗೋ ಫೋನಿನ ಮಜವೇ ಇದು. ಇದರ ಬೆಲೆ ಕೂಡ ತೀರಾ ಕಡಿಮೆ. ಫೋನಿನ ಕವರ್‌ಪ್ರೈಸ್ 6,999 ರುಪಾಯಿ ಅಂತಿದ್ದರೂ, ಆನ್‌ಲೈನಿನಲ್ಲಿ ನಿಮಗಿದು ನಾಲ್ಕೂವರೆ ಸಾವಿರ ರುಪಾಯಿಗೆ ಲಭ್ಯ.
ರೆಡ್‌ಮಿ ಗೋ ಸ್ಮಾರ್ಟ್‌ಫೋನಿನ ಹಲವು ಸೌಲಭ್ಯಗಳನ್ನು ಕಿತ್ತೆಸೆದಿದೆ. ಇದೊಂಥರ ಎಂಟ್ರಿ ಲೆವೆಲ್ ಫೋನ್. ಮೂಲಭೂತವಾದ ಕೆಲವು ಸೌಲಭ್ಯಗಳನ್ನು ಬಿಟ್ಟರೆ, ಇದೇ ಕಂಪೆನಿ ನಂತರದ ಫೋನುಗಳಲ್ಲಿ ಅಳವಡಿಸಿಕೊಂಡಿದ್ದ ಒಂದಷ್ಟುಫೀಚರ್‌ಗಳನ್ನು ತೆಗೆದಿದೆ. ಹೀಗಾಗಿ ಕಾಲದ ಪ್ರವಾಹದಲ್ಲಿ ಒಂದಷ್ಟುಹಿಂದಕ್ಕೆ ಹೋಗಬೇಕು ಅನ್ನುವವರಿಗೆ ಇದು ದಿ ಬೆಸ್ಟ್. ಆದರೆ 48 ಮೆಗಾಫಿಕ್ಸೆಲ್ ಕೆಮರಾ ಇದು ರೆಡ್‌ಮಿ ನೋಟ್ 7 ಪ್ರೊ ಮಾರುಕಟ್ಟೆಯಲ್ಲಿರುವ ಹೊತ್ತಲ್ಲೇ 8 ಮೆಗಾಫಿಕ್ಸೆಲ್ ಕೆಮರಾದ ರೆಡ್‌ಮಿ ಗೋ ಮಾರುಕಟ್ಟೆಗೆ ಬಂದಿರುವುದು ಆಶ್ಚರ್ಯಕರ.
ಬಿಡುಗಡೆಗೂ ಮುನ್ನ Redmi K20 ಡೀಟೆಲ್ಸ್ ಲೀಕ್! ಇಲ್ಲಿದೆ ಫೋನ್ ವಿವರ
ಈಗಾಗಲೇ ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಂಪೆನಿಗಳ ಎಂಟ್ರಿ ಲೆವೆಲ್ ಫೋನುಗಳು ಹೊಸ ಹೊಸ ಆವಿಷ್ಕಾರಗಳನ್ನು ಹೊತ್ತುಕೊಂಡು ಕಾಲಿಟ್ಟಿವೆ. ಇದಕ್ಕಿಂತ ಪೊಗದಸ್ತಾದ ಫೋನುಗಳೂ ಬಂದಿವೆ. ಅಂಥದ್ದರ ಮಧ್ಯೆ ರೆಡ್‌ಮಿಗೋ ಯಾಕೆ ಅಂತ ಕೇಳುವವರಿಗೆ ಉತ್ತರ ಇಲ್ಲಿದೆ.
1. ಇದು ಕಡಿಮೆ ಬೆಲೆಯ ಫೋನ್ ಆದರೂ ಹಾಗನ್ನಿಸುವುದಿಲ್ಲ. ಥಟ್ಟನೆ ನೋಡಿದವರು ದುಬಾರಿ ಫೋನ್ ಇರಬೇಕು ಅಂದುಕೊಳ್ಳುವಷ್ಟುಚೆನ್ನಾಗಿದೆ. ಪ್ಲಾಸ್ಟಿಕ್ ಮೈಕಟ್ಟೇ ಆದರೂ ಅದನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿದೆ. ಕಳಪೆಯಾಗಿ ಕಾಣುವುದಿಲ್ಲ.
2. ಮೇಲೂ ಕೆಳಗೂ ಕೊಂಚ ಅಗಲವಾದ ಅಂಚು, ಬದಿಯಲ್ಲಿ ತೆಳುವಾದ ಅಂಚು ಹೊಂದಿರುವ ಪೋನ್ ಥಟ್ಟನೆ ಐಫೋನ್ ಫೈವ್ ಥರ ಕಾಣಿಸುತ್ತದೆ. ಕಪ್ಪುಬಣ್ಣದ ಹೊಳೆಯುವ ಅಂಚು, ಕೈಗೆ ಕೂಡಲೇ ನಿಲುಕುವ ಬಟನ್‌ಗಳು ಅನುಕೂಲಕರವಾಗಿವೆ.
3. ಐದಿಂಚಿನ ಫೋನ್ ಇದು. 16:9 ಸ್ಕ್ರೀನ್ ಹೊಂದಿದೆ. ಈಗ ಬರುತ್ತಿರುವ 18:9 ಸ್ಕ್ರೀನಿಗೆ ಹೋಲಿಸಿದರೆ ಇದು ಚಿಕ್ಕದು. ಆದರೆ ಚೊಕ್ಕವೂ ಹೌದು.
4. ಎರ‚ಡು ನ್ಯಾನೋ ಸಿಮ್. ಒಂದು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಬಹುದು.
5. ಕಪ್ಪು ಮತ್ತು ಹೊಳೆಯುವ ನೀಲಿ ಬಣ್ಣದಲ್ಲಿ ಸಿಗುತ್ತದೆ.
ಈ ಪೋನಿನಲ್ಲಿ ಸಣ್ಣಪುಟ್ಟಕೊರತೆಗಳೂ ಇವೆ. ಬಟನ್‌ಗಳಿಗೆ ಬ್ಯಾಕ್‌ಲೈಟ್ ಇಲ್ಲ. ಫೋನನ್ನು ಕೆಳಗಿಟ್ಟರೆ ಕ್ಯಾಮರಾದ ಲೆನ್ಸ್ ನೆಲಕ್ಕೆ ತಾಗುವಂತಿದೆ. ಅದಕ್ಕೆ ಪ್ರೊಟೆಕ್ಷನ್ ಇಲ್ಲ. ಫಿಂಗರ್‌ಪ್ರಿಂಟ್ ಅನ್‌ಲಾಕ್ ಇದ್ದಂತಿಲ್ಲ.
48 ಮೆಗಾಪಿಕ್ಸೆಲ್ Redmi Note 7S ಭಾರತಕ್ಕೆ ಎಂಟ್ರಿ ದಿನಾಂಕ ಫಿಕ್ಸ್!
ಅಂದಹಾಗೆ ಇದರ ಬ್ಯಾಟರಿ ಚೆನ್ನಾಗಿದೆ. ಒಂದೂವರೆ ದಿನ ಬಾಳಬಹುದು. ಸಿನಿಮಾ ನೋಡುವುದಕ್ಕೆ ಹೇಳಿಮಾಡಿಸಿದ ಸ್ಕ್ರೀನ್ ಅಲ್ಲ, ಝೂಮ್ ಇನ್ ವೇಗ ಸಾಧಾರಣ. ಕ್ಯಾಮರಾದ ಗುಣಮಟ್ಟವೂ ಅಷ್ಟೇ. ಫೋಟೋಗಳು ಬಣ್ಣಗೆಡುವ ಸಾಧ್ಯತೆಯೂ ಉಂಟು.