ಜೇಬಿಗೆ ‘ಭಾರವಲ್ಲದ’ ಕಾರಣ ಫ್ಲ್ಯಾಗ್‌ಶಿಪ್ ಕಿಲ್ಲರ್ ಎಂದೇ ಕರೆಯಲ್ಪಡುತ್ತಿರುವ Xiaomiಯ ಹೊಸ ಫೋನ್ Redmi K20ಯ ಸ್ಪೆಸಿಫಿಕೇಶನ್ಸ್ ಮತ್ತು ಫೀಚರ್ಸ್ ಸೋರಿಕೆಯಾಗಿವೆ ಎಂದು ವರದಿಯಾಗಿದೆ.

ಸೋರಿಕೆಯಾಗಿರುವ ಮಾಹಿತಿ ಪ್ರಕಾರ  Redmi K20ಯು 6.39 ಇಂಚಿನ HD ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ ಹೊಂದಿದೆ.

Qualcomm Snapdragon 855 ಚಿಪ್‌ಸೆಟ್ ಹೊಂದಿರುವ Redmi K20 ಸ್ಮಾರ್ಟ್‌ಫೋನ್ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಪಾಪ್ ಅಪ್ ಕ್ಯಾಮೆರಾ ಹೊಂದಿದೆ.  ಹಿಂಬದಿಯಲ್ಲಿ 48, 20, ಹಾಗೂ 8 ಮೆಗಾಪಿಕ್ಸೆಲ್‌ನ 3 ಕ್ಯಾಮೆರಾಗಳಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ |  ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

27W ರ‍್ಯಾಪಿಡ್ ಜಾರ್ಜಿಂಗ್ ವ್ಯವಸ್ಥೆ ಹೊಂದಿರುವ 4000mAh ಸಾಮರ್ಥ್ಯ ಇರುವ ಬ್ಯಾಟರಿ ಇದೆ. ಇನ್ನೊಂದು ವರದಿ ಪ್ರಕಾರ, Redmiಯು K20 ಮತ್ತು K20 Pro ಎಂಬ ಎರಡು ಆವೃತ್ತಿಗಳನ್ನು ಬಿಡುಗಡೆಮಾಡಲಿದೆ. 

64GB+6GB RAM, 128GB+6GB RAM, 128GB+8GB RAM, ಮತ್ತು 256GB+8GB RAM ವೇರಿಯಂಟ್ ನಲ್ಲಿ ಈ ಫೋನ್ ಗಳು ಲಭ್ಯವಿರಲಿವೆ.