ಫ್ಲಿಪ್‌ಕಾರ್ಟ್ ಕ್ಯಾಶ್ ಆನ್ ಡೆಲಿವರಿ ಮತ್ತಷ್ಟು ಸುಲಭ; ಫೋನ್‌ಪೇಯಿಂದ QR Code ಸ್ಕ್ಯಾನ್!
- ಗ್ರಾಹಕರಿಗೆ ಕ್ಯಾಶ್ ಆನ್ ಡೆಲಿವರಿ ಮತ್ತಷ್ಟು ಸುಲಭ ಹಾಗೂ ಸುರಕ್ಷಿತ
- ಕ್ಯೂಆರ್‌ಕೋಡ್ ಸ್ಕಾನ್ ಮೂಲಕ ಹಣ ಪಾವತಿಗೆ ಪೋನ್‌ಪೇ ಒಪ್ಪಂದ
ನವದೆಹಲಿ(ಜು.05) : ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್‌ಪೇ( PhonePe), ಇದೀಗ ಫ್ಲಿಪ್‌ಕಾರ್ಟ್(Flipkart) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಪೇ ಆನ್ ಡೆಲಿವರಿ ಆರ್ಡರ್‌ಗೆ ಪಾವತಿಗೆ ಕ್ಯೂಆರ್‌ಕೋಡ್ ಸ್ಕಾನ್ ಪೇಮೆಂಟ್ ಆರಂಭಿಸಿದೆ. ಈ ಮೂಲಕ ಗ್ರಾಹಕರು ಕ್ಯಾಶ್ ಆನ್ ಡೆಲವರಿಯಲ್ಲಿ ಯಾವುದೇ ಆತಂಕವಿಲ್ಲದೆ ಹಣ ಪಾವತಿ ಮಾಡಬಹುದು.
PhonePeಯಿಂದ ಭಾರತದ ಮೊದಲ ಆಟೋ ಟಾಪ್ ಅಪ್ ವ್ಯಾಲೆಟ್ ಬಿಡುಗಡೆ!.
PhonePe ಡೈನಾಮಿಕ್ ಕ್ಯೂಆರ್ ಕೋಡ್ ಪರಿಹಾರವು ಗ್ರಾಹಕರಿಗೆ ಡೆಲಿವರಿ ಸಮಯದಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ ಮೂಲಕ ಡಿಜಿಟಲ್ ಪಾವತಿಸಲು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಲು ಅನುಮತಿಸುತ್ತದೆ. ವೈಯಕ್ತಿಕ ಸಂಪರ್ಕದ ಅಪಾಯವನ್ನು ಕಡಿಮೆ ಮಾಡಿ ಸುರಕ್ಷತೆ ಖಾತರಿಪಡಿಸಲು ಇದು ಸಹಾಯ ಮಾಡುತ್ತದೆ.
UPI ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಿಂದ ಡಿಜಿಟಲ್ ಪೇಮೆಂಟ್ ಸ್ವೀಕಾರವು ವ್ಯಾಪಕವಾಗಿದೆ. ಆದಾಗ್ಯೂ, ಕೆಲವು ಗ್ರಾಹಕರು ಡೆಲಿವರಿಯ ಸಮಯದಲ್ಲಿ ನಗದು-ಡೆಲಿವರಿ ಆರಿಸಿಕೊಳ್ಳುತ್ತಾರೆ. ಈ ನಗದು ಆಧಾರಿತ ಪಾವತಿಗಳ ಡಿಜಿಟಲೀಕರಣವು ಇ-ಕಾಮರ್ಸ್ ಮಾರುಕಟ್ಟೆಯನ್ನು ಹೆಚ್ಚಿಸುವುದಲ್ಲದೆ, ಡಿಜಿಟಲ್ ಇಂಡಿಯಾದ ಬೃಹತ್ ಗುರಿಯನ್ನು ಸಾಧಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಫ್ಲಿಪ್‌ಕಾರ್ಟ್ ನೊಂದಿಗೆ ನಮ್ಮ ಸಹಭಾಗಿತ್ವವು ಡೆಲಿವರಿ ಸಮಯದಲ್ಲಿ ಪಾವತಿಸುವ ಗ್ರಾಹಕರಿಗೆ ಸಂಪರ್ಕವಿಲ್ಲದ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸಲು ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಪರಿಹಾರವು ಗ್ರಾಹಕರಿಗೆ ನಿರಂತರ ಮತ್ತು ಸಂಪರ್ಕವಿಲ್ಲದ ಪಾವತಿ ಅನುಭವವನ್ನು ಒದಗಿಸುತ್ತದೆ ಮತ್ತು ಇ-ಕಾಮರ್ಸ್ ಹಾಗೂ ಲಾಜಿಸ್ಟಿಕ್ಸ್ ಕಂಪನಿಗಳಿಗೆ ನಗದು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು PhonePe ಬಿಸಿನೆಸ್ ನಿರ್ದೇಶಕ ಅಂಕಿತ್ ಗೌರ್ ಹೇಳಿದರು.
ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ 6 ವರ್ಷ, ಇನ್ನು ರೂರಲ್ ಇಂಡಿಯಾ ಕಡೆ ಹೆಜ್ಜೆ
Flipkart ಫಿನ್‌ಟೆಕ್ ಮತ್ತು ಪೇಮೆಂಟ್ ಸಮೂಹದ ಮುಖ್ಯಸ್ಥ ರಂಜಿತ್ ಬೋಯನಪಲ್ಲಿ ಅವರು, “ಇ-ಕಾಮರ್ಸ್ ಮಾರುಕಟ್ಟೆ ಮತ್ತು ಡಿಜಿಟಲ್ ಪೇಮೆಂಟ್‌ಗಳು ಒಂದೇ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ, ಗ್ರಾಹಕರ ಹೆಚ್ಚುತ್ತಿರುವ ಅಗತ್ಯತೆಗಳನ್ನು ಪೂರೈಸುವುದು ಕಡ್ಡಾಯವಾಗಿದೆ ಎಂದು ಹೇಳಿದರು. ಜತೆಗೆ ಇತ್ತೀಚಿನ ಪ್ಯಾಂಡಮಿಕ್ ನಿಂದಾಗಿ ಅನೇಕ ಗ್ರಾಹಕರು ಆನ್‌ಲೈನ್ ಶಾಪಿಂಗ್‌ನತ್ತ ಕಾಲಿಡುವಂತೆ ಮಾಡಿದ್ದು, ಆದರೆ ಚೆಕ್ ಔಟ್ ಸಮಯದಲ್ಲಿ ಕೆಲವು ವಿಶ್ವಾಸಾರ್ಹ ಕೊರತೆ ಇದೆ. ಆದ್ದರಿಂದ ‘ಪೇ ಆನ್ ಡೆಲಿವರಿʼ ತಂತ್ರಜ್ಞಾನದೊಂದಿಗೆ, ಗ್ರಾಹಕರು ತಮ್ಮ ಪೇಮೆಂಟ್ ಬಗ್ಗೆ ಯಾವುದೇ ಭಯ ಇಲ್ಲದೇ, ನಿಶ್ಚಿಂತೆಯಿಂದ ಇರಬೇಕು ಎಂದು ನಾವು ಬಯಸುತ್ತೇವೆ. ಅಲ್ಲದೇ ಅವರ ಮನೆಯ ಸುರಕ್ಷತೆಯೊಂದಿಗೆ ಶಾಪಿಂಗ್ ಮಾಡಬಹುದು ಎಂದು ತಿಳಿಸಿದ್ದಾರೆ.