ಡಿಜಿಟಲ್ ಇಂಡಿಯಾ ಅಭಿಯಾನದಿಂದ ಬದಲಾದ ಭಾರತ ವಿಶ್ವದ ಇತರ ರಾಷ್ಟ್ರಗಳನ್ನು ಹಿಂದಿಕ್ಕಿ  ಹೊಸ ಅಧ್ಯಾಯ ಬರೆದ ಭಾರತ ರೂರಲ್ ಇಂಡಿಯಾ ಮೂಲಕ ಗ್ರಾಮಗಳ ಬಲಪಡಿಸುವಿಕೆಗೆ ಒತ್ತು   

ನವದೆಹಲಿ(ಜು.01): ಭಾರತದ ಡಿಜಿಟಲ್ ಇಂಡಿಯಾ ಅಭಿಯಾನ 6 ವರ್ಷ ಪೂರೈಕೆ ಮಾಡಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಫಲಾನುಭವಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ಮೋದಿ ಭಾರತ ಹೇಗೆ ಡಿಜಿಟಲ್ ಇಂಡಿಯಾ ಮೂಲಕ ಮಹತ್ತರ ಬದಲಾವಣೆ ತಂದಿದೆ ಎಂದು ವಿವರಿಸಿದ್ದಾರೆ. 

ಗ್ರಾಮೀಣ ಜನರಿಗೆ ಮೋದಿಯಿಂದ ಹೊಸ ಆರ್ಥಿಕ ಭದ್ರತೆ, ಪ್ರಾಪರ್ಟಿ ಕಾರ್ಡ್!..

ಡಿಜಿಟಲ್ ಇಂಡಿಯಾ ಅಭಿಯಾನದಿಂದ ಕಳೆದ 6 ವರ್ಷದಲ್ಲಿ ಭಾರತದ ಆಡಳಿತದಲ್ಲಿ ಮಹತ್ವದ ಬದಲಾಣೆಯಾಗಿದೆ. ಇದರಿಂದ ಫಲಾನುಭವಿಗಳಿಗೆ ಸುಲಭವಾಗಿ ಹಾಗೂ ಯಾವುದೇ ಅಡೆ ತಡೆ ಇಲ್ಲದೆ ಸೌಲಭ್ಯಗಳು ಸಿಗುವಂತಾಗಿದೆ ಎಂದು ಮೋದಿ ಹೇಳಿದರು. ಡಿಜಿಟಲ್ ಇಂಡಿಯಾದಿಂದ ಫಲಾನುಭವಿಗಳ ಖಾತೆ ನೇರವಾಗಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿದೆ. ಹೀಗಾಗಿ ಸರ್ಕಾರದ ಸೌಲಭ್ಯ ಒಂದು ರೂಪಾಯಿ ಮೋಸವಾಗದೆ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಮೋದಿ ಹೇಳಿದ್ದಾರೆ.

Scroll to load tweet…

ಯುಪಿಐ ಮೂಲಕ ಕನಿಷ್ಠ 5 ಲಕ್ಷ ರೂಪಾಯಿ ಹಣ ಪ್ರತಿ ದಿನ ವರ್ಗಾವಣೆಯಾಗುತ್ತಿದೆ. ಒನ್ ನೇಶನ್, ಒನ್ ರೇಶನ್ ಯೋಜನೆ ಜಾರಿಗೊಳಿಸಲು ಡಿಜಿಟಲ್ ಇಂಡಿಯಾ ನೆರವಾಗಿದೆ. ಕೊರೋನಾ ಸಂದರ್ಭದಲ್ಲೂ ಡಿಜಿಟಲ್ ಇಂಡಿಯಾ ನರವಾಗಿದೆ. ಆರೋಗ್ಯ ಸೇತು ಸೇರಿದಂತೆ ಆ್ಯಪ್‌ಗಳಿಂದ ಟೆಸ್ಟ್, ಟ್ರೇಸಿಂಗ್ ಸೇರಿದಂತೆ ಹಲವು ಉಪಯುಕ್ತತೆ ಸಿಕ್ಕಿದೆ.

ಮೋದಿಯ 'ಟೆಕ್' ಟಾಕ್ ಹಿಂದಿನ ರಹಸ್ಯವೇನು?

ಇನ್ನು ಕೋವಿನ್ ಆ್ಯಪ್‌ನಿಂದ ದೇಶದ ಲಸಿಕಾ ಅಭಿಯಾನದ ಪ್ರತಿ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿದೆ. ಎಲ್ಲವೂ ಆನ್‌ಲೈನ್ ಆಗಿದೆ. ವಿದ್ಯಾರ್ಥಿಗಳು ಡಿಜಿಟಲ್ ಇಂಡಿಯಾ ಪ್ರಯೋಜನ ಪಡೆದಿದ್ದಾರೆ. ಕೋಟ್ಯಾಂರ ಮಂದಿ ಪ್ರತಿ ದಿನ ಡಿಜಿಟಲ್ ಇಂಡಿಯಾ ಅವಲಂಬಿಸಿದ್ದಾರ ಎಂದು ಮೋದಿ ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಡಿಜಿಲಾಕರ್ ಉತ್ತಮ ಉದಾಹರಣೆಯಾಗಿದೆ. ಶಾಲೆ - ಕಾಲೇಜು ದಾಖಲೆಗಳು, ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿ ಮುಂತಾದ ಎಲ್ಲಾ ಪ್ರಮುಖ ದಾಖಲೆಗಳನ್ನು ಈಗ ಡಿಜಿಲಾಕರ್‌ನಲ್ಲಿ ಸುಲಭವಾಗಿ ಮತ್ತು ಸುರಕ್ಷಿತವಾಗಿ ಸಂಗ್ರಹಿಸಬಹುದು.

Scroll to load tweet…

ಡಿಜಿಟಲ್ ವಹಿವಾಟು ರೈತರ ಜೀವನದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳನ್ನು ನೇರವಾಗಿ 1 ಲಕ್ಷ 35 ಕೋಟಿ ರೂ.ಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಈ ವರ್ಷ ಸುಮಾರು 85,000 ಕೋಟಿ ರೂ. ಗೋಧಿ ಸಂಗ್ರಹವು ನೇರವಾಗಿ ರೈತರ ಬ್ಯಾಂಕ್ ಖಾತೆಗಳನ್ನು ತಲುಪಿದೆ. ಇಲ್ಲಿಯವರೆಗೆ, ದೇಶದ ರೈತರು ಇಎನ್‌ಎಎಂ ಪೋರ್ಟಲ್‌ನಿಂದ 1 ಲಕ್ಷ 35 ಸಾವಿರ ಕೋಟಿಗಿಂತ ಹೆಚ್ಚು ಮೌಲ್ಯದ ವಹಿವಾಟು ನಡೆಸಿದ್ದಾರೆ.ಈ ದಶಕವು ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಮತ್ತು ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಲಿದೆ. ಹೀಗಾಗಿ ಭಾರತ ಟೆಕೇಡ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಯಶಸ್ವಿಯಾಗಿದೆ. ಇದೀಗ ರೂರಲ್ ಇಂಡಿಯಾ ಅಂದರೆ ಗ್ರಾಮಗಳ ಸಬಲೀಕರಣದತ್ತ ಹೆಜ್ಜೆ ಇಡಬೇಕಿದೆ.