ಒನ್‌ವೆಬ್‌ ಇಂಟರ್ನೆಟ್‌ ಸೇವೆ ಭಾರತದಲ್ಲಿ ದುಬಾರಿ: ಏರ್‌ಟೆಲ್‌ ಮುಖ್ಯಸ್ಥ ಮಿತ್ತಲ್‌

ಭಾರತದಲ್ಲಿ ಸದ್ಯ ಇಂಟರ್ನೆಟ್‌ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ. ಹೀಗಾಗಿ ಉಪಗ್ರಹಗಳಿಂದ ಪಡೆಯುವ ಇಂಟರ್ನೆಟ್‌ ಬೆಲೆಯು ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಾಗಲಿದೆ. ಒಂದು ಹಳ್ಳಿಯ 30, 40 ಮನೆಗಳು ಸೇರಿ ಒಂದು ಕನೆಕ್ಷನ್‌ ಪಡೆದರೆ ಬೆಲೆ ಅಗ್ಗವಾಗಲಿದೆ. ಆದರೆ ವೈಯಕ್ತಿಕವಾಗಿ ಕೊಂಡುಕೊಳ್ಳುವುದು ದುಬಾರಿ ಆಗಲಿದೆ’ ಎಂದರು.

oneweb can match mobile service rates of west not indias sunil mittal ash

ನವದೆಹಲಿ (ಮಾರ್ಚ್‌ 27, 2023): ಉಪಗ್ರಹದಿಂದ ಭೂಮಿಗೆ ವೈರ್‌ಲೆಸ್‌ ಇಂಟರ್ನೆಟ್‌ ಸೇವೆ ಒದಗಿಸುವ ಬ್ರಿಟನ್ನಿನ ಒನ್‌ವೆಬ್‌ ಕಂಪನಿಯ ಸೇವೆಯು ಭಾರತದಲ್ಲಿ ದುಬಾರಿ ಆಗಲಿದೆ ಎಂದು ಏರ್‌ಟೆಲ್‌ ಮುಖ್ಯಸ್ಥ ಸುನೀಲ್‌ ಭಾರತಿ ಮಿತ್ತಲ್‌ ಹೇಳಿದ್ದಾರೆ. ಭಾರತದಲ್ಲಿನ ಒನ್‌ವೆಬ್‌ ಸೇವೆಯನ್ನು ಏರ್‌ಟೆಲ್‌ ಒದಗಿಸಲಿದೆ. 

ಈ ನಿಮಿತ್ತ ಒನ್‌ವೆಬ್‌ನ 36 ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಮಿತ್ತಲ್‌, ‘ಭಾರತದಲ್ಲಿ ಸದ್ಯ ಇಂಟರ್ನೆಟ್‌ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ. ಹೀಗಾಗಿ ಉಪಗ್ರಹಗಳಿಂದ ಪಡೆಯುವ ಇಂಟರ್ನೆಟ್‌ ಬೆಲೆಯು ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಾಗಲಿದೆ. ಒಂದು ಹಳ್ಳಿಯ 30, 40 ಮನೆಗಳು ಸೇರಿ ಒಂದು ಕನೆಕ್ಷನ್‌ ಪಡೆದರೆ ಬೆಲೆ ಅಗ್ಗವಾಗಲಿದೆ. ಆದರೆ ವೈಯಕ್ತಿಕವಾಗಿ ಕೊಂಡುಕೊಳ್ಳುವುದು ದುಬಾರಿ ಆಗಲಿದೆ’ ಎಂದರು.

ಇದನ್ನು ಓದಿ: ಒನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಉಡಾವಣೆಗೊಳಿಸಲಿರುವ ಇಸ್ರೋ: ವಿಶೇಷತೆ ಹೀಗಿದೆ..

ಆದರೆ ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಇಂಟರ್ನೆಟ್‌ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿ ಉಪಗ್ರಹ ಇಂಟರ್ನೆಟ್‌ ಸೇವೆ ಖರೀದಿ ದೊಡ್ಡ ವ್ಯತ್ಯಾಸವೇನು ಕಂಡು ಬರುವುದಿಲ್ಲ ಎಂದರು.

36 ಒನ್‌ವೆಬ್‌ ಉಪಗ್ರಹ ಯಶಸ್ವಿ ಉಡಾವಣೆ
ಶ್ರೀಹರಿಕೋಟಾ: ಉಪಗ್ರಹದಿಂದ ಭೂಮಿಯ ಯಾವುದೇ ಭಾಗಕ್ಕೆ ವೈರ್‌ಲೆಸ್‌ ರೂಪದಲ್ಲಿ ಇಂಟರ್ನೆಟ್‌ ಸೇವೆ ಒದಗಿಸುವ ಬ್ರಿಟನ್ನಿನ ಒನ್‌ವೆಬ್‌ ಕಂಪನಿಯ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ 36 ಉಪಗ್ರಹಗಳನ್ನು ಯಶಸ್ವಿಯಾಗಿ ಅವುಗಳ ನಿಗದಿತ ಕಕ್ಷೆಗೆ ಸೇರಿಸಿದೆ. ಇಸ್ರೋದ ಅತಿದೊಡ್ಡ ರಾಕೆಟ್‌ ಆಗಿರುವ ಎಲ್‌ವಿಎಂ3 ಮೂಲಕ ಏಕಕಾಲಕ್ಕೆ ಇಷ್ಟೂ ಉಪಗ್ರಹಗಳನ್ನು ಉಡಾಯಿಸಲಾಗಿದ್ದು, ತನ್ಮೂಲಕ ಇಸ್ರೋದ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಿದೆ.

ಇದನ್ನೂ ಓದಿ: ಪ್ರೀ ಇನ್‌ಸ್ಟಾಲ್ಡ್‌ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಅಂಕುಶ..? ಮೊಬೈಲ್‌ ಕಂಪನಿಗಳಿಗೆ ಶೀಘ್ರ ಮೂಗುದಾರ..!

ಬೆಳಗ್ಗೆ 9 ಗಂಟೆಗೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 43.5 ಮೀಟರ್‌ ಎತ್ತರದ ರಾಕೆಟ್‌ ಉಡಾಯಿಸಲಾಯಿತು. ಕೆಲವೇ ಸಮಯದಲ್ಲಿ ಅದು ತಾನು ಹೊತ್ತೊಯ್ದಿದ್ದ 36 ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆ ಮಾಡಿತು.

ಒನ್‌ವೆಬ್‌ ಕಂಪನಿಯು ಈ ಹಿಂದೆ ಇಸ್ರೋ ಜೊತೆ 72 ಉಪಗ್ರಹಗಳನ್ನು ಹಾರಿಬಿಡಲು ಒಪ್ಪಂದ ಮಾಡಿಕೊಂಡಿತ್ತು. 2022ರ ಅಕ್ಟೋಬರ್‌ನಲ್ಲಿ ಮೊದಲ 36 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು. ಈಗ ಇನ್ನುಳಿದ 36 ಉಪಗ್ರಹಗಳನ್ನೂ ಉಡಾವಣೆ ಮಾಡಲಾಗಿದ್ದು, ಅದರೊಂದಿಗೆ ಒನ್‌ವೆಬ್‌ ಹಾಗೂ ಇಸ್ರೋ ನಡುವಿನ ಒಪ್ಪಂದ ಪೂರ್ಣಗೊಂಡಂತಾಗಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

ವರ್ಷಾಂತ್ಯಕ್ಕೆ ಇಂಟರ್ನೆಟ್‌ ಸೇವೆ:
ಉಪಗ್ರಹದಿಂದ ಇಂಟರ್ನೆಟ್‌ ಸೇವೆ ಒದಗಿಸುವ ಯೋಜನೆಯಡಿ ಒನ್‌ವೆಬ್‌ ಕಂಪನಿ ಜಗತ್ತಿನ ಬೇರೆ ಬೇರೆ ದೇಶಗಳಿಂದ 616 ಉಪಗ್ರಹಗಳನ್ನು ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಜಗತ್ತಿನಾದ್ಯಂತ ಈ ವರ್ಷಾಂತ್ಯಕ್ಕೆ ಉಪಗ್ರಹ ಇಂಟರ್ನೆಟ್‌ ಸೇವೆ ಆರಂಭಿಸಲು ಇಷ್ಟುಉಪಗ್ರಹಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ. ಭಾರತದಲ್ಲಿ ಏರ್‌ಟೆಲ್‌ ಕಂಪನಿಯು ಒನ್‌ವೆಬ್‌ ಅಂತರ್ಜಾಲ ಸೇವೆ ಒದಗಿಸುವ ಹೊಣೆ ವಹಿಸಿಕೊಂಡಿದೆ.

ಸೋಮನಾಥ್‌ ಸಂತಸ:
ಒನ್‌ವೆಬ್‌ ಉಪಗ್ರಹಗಳ ಯಶಸ್ವಿ ಕಕ್ಷೆ ಸೇರ್ಪಡೆಗೆ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್‌ವಿಎಂ3 ರಾಕೆಟ್‌ನಲ್ಲಿನ ತಂತ್ರಜ್ಞಾನವನ್ನೇ ಗಗಗನಯಾನದ ರಾಕೆಟ್‌ನಲ್ಲೂ ಬಳಸಲಾಗಿದೆ. ಹೀಗಾಗಿ ಗಗನಯಾನಕ್ಕೂ ಇದರಿಂದ ವಿಶ್ವಾಸ ಮೂಡಿದಂತಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲ್‌ ಆದ ChatGPT: ನೆಟ್ಟಿಗರಿಂದ ಸಖತ್‌ ಟ್ರೋಲ್‌

Latest Videos
Follow Us:
Download App:
  • android
  • ios