ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ
ನಿರುಪಯುಕ್ತ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಇಳಿಸಿದ್ದು, ಪೆಸಿಫಿಕ್ ಸಾಗರದಲ್ಲಿ ನಿಯಂತ್ರಿತವಾಗಿ ಪತನ ಮಾಡಲಾಗಿದೆ.
ನವದೆಹಲಿ (ಮಾರ್ಚ್ 8, 2023): ಅಂತರಿಕ್ಷದಲ್ಲಿ ನಿರುಪಯುಕ್ತವಾಗಿರುವ ಉಪಗ್ರಹವೊಂದನ್ನು ಮರಳಿ ಭೂ ವಾತಾವರಣಕ್ಕೆ ತಂದು ಸಾಗರದಲ್ಲಿ ಬೀಳಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಯಶಸ್ವಿಯಾಗಿದೆ. ಅತ್ಯಂತ ಸವಾಲಿನ ಪ್ರಯೋಗವನ್ನು ಈ ಮೂಲಕ ಯಶಸ್ವಿಯಾಗಿ ನಿಭಾಯಿಸಿದೆ.
ಮೇಘ ಟ್ರಾಪಿಕ್ಸ್-1 (Megha-Tropiques-1) ಹೆಸರಿನ ಈ 1 ಟನ್ ಭಾರದ ಉಪಗ್ರಹದಲ್ಲಿದ್ದ (Satellite) 125 ಕೆಜಿಯಷ್ಟು ಇಂಧನ (Fuel) ದಹಿಸುವ ಮೂಲಕ ಮಂಗಳವಾರ ಸಂಜೆ 4.32 ಹಾಗೂ 6.32ಕ್ಕೆ 2 ಬಾರಿ ಕಕ್ಷೆ ಬದಲಿಸುವ ಪ್ರಕ್ರಿಯೆ ಜೊತೆಗೆ ಅದನ್ನು ಭೂಮಿಯ (Earth) ಅತ್ಯಂತ ಸಮೀಪದ ಆಗಸದ ಸ್ಥಳಕ್ಕೆ ತರಲಾಯಿತು. ಬಳಿಕ ಬೀಳಿಸುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಪೆಸಿಫಿಕ್ ಸಾಗರದಲ್ಲಿ (Pacific Ocean) ಜನವಸತಿ ಇಲ್ಲದ ಪ್ರದೇಶದಲ್ಲಿ ಉಪಗ್ರಹ ಬೀಳಿಸಲಾಗಿದೆ.
ಇದನ್ನು ಓದಿ: ಇಂದು ಉಪಗ್ರಹ ಬೀಳಿಸುವ ಕಸರತ್ತು: ಫೆಸಿಫಿಕ್ ಸಾಗರದಲ್ಲಿ ಪತನಕ್ಕೆ ಇಸ್ರೋ ಭಾರಿ ಸಾಹಸ
ಉಷ್ಣ ವಲಯದ ವಾತಾವರಣ ಹಾಗೂ ಹವಾಮಾನ ಅಧ್ಯಯನ ನಡೆಸಲು ಫ್ರಾನ್ಸ್‌ನ (France) ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್ (CNES) ಜತೆಗೂಡಿ ಇಸ್ರೋ (ISRO) 2011ರ ಅಕ್ಟೋಬರ್ 12ರಂದು ಮೇಘ ಟ್ರಾಪಿಕ್ಸ್-1 ಎಂಬ ಕೆಳ ಭೂಕಕ್ಷೆ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಅದರ ಜೀವಿತಾವಧಿ ಮೂರು ವರ್ಷಗಳಾಗಿತ್ತು. ಆದರೂ ಅವಧಿ ಮೀರಿ ಉಪಗ್ರಹ ಒಂದು ದಶಕ ಸೇವೆ ಸಲ್ಲಿಸಿತ್ತು. ಇತ್ತೀಚೆಗೆ ಅದು ನಿರುಪಯುಕ್ತವಾಗಿತ್ತು. ಹೀಗಾಗಿ ನಿಯಂತ್ರಿತ ವಿಧಾನ ಅನುಸರಿಸಿ ಅದನ್ನು ಸುರಕ್ಷಿತ ಜಾಗದಲ್ಲಿ ಪತನಗೊಳಿಸಲಾಗಿದೆ.
ಇದನ್ನೂ ಓದಿ: ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು