ಉಚಿತ ಊಟ ಇಲ್ಲ, ಮನೆಯಿಂದ ಕೆಲಸ ಬೇಕಿಲ್ಲ: ಟ್ವಿಟರ್ ಸಿಬ್ಬಂದಿಗೆ ಮಸ್ಕ್ ಸೂಚನೆ
* ಕಚೇರಿಗೆ ಬರಲು ನಿರಾಕರಿಸುವ ಉದ್ಯೋಗಿಗಳ ರಾಜೀನಾಮೆ ಅಂಗೀಕರಿಸಲು ಮಸ್ಕ್ ಸೂಚನೆ
*ಟ್ವಿಟರ್ ಆದಾಯ ಮತ್ತು ಭವಿಷ್ಯದ ದೃಷ್ಟಿಯಿಂದ ಕಠಿಣ ನಿರ್ಧಾರ ಅತ್ಯಗತ್ಯ ಎನ್ನುತ್ತಾರೆ ಮಸ್ಕ್
*ಎಲ್ಲ ಪರ್ಕ್ಸ್ ಮತ್ತು ಸೌಲಭ್ಯಗಳನ್ನು ಕಟ್ ಮಾಡಿದ ಟ್ವಿಟರ್ ಹೊಸ ಮಾಲೀಕ ಮತ್ತು ಸಿಇಒ
ಹೊಸ ಟ್ವಿಟರ್ (Twitter) ಸಿಇಒ ಕೂಡ ಆಗಿರುವ ಮಾಲೀಕ, ಎಲಾನ್ ಮಸ್ಕ್ (Elon Musk) ಅವರು ಸಂಸ್ಥೆಯನ್ನು 44 ಶತಕೋಟಿ ಡಾಲರ್ಗೆ ಖರೀದಿಸಿದ ಬಳಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದಿನಾ ವರದಿಯಾಗುತ್ತಿವೆ. ತಮ್ಮ ಮೊದಲ ಭಾಷಣದಲ್ಲೇ ಅವರು, ಒಂದೊಮ್ಮೆ ಟ್ವಿಟರ್ ಆದಾಯ ತರದಿದ್ದರೆ ದಿವಾಳಿಯಾಗುವುದು ಖಚಿತ ಎಂದು ಎಚ್ಚರಿಸಿದ್ದರು.ಸಾಮಾಜಿಕ ಮಾಧ್ಯಮ (Social Media) ಆಗಿರುವ ಟ್ವಿಟರ್ ನಲ್ಲಿ ಮಸ್ಕ್ ಅವರ ನಾಯಕತ್ವ ಆರಂಭವಾಗುತ್ತಿದ್ದಂತೆ ಸಾಕಷ್ಟು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಎರಡು ವಾರಗಳ ಅವಧಿಯಲ್ಲಿ ಟ್ವಿಟರ್ನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಹೆಚ್ಚಿನ ಹಿರಿಯ ಕಾರ್ಯನಿರ್ವಾಹಕರನ್ನು ಹೊರಹಾಕಲಾಗಿದೆ. ಉಳಿದ ಸಿಬ್ಬಂದಿಗೆ ಮನೆಯಿಂದ ಕೆಲಸ (Work From Home) ಮಾಡುವುದನ್ನು ನಿಲ್ಲಿಸಲು ಆದೇಶಿಸಲಾಗಿದೆ. ಎಲಾನ್ ಮಸ್ಕ್ (Elon Musk) ಅವರು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಕಂಪನಿಗಳಲ್ಲಿ ಸಿಬ್ಬಂದಿ ಕುರಿತು ಅನುಭವಿಸುತ್ತಿರುವ ನೀತಿಯನ್ನೇ ಅವರೇ ಸೋಷಿಯಲ್ ಮೀಡಿಯಾ ವೇದಿಕೆಯಾಗಿರುವ ಟ್ವಿಟರ್‌ನಲ್ಲೂ ಜಾರಿ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಮನೆಯಿಂದ ಕೆಲಸ ಮಾಡುತ್ತಿದ್ದ ಎಲ್ಲ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಕಚೇರಿ ಬಂದು ಕೆಲಸ ಮಾಡಲು ನಿರಾಕರಿಸಿದರೆ ಅಂಥ ಉದ್ಯೋಗಿಗಳಿಂದ ರಾಜೀನಾಮೆಯನ್ನು ಪಡೆದುಕೊಳ್ಳಲಾಯಿತು. ಈಗ ಟ್ವಿಟರ್‌ನಲ್ಲೂ ಉದ್ಯೋಗಿಗಳು ಅದೇ ರೀತಿಯ ನೀತಿಯನ್ನು ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಜಿಯೋ ಟ್ರೂ 5G ಸೇವೆ ಆರಂಭ, ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಣೆ!
ಎಲಾನ್ ಮಸ್ಕ್ ಅವರು ಈಗಾಗಲೇ, ವಾರಕ್ಕೆ 80 ಗಂಟೆಗಳ ಕಾಲ ಕೆಲಸವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿಿದ್ದಾರೆ. ಹಾಗೆಯೇ, ಕಂಪನಿಯು ಉಚಿತ ಊಟ ಸೇರಿದಂತೆ ಅನೇಕ ಕಾರ್ಯಸ್ಥಳದ ಪ್ರಯೋಜನಗಳನ್ನು ಒದಗಿಸುವುದಿಲ್ಲ ಎಂದೂ ತಿಳಿಸಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಉದ್ಯೋಗಿಗಳಿಗೆ ನೀಡಲಾಗಿತ್ತು. ಆ ವರ್ಕ್ ಫ್ಲೆಕ್ಸಿಬ್ಲಿಟಿಯನ್ನು ಮಸ್ಕ್ ಈಗ ನಿಲ್ಲಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚೆನ್ನಾಗಿ ಗೊತ್ತಿರುವ ವ್ಯಕ್ತಿಗಳು ಹೇಳುವ ಪ್ರಕಾರ, ಒಂದೊಮ್ಮೆ ಉದ್ಯೋಗಿಗಳು ಕಚೇರಿಗೆ ಬರಲು ನಿರಾಕರಿಸಿದರೆ, ಅವರ ರಾಜೀನಾಮೆಯನ್ನು ಅಂಗೀಕರಿಸಲು ಟ್ವಿಟರ್ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಂಪನಿಯನ್ನು ಲಾಭದ ಹಳಿಗೆ ತರಲು ನಾವೆಲ್ಲರೂ ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕಿದೆ ಎಂದು ಮಸ್ಕ್ ಹೇಳಿದ್ದಾರೆ.
ಇತ್ತೀಚೆಗೆ, ಟ್ವಿಟರ್ ಮತ್ತು ಅದರ ಉದ್ಯೋಗಿಗಳಿಬ್ಬರೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಮಸ್ಕ್ ಅವರು ಟ್ವಿಟರ್ ನಿಯಂತ್ರಣವನ್ನು ತೆಗೆದುಕೊಂಡ ನಂತರ ಜಾಗತಿಕ ಉದ್ಯೋಗಿಗಳ 50% ಅನ್ನು ವಜಾ ಮಾಡಿದರು. ಮೈಕ್ರೋಬ್ಲಾಗಿಂಗ್ ಸೈಟ್‌ನ ಏಕೈಕ ಮಂಡಳಿಯ ಸದಸ್ಯರಾದರು. ಜಾಹೀರಾತು ಆದಾಯದಲ್ಲಿನ ಕುಸಿತವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Instagram Followers ಜಾಸ್ತಿಯಾಗಬೇಕು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ಟ್ವಿಟರ್ ಆದಾಯವನ್ನು ಹೆಚ್ಚಿಸುವುದಕ್ಕಾಗಿಯೇ ಎಲಾನ್ ಮಸ್ಕ್ ಅವರು ಬ್ಲೂ ಟಿಕ್ ಬಳಕೆಗೆ ಇದ್ದ ಚಂದಾ ಶುಲ್ಕವನ್ನು 8 ಡಾಲರ್ಗೆ ಏರಿಕೆ ಮಾಡಿದ್ದಾರೆ. ಬ್ಲೂಟಿಕ್ ಬೇಡುವ ಬಳಕೆದಾರರು ಅದಕ್ಕಾಗಿ ಹಣವನ್ನು ಕಂಪನಿಗೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಅವರು ಟ್ವಿಟರ್ ಭವಿಷ್ಯ ಮತ್ತು ಅದರ ಹಣಕಾಸು ಸ್ಥಿತಿಯನ್ನು ಸುಧಾರಿಸುವ ಬಗ್ಗೆ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಈ ಕುರಿತು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್ನಲ್ಲಿ ಮಸ್ಕ್, "ಕಠಿಣ ಸಮಯಗಳು ಎದುರಾಗಿವೆ" ಎಂದು ಎಚ್ಚರಿಸಿದ್ದಾರೆ. ಕಂಪನಿಯ ಆರ್ಥಿಕ ಭವಿಷ್ಯದ ಬಗ್ಗೆ "ಸುದ್ದಿಯನ್ನು ಇಷ್ಟವಾಗುವಂತೆ ಮಾಡುವ ಯಾವುದೇ ಮಾರ್ಗವಿಲ್ಲ" ಎಂದು ತಿಳಿಸಿದ್ದಾರೆ. ಎಲಾನ್ ಮಸ್ಕ್ ತಮ್ಮ ಸ್ಟಾಪ್ ಮೇಂಬರ್ಸ್ ಅವರಿಗೂ ಮನೆಯಿಂದ ಕೆಲಸ ಮಾಡುವುದನ್ನು ನಿರಾಕರಿಸಿದ್ದಾರೆ. ಹಾಗೊಂದು ವೇಳೆ ಅಗತ್ಯವಾದರೆ ಅವರು ಮೊದಲು ಮಸ್ಕ್ ಅವರಿಂದ ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ.