ತುರ್ತು ಕರೆ ಮಾಡಬೇಕಿದೆ ಒಮ್ಮೆ ಫೋನ್ ಕೊಡಿ, ಹೊಸ ಸೈಬರ್ ಸ್ಕ್ಯಾಮ್ ಎಚ್ಚರಿಸಿದ ನಿಖಿಲ್ ಕಾಮತ್

ಯಾವುದೇ ರೀತಿಯಲ್ಲೂ ಅವರು ಸೈಬರ್ ವಂಚಕರು ಎಂದು ಅನಿಸುವುದಿಲ್ಲ. ತುರ್ತು ಕರೆ ಮಾಡಬೇಕು, ಒಮ್ಮೆ ಫೋನ್ ಕೊಡಿ ಎಂದು ಹಲವು ಕಾರಣ ಹೇಳುತ್ತಾರೆ. ಫೋನ್ ಕೊಟ್ಟರೆ ಮುಗೀತು. ಈ ಸೈಬರ್ ಅಪರಾಧ ಕುರಿತು ಉದ್ಯಮಿ ನಿಖಿಲ್ ಕಾಮತ್ ಎಚ್ಚರಿಸಿದ್ದರೆ.

Nikhil kamath warns cyber scam stranger may ask your phone to make an emergency call

ನವದೆಹಲಿ(ಜ.15) ಉದ್ಯಮಿ ನಿಖಿಲ್ ಕಾಮತ್ ಇದೀಗ ಮಹತ್ವದ ಸೈಬರ್ ಕ್ರೈಮ್ ಎಚ್ಚರಿಕೆ ನೀಡಿದ್ದಾರೆ.  ಡಿಜಿಟಲ್ ಅರೆಸ್ಟ್, ಲಿಂಕ್ ಕಳುಹಿಸುವುದು, ಒಟಿಪಿ ಕೇಳುವುದು ಇವೆಲ್ಲಾ ಸೈಬರ್ ಕ್ರೈಮ್ ಕುರಿತು ಇದೀಗ ಬಹುತೇಕರು ಎಚ್ಚರವಾಗಿದ್ದಾರೆ. ಇದರ ನಡುವೆ ಹೊಸ ಸೈಬರ್ ಅಪರಾಧ ಬೆಳಕಿಗೆ ಬಂದಿದೆ. ನಗರ, ಪಟ್ಟಣದಲ್ಲಿ ಅನಾಮಿಕರು ಎದುರಾಗಿ, ತುರ್ತು ಕರೆ ಮಾಡಬೇಕಿದೆ. ತನ್ನ ಫೋನ್ ಸ್ವಿಚ್ ಆಫ್ ಅಥವಾ ಒಂದಷ್ಟು ಕಾರಣಗಳನ್ನು ಹೇಳುತ್ತಾರೆ. ಈ ಕಾರಣ ಕೇಳಿ ಅಯ್ಯೋ ಪಾಪ ಎಂದು ಫೋನ್ ಕೈಗೆ ನೀಡಿದರೆ ಅಲ್ಲೀಗೆ ಟ್ರಾಪ್ ಆದಂತೆ. ಫೋನ್ ಮಾಡತ್ತಾರೆ. ಆದರೆ ಅಷ್ಟೇ ವೇಗದಲ್ಲಿ ನಿಮ್ಮ ಖಾತೆ ಕೂಡ ಖಾಲಿಯಾಗಿರುತ್ತದೆ. ಹೊಸ ಸೈಬರ್ ಕ್ರೈಮ್ ಕುರಿತು ನಿಖಿಲ್ ಕಾಮತ್ ಎಕ್ಸ್ ಖಾತೆ ಮೂಲಕ ಎಚ್ಚರಿಸಿದ್ದಾರೆ.

ಈ ಸೈಬರ್ ಕ್ರೈಮ್ ಕುರಿತು ನಿಖಿಲ್ ಕಾಮತ್ ಅವರ ಝೆರೋಧ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಈ ಕುರಿತು ವಿಡಿಯೋ ಮಾಡಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಮಾರುಕಟ್ಟೆ, ನಿಲ್ದಾಣ, ಮೆಟ್ರೋ ಸೇರಿದಂತೆ ಯಾವುದಾದರು ಕಡೆಯಲ್ಲಿ  ಈ ಅನಾಮಿಕರು ಎದುರಾಗುತ್ತಾರೆ. ಯಾವುದೇ ರೀತಿಯಲ್ಲಿ ಈ ಅನಾಮಿಕರು ಮೋಸಗಾರರು, ವಂಚಕರು ಎಂದು ಅನಿಸುವುದಿಲ್ಲ. ಯವಕ-ಯುವತಿಯರು ಹೆಚ್ಚಾಗಿ ಈ ವಂಚಕ ಜಾಲದಲ್ಲಿರುತ್ತಾರೆ. 

ಯೂಟ್ಯೂಬರ್ 40 ಗಂಟೆ ಡಿಜಿಟಲ್ ಅರೆಸ್ಟ್, ನಾಳೆ ನೀವಾಗಬಹುದು ಎಚ್ಚರ!

ತುರ್ತು ಅಗತ್ಯವಿದೆ. ಎಲ್ಲಾ ಕಳೆದುಕೊಂಡಿದ್ದೇನೆ. ಈ ನಗರವೂ ಹೊಸದು. 2 ನಿಮಿಷ ಕರೆ ಮಾಡಿ ಕೊಡುತ್ತೇನೆ. ನಿಮ್ಮ ಮುಂದೆ ಕರೆ ಮಾಡುತ್ತೇನೆ ಎಂದು ಮನ ಒಲಿಸುವ ಪ್ರಯತ್ನ ಮಾಡುತ್ತಾರೆ. ಕೆಲವರು ನೀಡುವುದಿಲ್ಲ. ಆದರೆ ನೀವು ಈ ಜಾಲದ ಮೋಸಕ್ಕೆ ಸಿಲುಕಿ ಫೋನ್ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರಣ ಅವರು ನಿಮ್ಮ ಮುಂದೆ ಫೋನ್ ಮಾಡುತ್ತಾರೆ. ಆದರೆ ಫೋನ್ ಮಾಡುವುದು ತಮ್ಮ ಸೈಬರ್ ವಂಚಕರಿಗೆ. ನಿಮ್ಮ ಫೋನ್ ನಂಬರ್ ಸೈಬರ್ ವಂಚಕರಿಗೆ ಸಿಕ್ಕ ಬೆನ್ನಲ್ಲೇ ಅತ್ತ ಕಡೆಯಿಂದ ಒಟಿಪಿ ಕಳುಹಿಸಿತ್ತಾರೆ. ಈ ಒಟಿಪಿಯನ್ನು ಫೋನ್ ಮಾಡುತ್ತಿದ್ದ ಅನಾಮಿಕ ಗುರುತಿಸಿಕೊಂಡು ವಂಚರಿಕೆ ನೀಡುತ್ತಾನೆ. ನೀವು ಕಣ್ಣ ರೆಪ್ಪೆ ಮುಚ್ಚದೆ ಆತನನ್ನೇ ದಿಟ್ಟಿಸಿ ನೋಡುತ್ತಿದ್ದರೆ. ಒಟಿಪಿ ಗುರುತಿಸಿ ಬಳಿಕ ಕಳುಹಿಸುತ್ತಾರೆ. ಇಲ್ಲದಿದ್ದರೆ, ತಕ್ಷಣವೇ ಒಟಿಪಿ ಕಳುಹಿಸುತ್ತಾರೆ. ಅಲ್ಲಿಗೆ ನಿಮ್ಮ ಖಾತೆಯಲ್ಲಿದ್ದ ಹಣವೂ ಖಾಲಿಯಾಗಿರುತ್ತದೆ.

 

 

ಅನಾಮಿಕರು ನಿಮ್ಮ ಫೋನ್ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ. ಇದು ಸೈಬರ್ ವಂಚಕರು ಆಗಿರುವ ಸಾಧ್ಯತೆ ಇದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಅವರ ಕಷ್ಟ ಕೇಳಿ ನೀವು ಸಂಕಷ್ಟಕ್ಕೆ ಬೀಳಬೇಡಿ ಎಂದು ನಿಖಿಲ್ ಕಾಮತ್ ವಿಡಿಯ ಮೂಲಕ ಸಂದೇಶ ನೀಡಿದ್ದಾರೆ. ಸೈಬರ್ ಕ್ರೈಮ್ ಪ್ರತಿ ದಿನ ಹೊಸ ಹೊಸ ರೂಪದಲ್ಲಿ ಪತ್ತೆಯಾಗುತ್ತಿದೆ. ಹೀಗಾಗಿ ಅತೀವ ಎಚ್ಚರ ಅವಶ್ಯಕವಾಗಿದೆ.

ಕೆನರಾ ಬ್ಯಾಂಕ್ ಕೆವೈಸಿಗಾಗಿ ವ್ಯಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿದ ಮಂಗಳೂರು ನಿವಾಸಿಯ ಕಣ್ಣೀರ ಕತೆ!
 

Latest Videos
Follow Us:
Download App:
  • android
  • ios