ಕೆನರಾ ಬ್ಯಾಂಕ್ ಕೆವೈಸಿಗಾಗಿ ವ್ಯಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿದ ಮಂಗಳೂರು ನಿವಾಸಿಯ ಕಣ್ಣೀರ ಕತೆ!

ಬ್ಯಾಂಕ್‌ ಖಾತೆಗೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಮಂಗಳೂರಿನ ಕೆನರಾ ಬ್ಯಾಂಕ್ ಗ್ರಾಹಕನಿಗೆ ವ್ಯಾಟ್ಸಾಪ್ ಮೂಲಕ ಲಿಂಕ್ ಜೊತೆಗೆ ಎಚ್ಚರಿಕೆ ಸಂದೇಶವೂ ಬಂದಿದೆ. ಇನ್ನೂ ಕೆವೈಸಿ ಮಾಡದಿದ್ದರೆ ಖಾತೆ ಕ್ಲೋಸ್ ಎಂದಿದ್ದಾರೆ. ಸರಿ ಎಂದು ಕ್ಲಿಕ್ ಮಾಡಿದ ಈತ ಇದೀಗ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾನೆ.

Mangalore resident lost rs 6 lakh over canara bank kyc update through WhatsApp link ckm

ಮಂಗಳೂರು(ಡಿ.24) ಬ್ಯಾಂಕ್ ಸೇರಿದಂತೆ ಕೆಲವಡೆ ಕೆವೈಸಿ(Know your Customer)ಕಡ್ಡಾಯ. ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರೂ ಕೆವೈಸಿ ಮಾಡಿಲ್ಲದಿದ್ದರೆ ಖಾತೆ ಸ್ಥಗಿತಗೊಳ್ಳುವ ಅಪಾಯವಿದೆ. ಅಗತ್ಯ ದಾಖಲೆಗಳನ್ನು ನೀಡಿ ಸುಲಭವಾಗಿ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಹಲವರು ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಲು ಮರೆತಿರುತ್ತಾರೆ. ಹೀಗೆ ಮಂಗಳೂರಿನ ಕೆನರಾ ಬ್ಯಾಂಕ್ ಗ್ರಾಹಕ ಕೆವೈಸಿ ಅಪ್‌ಡೇಟ್ ಮಾಡಿಲ್ಲ. ಈತನ ವ್ಯಾಟ್ಸಾಪ್‌ಗೆ ಕೆವೈಸಿ ಅಪ್‌ಡೇಟ್ ಮಾಡುವಂತೆ ಲಿಂಕ್ ಬಂದಿದೆ. ಇನ್ನು ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಖಾತೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ಸಂದೇಶ ಓದಿದ ಈತ, ತಕ್ಷಣವೇ ವ್ಯಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ ಅಪ್‌‌ಡೇಟ್ ಮಾಡಲು ಮುಂದಾಗಿದ್ದಾನೆ. ಇಷ್ಟೇ ನೋಡಿ, ಈತನ ಖಾತೆಯಲ್ಲಿದ್ದ  6.6 ಲಕ್ಷ ರೂಪಾಯಿ ಗುಳುಂ ಆಗಿದೆ.

ಕಾವೂರು ಠಾಣ ವ್ಯಾಪ್ತಿಯ ನಿವಾಸಿ ವ್ಯಾಟ್ಸಾಪ್‌ನಲ್ಲಿ ಹಲವು ಗ್ರೂಪ್‌ಗಳ ರೀತಿಯಲ್ಲಿ ಕೆಲ ದಿನಗಳ ಹಿಂದೆ ಗ್ರೂಪ್ ಕ್ರಿಯೇಟ್ ಆಗಿತ್ತು. ದುರ್ಗಿ ಕ್ರಿಕೆಟ್ ಉತ್ಸವ್ ಗ್ರೂಪ್ ಕ್ರಿಯೇಟ್ ಆಗಿತ್ತು. ಏಕಾಏಕಿ ಈ ಗ್ರೂಪ್ ಕೆನರಾ ಬ್ಯಾಂಕ್ ಗ್ರೂಪ್ ಆಗಿ ಬದಲಾಗಿತ್ತು. ಈ ಗ್ರೂಪ್‌ನಲ್ಲಿ ಕೆನರಾ ಬ್ಯಾಂಕ್ ಗ್ರಾಹಕರು ಕೆವೈಸಿ ಅಪ್‌ಡೇಟ್ ಮಾಡಿ ಎಂದು ಸೂಚಿಸಲಾಗಿತ್ತು. ಇಷ್ಟೇ ಅಲ್ಲ ಯಾರೆಲ್ಲಾ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ಸೇರಿದಂತೆ ಇತರ ಅಗತ್ಯ ದಾಖಲೆ ನೀಡಿ ಕೆವೈಸಿ ಅಪ್‌ಡೇಟ್ ಮಾಡಿಲ್ಲವೋ ಅವರ ಖಾತೆ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸಲಾಗಿತ್ತು.

ಇಂಡಸ್‌ಇಂಡ್ ಬ್ಯಾಂಕ್‌ಗೆ RBI ದಂಡ, ಗ್ರಾಹಕರ ಮೇಲೂ ಬೀಳುತ್ತಾ ಹೊರೆ?

ಕೆನರಾ ಬ್ಯಾಂಕ್ ಕೆವೈಸಿ ಅಪ್‌ಡೇಟ್‌ಗೆ ಲಿಂಕ್ ನೀಡಲಾಗಿತ್ತು. ಈ ಲಿಂಕ್ ಕ್ಲಿಕ್ ಮಾಡಿದರೆ ನೇರವಾಗಿ ಅನಧಿಕೃತ ಆ್ಯಪ್ ಡೌನ್ಲೋಡ್‌ಗೆ ಸೂಚಿಸಿತ್ತು. ಆದರೆ ಮೇಲ್ನೋಟಕ್ಕೆ ಈ ಆ್ಯಪ್ ಕೆನರಾ ಬ್ಯಾಂಕ್ ಆ್ಯಪ್ ರೀತಿಯಲ್ಲೇ ಕಾಣುತ್ತಿತ್ತು. ಇದರ ಬಣ್ಣ, ಕೆನರಾ ಬ್ಯಾಂಕ್ ಹೆಸರು, ಲೋಗೋ ಸೇರಿದಂತೆ ಎಲ್ಲವೂ ನಕಲು ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ದೊಡ್ಡದಾಗಿ ಎಂದಿಗೂ ಒಟಿಪಿ ಹಂಚಿಕೊಳ್ಳಬೇಡಿ ಎಂದು ಬರೆದಿತ್ತು. ಹೀಗಾಗಿ ಕೆನರಾ ಬ್ಯಾಂಕ್ ಗ್ರಾಹಕನಿಗೆ ಇದು ನಕಲಿ ಆ್ಯಪ್ ಅನ್ನೋ ಅನುಮಾನ ಕೂಡ ಬಂದಿಲ್ಲ.

ಆಧಾರ್ ನಂಬರ್, ಎಟಿಎಂ ಕಾರ್ಡ್ ನಂಬರ್, ಎಟಿಎಂ ಪಿನ್, ಸಿವಿವಿ ಕೋಡ್ ಎಲ್ಲವನ್ನೂ ನಮೂದಿಸಲಾಗಿತ್ತು. ಇದೇ ವೇಳೆ ಒಟಿಪಿ ಕೂಡ ಮೊಬೈಲ್ ನಂಬರ್‌ಗೆ ಆಗಮಿಸಿದೆ. ಆದರೆ ಈ ಒಟಿಪಿಯನ್ನು ಗ್ರಾಹಕರ ಹಂಚಿಕೊಂಡಿಲ್ಲ. ಆದರೆ ಅಷ್ಟೊತ್ತಿಗೆ ಖಾತೆಯಲ್ಲಿದ್ದ 6.6 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ. ಕೆಲವೇ ನಿಮಿಷದಲ್ಲಿ ಖಾತೆಯಲ್ಲಿದ್ದ ಹಣ ಖಾಲಿ ಖಾಲಿ.  ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುವಾಗ ಖಾತೆ ಖಾಲಿಯಾಗಿತ್ತು. ತಕ್ಷಣವೇ ಕಾರ್ಡ್ ಬ್ಲಾಕ್ ಮಾಡಿ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೀವು ಕೆವೈಸಿ ಪೂರ್ಣಗೊಳಿಸಿದ್ದೀರಾ? ಬ್ಯಾಂಕ್‌ಗೆ ಖಡಕ್ ಎಚ್ಚರಿಕೆ ನೀಡಿದ ಆರ್‌ಬಿಐ!

ಯಾವುದೇ ಬ್ಯಾಂಕ್ ಕೆವೈಸಿ ಮಾಡಿ ಎಂದು ಲಿಂಕ್ ಕಳುಹಿಸುವುದಿಲ್ಲ. ಬ್ಯಾಂಕ್‌ನಿಂದ ಕರೆ ಮಾಡಿ ಕೆವೈಸಿ ಅಪ್‌ಡೇಟ್ ಪ್ರಕ್ರಿಯೆ ಮಾಡುವುದಿಲ್ಲ. ಹೀಗಾಗಿ ಗ್ರಾಹಕರು ಲಿಂಕ್, ಮೆಸೇಜ್, ಫೋನ್ ಯಾವುದೇ ರೀತಿಯಲ್ಲಿ ಮೋಸ ಹೋಗಬೇಡಿ. ಅಧಿಕೃತ ಬ್ಯಾಂಕ್ ವೆಬ್‌ಸೈಟ್, ಫೋನ್ ಬ್ಯಾಂಕ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಕೆವೈಸಿ ಅಪ್‌ಡೇಟ್ ಮಾಡಲು ಸಾಧ್ಯವಿದೆ.ಇಷ್ಟೇ ಅಲ್ಲ ಹತ್ತಿರದ ಬ್ಯಾಂಕ್ ಶಾಖೆಗೆ ತೆರಳಿ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಬ್ಯಾಂಕ್ ಯಾವತ್ತೂ ಒಟಿಪಿ ಕೇಳುವುದಿಲ್ಲ. ಅನಧಿಕೃತ ಆ್ಯಪ್, ಲಿಂಕ್ ಕ್ಲಿಕ್ ಮಾಡಬೇಡಿ, ಒಂದು ವೇಳೆ ಮಾಡಿದರೂ ಬ್ಯಾಂಕ್ ವಿವರ, ಮೊಬೈಲ್ ನಂಬರ್, ಎಟಿಎಂ ಪಿನ್, ಬ್ಯಾಂಕ್ ವಿವರ ದಾಖಲಿಸಬೇಡಿ. ಪ್ರತಿ ಹೆಜ್ಜೆಯಲ್ಲೂ ಎಚ್ಚರವಿಡಿ. ಅನಧಿಕೃತ ಡಿಜಿಟಲ್ ವಹಿವಾಟು ಅತೀದೊಡ್ಡ ನಷ್ಟಕ್ಕೆ ಕಾರಣವಾಗಲಿದೆ. ಹೀಗಾಗಿ ಎಚ್ಚರವಹಿಸಬೇಕು.  


 

Latest Videos
Follow Us:
Download App:
  • android
  • ios