ದೇಶದ ಕಾನೂನು ಗೌರವಿಸಿ ಅದರಂತೆ ಗೂಗಲ್ ಕಾರ್ಯನಿರ್ವಹಣೆ ಭಾರತದ ನೂತನ ಡಿಜಿಟಲ್ ನಿಯಮ ಕುರಿತು ಗೂಗಲ್ ಸ್ಪಷ್ಟನೆ ಸ್ಥಳೀಯ ಕಾನೂನಿಗೆ ಗೂಗಲ್ ಬದ್ಧವಾಗಿದೆ ಎಂದ ಪಿಚೈ

ನವದೆಹಲಿ(ಮೇ.27): ಭಾರತದಲ್ಲಿ ನೂತನ ಡಿಜಿಟಲ್ ನಿಯಮ ಭಾರಿ ಸದ್ದು ಮಾಡುತ್ತಿದೆ. ಹೊಸ ನಿಯಮ ಪಾಲಿಸದ ಕಂಪನಿಗಳ ಸೇವೆಗಳು ಸ್ಥಗಿತಗೊಳ್ಳಲಿದೆ. ಆದರೆ ಈ ನಿಯಮ ಪ್ರಶ್ನಿಸಿರುವ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಈಗಾಲೇ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಡಿಜಿಟಲ್ ಮೀಡಿಯಾಗಳು ಇದೀಗ ಭಾರತದ ನಿಯಮವನ್ನೇ ಪ್ರಶ್ನಿಸುತ್ತಿರುವ ನಡುವೆ ಅಂತರ್ಜಾಲ ದಿಗ್ಗಜ ಗೂಗಲ್, ಭಾರತದ ಕಾನೂನಿಗೆ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಕೇಂದ್ರದ ಹೊಸ ಐಟಿ ನಿಯಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ Whatsapp!

ಭಾರತದ ಕಾನೂನನ್ನು ಗೂಗಲ್ ಗೌರವಿಸಲಿದೆ. ಗೂಗಲ್ ಸ್ಥಳೀಯ ಕಾನೂನಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ನಿಯಮ ಹಾಗೂ ನೀತಿಗಳಿಗೆ ಪೂರಕವಾಗಿ ಗೂಗಲ್ ಹೆಜ್ಜೆಹಾಕಲಿದೆ ಎಂದು ಗೂಗಲ್ ಸಿಇಓ ಸುಂದರ್ ಪಿಚೈ ಹೇಳಿದ್ದಾರೆ. 

ಗೂಗಲ್ ಆಯಾ ದೇಶದ ಕಾನೂನು, ನೀತಿ ನಿಯಮಗಳನ್ನು ಗೌರವಿಸುತ್ತದೆ. ಜೊತೆಗೆ ಆಯಾ ದೇಶಗಳ ಕಾನೂನಿಗೆ ಬದ್ಧವಾಗಿದೆ. ಭಾರತದಲ್ಲೂ ಗೂಗಲ್ ನಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೂಗಲ್ ಅತ್ಯಂತ ಪಾರದರ್ಶಕ ಆಡಳಿತ ವ್ಯವಸ್ಥೆ ಹೊಂದಿದೆ. ಸರ್ಕಾರಗ ಸೂಚನೆಗಳನ್ನು ಗೂಗಲ್ ಪರಿಗಣಿಸಲಿದೆ ಎಂದು ಪಿಚೈ ಹೇಳಿದ್ದಾರೆ. ವರ್ಚುವಲ್ ಕಾನ್ಫೆರೆನ್ಸ್‌ನನಲ್ಲಿ ಪಿಚೈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ವಾರ್ನಿಂಗ್; ಟ್ವಿಟರ್, ಫೇಸ್ ಬುಕ್‌ಗೆ ಕೊನೆ ಮೊಳೆ?

ಅಂತರ್ಜಾಲ ಹಾಗೂ ಸಂಬಂಧಿತ ಚೌಕಟ್ಟಿನೊಳಗೆ ಗೂಗಲ್ ಕಾರ್ಯನಿರ್ವಹಸಲಿದೆ. ತಂತ್ರಜ್ಞಾನಯುಗದಲ್ಲಿ ಬದಲಾವಣೆಗಳು, ನೀತಿಗಳ ತಿದ್ದುಪಡಿ ಸಾಮಾನ್ಯ ಹಾಗೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಹೊಸ ನಿಯಮಕ್ಕೆ ಅನುಗುಣವಾಗಿ ಗೂಗಲ್ ಕಾರ್ಯನಿರ್ವಹಿಸಲಿದೆ ಎಂದು ಪಿಚೈ ಹೇಳಿದ್ದಾರೆ.

ಭಾರತದ ಸಾಮಾಜಿಕ ಮಾಧ್ಯಮಗಳ ಸೇವೆಗಳ ನೀತಿಗಳನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಭಾರತ ಸರ್ಕಾರ ಈ ಕುರಿತು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾಗಳಿಗೆ ನೂತನ ನಿಯಮ ಪಾಲಿಸುವಂತೆ ನೊಟೀಸ್ ನೀಡಿತ್ತು. ಜೊತೆಗೆ 3 ತಿಂಗಳ ಗುಡುವು ನೀಡಿತ್ತು. ಇದೀಗ ನೂತನ ನಿಯಮದ ಕುರಿತು ಚಕಾರವೆತ್ತಿರುವ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ದೆಹಲಿ ಹೈಕೋರ್ಟ್ ಮೆಟ್ಟೇಲಿರಿವೆ.