ಮತ್ತೊಂದು ವಾರ್ನಿಂಗ್; ಟ್ವಿಟರ್, ಫೇಸ್ ಬುಕ್‌ಗೆ ಕೊನೆ ಮೊಳೆ?

* ಏನಾಗಲಿದೆ ಫೇಸ್ ಬುಕ್ ಮತ್ತು ಟ್ವಿಟರ್ ಭವಿಷ್ಯ
* ಸರ್ಕಾರದಿಂದ  ಕೊನೆಯ ಸೂಚನೆ
* ನಿಯಮಾವಳಿಗಳ ಬಗ್ಗೆ ಕೂಡಲೇ ಅಭಿಪ್ರಾಯ ತಿಳಿಸಿ

Union Govt asks all social media intermediaries compliance details mah

ನವದೆಹಲಿ(ಮೇ  26)  ಮೇ  26  ಅಂದರೆ ಇಂದಿಗೆ ಫೇಸ್ ಬುಕ್ ಮತ್ತು ಟ್ವಿಟರ್ ಗೆ  ಸರ್ಕಾರ ನೀಡಿದ್ದ ಗಡುವು ಅಂತ್ಯವಾಗಲಿದ್ದು ಸರ್ಕಾರ ಕೊನೆಯದಾಗಿ ಮತ್ತೊಂದು ಸಂದೇಶ ನೀಡಿದೆ. ಅಭಿಪ್ರಾಯವನ್ನು ಕೂಡಲೇ ತಿಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಫೆಬ್ರವರಿಯಲ್ಲಿಯೇ ಸೂಚನೆ ನೀಡಿದ್ದರೂ ಇಲ್ಲಿಯವರೆಗೆ ಉತ್ತರ ಬಂದಿಲ್ಲ.  ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಇದಕ್ಕೆ ಸಂಬಂಧಿಸಿ ನೋಟಿಸ್ ನ್ನು ಕಳಿಸಿಕೊಟ್ಟಿದೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗೆ ಸಂಕಷ್ಟ ಎದುರಾಗಿದ್ದು ಚರ್ಚೆ ನಡೆಯುತ್ತಲೇ ಇದೆ.

ಏನಿದು ವಾಟ್ಸ್ ಆಪ್ ಪ್ರೈವಸಿ ನೀತಿ?

ಕೇಂದ್ರ ಸರ್ಕಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಪರಿಷ್ಕರಿಸಿರುವ  ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳನ್ನು ಇದುವರೆಗೂ ಒಪ್ಪದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ  ಕತೆ ಏನಾಗಲಿದೆ ಎನ್ನುವುದು ಎಲ್ಲರ ಕುತೂಹಲ.

ಏನಿದು ನಿಯಮಾವಳಿ? ಸಾಮಾಜಿಕ ತಾಣಗಳ ಆಗುಹೋಗು ವೀಕ್ಷಣೆ ಮಾಡಲು ಮೇಲ್ವಿಚಾರಣಾ ಸಮಿತಿಯೊಂದು ಜಾರಿಗೆ ಬರಲಿದೆ.   ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಮಾಹಿತಿ ಮತ್ತು ತಂತ್ರಜ್ಞಾನ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ.  ಈ ಸಮಿತಿ  ಬಯಸಿದರೆ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯ ನಡೆಸಲು ಸುವಮೋಟೋ  ಅಧಿಕಾರ ನೀಡಲಾಗಿದೆ. ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಬೇಕಾಗುತ್ತದೆ ಎಂದು  ಹೊಸ ನಿಯಮ ಹೇಳುತ್ತದೆ. 

ಚೀನಿ ಆಪ್ ಬ್ಯಾನ್: ಮೊಟ್ಟ ಮೊದಲು ಚೈಲ್ಡ್ ಪೋರ್ನೋಗ್ರಫಿ  ಬಿತ್ತರಿಸುತ್ತಿದ್ದ ತಾಣಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿತ್ತು. ಇದಾದ ಮೇಲೆ ಚೀನಿ ಆಪ್ ಗಳ ಮೇಲೆ ಸಮರ ಸಾರಿ ಟಿಕ್ ಟಾಕ್, ಪಬ್ ಜಿ,   ಹೆಲೋ ಸೇರಿದಂತೆ ಮುನ್ನೂರಕ್ಕೂ ಅಧಿಕ ಅಪ್ಲಿಕೇಶನ್ ಗಳು ಸ್ಥಾನ ಕಳೆದುಕೊಂಡಿದ್ದವು.

ಸೋಶೀಯಲ್ ಮೀಡಿಯಾದ ಮೇಲೆ ನಿಯಂತ್ರಣ ಇರಬೇಕು ಎಂಬ ವಾದವೂ ಒಂದು ಕಡೆ ಇದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬ ಮಾತನ್ನು ಹಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಫೇಸ್ ಬುಕ್ ಮತ್ತು ಟ್ವಿಟರ್ ಯಾವ ಪ್ರತಿಕ್ರಿಯೆ ನೀಡುತ್ತವೆ ಎನ್ನುವುದೇ ಕುತೂಹಲಕಾರಿ . 

 

 

Latest Videos
Follow Us:
Download App:
  • android
  • ios