ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಡೀಪ್‌ಫೇಕ್‌ ನಕಲಿ ವಿಡಿಯೋಗೆ ಬಲಿಯಾಗದಿರಿ. ನಾನು ಸ್ವಯಂಚಾಲಿತ ಟ್ರೇಡಿಂಗ್ ಅಪ್ಲಿಕೇಷನ್‌ಗಳಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಡೀಪ್‌ಫೇಕ್‌ ಸಂದರ್ಶನದ ವಿಡಿಯೋ ಮಾಡಿರುವುದು ಸುಳ್ಳು ಎಂದು ನಾರಾಯಣ ಮೂರ್ತಿ ಸಂದರ್ಶನದಲ್ಲಿ ಹೇಳಿದ್ದಾರೆ. 

ನವದೆಹಲಿ (ಡಿಸೆಂಬರ್ 15, 2023): ನಟ ನಟಿಯರು ಮತ್ತು ರಾಜಕಾರಣಿಗಳ ಬಳಿಕ ಇದೀಗ ಉದ್ದಿಮೆದಾರರಿಗೂ ಡೀಪ್‌ಫೇಕ್‌ ಬಿಸಿ ತಟ್ಟಿದೆ. ಇನ್ಫೋಸಿಸ್‌ ಸಂಸ್ಥಪಕ ನಾರಾಯಣ ಮೂರ್ತಿ ಅವರು ತಮ್ಮ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತೋರಿಸುವ ಡೀಪ್‌ಫೇಕ್‌ ವಿಡಿಯೋಗಳನ್ನು ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಈ ಮೂಲಕ ಗ್ರಾಹಕರನ್ನು ಸೆಳೆಯುವ ಯತ್ನ ಮಾಡಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ನಾರಾಯಣ ಮೂರ್ತಿ ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಡೀಪ್‌ಫೇಕ್‌ ನಕಲಿ ವಿಡಿಯೋಗೆ ಬಲಿಯಾಗದಿರಿ. ನಾನು ಸ್ವಯಂಚಾಲಿತ ಟ್ರೇಡಿಂಗ್ ಅಪ್ಲಿಕೇಷನ್‌ಗಳಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಡೀಪ್‌ಫೇಕ್‌ ಸಂದರ್ಶನದ ವಿಡಿಯೋ ಮಾಡಿರುವುದು ಸುಳ್ಳು’ ಎಂದಿದ್ದಾರೆ. 

ಇದನ್ನು ಓದಿ: ಮೋಸದ ಹೂಡಿಕೆ ಮಾಡುವಂತೆ ಮನವಿ ಮಾಡಿದ್ರಾ ರತನ್‌ ಟಾಟಾ? ವೈರಲ್‌ ವಿಡಿಯೋ ಅಸಲಿಯತ್ತು ಹೀಗಿದೆ..

Scroll to load tweet…

ಇತ್ತೀಚಿನ ತಿಂಗಳುಗಳಲ್ಲಿ, ನಾನು ಸ್ವಯಂಚಾಲಿತ ಟ್ರೇಡಿಂಗ್ ಅಪ್ಲಿಕೇಶನ್‌ಗಳನ್ನು ಅನುಮೋದಿಸಿದ್ದೇನೆ ಅಥವಾ ಹೂಡಿಕೆ ಮಾಡಿದ್ದೇನೆ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿವಿಧ ವೆಬ್‌ಪುಟಗಳಲ್ಲಿ ಹಲವಾರು ನಕಲಿ ಸುದ್ದಿಗಳನ್ನು ಪ್ರಚಾರ ಮಾಡಲಾಗಿದೆ ಎಂದು ನಾರಾಯಣ ಮೂರ್ತಿ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಇವುಗಳಿಗೆ BTC AI Evex, British Bitcoin Profit, Bit Lyte Sync, Immediate Momentum, Capitalix Ventures ಇತ್ಯಾದಿ ಎಂದು ಹೆಸರಿಸಲಾಗಿದೆ. ಸುದ್ದಿ ಐಟಂಗಳು ಸಹ ಮೋಸದ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗೂ, ಅದು ಜನಪ್ರಿಯ ಪತ್ರಿಕೆ ವೆಬ್‌ಸೈಟ್‌ಗಳೆಂದು ಗುರುತಿಸಲ್ಪಟ್ಟಿದೆ ಮತ್ತು ಅವುಗಳಲ್ಲಿ ಕೆಲವು ಡೀಪ್‌ಫೇಕ್ ಚಿತ್ರಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡು ನಕಲಿ ಸಂದರ್ಶನಗಳನ್ನು ಸಹ ಪ್ರಕಟಿಸುತ್ತವೆ ಎಂದು ಅವರು ಹೇಳಿದರು. 

Scroll to load tweet…

ಇದನ್ನು ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್‌: ನಕಲಿ ವಿಡಿಯೋ ಗುರುತಿಸೋದು ಹೇಗೆ ತಿಳ್ಳೊಳ್ಳಿ..!