Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್‌: ನಕಲಿ ವಿಡಿಯೋ ಗುರುತಿಸೋದು ಹೇಗೆ ತಿಳ್ಳೊಳ್ಳಿ..!

ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೋ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈ ನಕಲಿ ವಿಡಿಯೋಗಳ ಬಗ್ಗೆ ತಿಳಿದುಕೊಳ್ಳೋದು ಹೇಗೆ ಅಂತ ನೋಡಿ.. 

deepfake video showing rashmika mandanna how to identify fake videos ash
Author
First Published Nov 7, 2023, 1:31 PM IST

ನವದೆಹಲಿ (ನವೆಂಬರ್ 7, 2023): ಸ್ಯಾಂಡಲ್‌ವುಡ್‌ ಮೂಲಕ ಕಾಲಿಟ್ಟು ಕರ್ನಾಟಕದ ಕ್ರಶ್‌ ಆದ ಹಾಗೂ ಈಗ ನ್ಯಾಷನಲ್‌ ಕ್ರಶ್‌ ಎನಿಸಿಕೊಂಡಿರೋ ನಟಿ ರಶ್ಮಿಕಾ ಮಂದಣ್ಣ ಲಿಫ್ಟ್‌ಗೆ ಹೋಗುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ವಿವಾದದ ಕಿಚ್ಚು ಹೊತ್ತಿಸಿದೆ.  

ಆರಂಭದಲ್ಲಿ ಈ ವಿಡಿಯೋ ನೋಡಿದ್ರೆ ಅಸಲಿ ಎಂದೇ ಕಾಣಿಸಿಕೊಳ್ಳುತ್ತದೆ. ಆದರೆ, ವಾಸ್ತವವಾಗಿ, ರಶ್ಮಿಕಾ ಮಂದಣ್ಣ ವಿಡಿಯೋ 'ಡೀಪ್‌ಫೇಕ್' ಆಗಿದೆ. ಮೂಲ ವಿಡಿಯೋದಲ್ಲಿ ಬ್ರಿಟಿಷ್ ಭಾರತೀಯ ಹುಡುಗಿ ಜಾರಾ ಪಟೇಲ್ ಕಾಣಿಸಿಕೊಂಡಿದ್ದು, ರಶ್ಮಿಕಾ ಮುಖವನ್ನು ಸೇರಿಸಲು ಆಕೆಯ ಮುಖವನ್ನು ಮಾರ್ಫ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಲು ಸಂಚು; ಏನು ಹೇಳ್ತಾರೆ ಅಮಿತಾಭ್ ಬಚ್ಚನ್ !

ಈ ವಿಡಿಯೋಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ವಾರ್ನಿಂಗ್ ನೀಡಿದ್ದಾರೆ. ಡೀಪ್‌ ಫೇಕ್‌ ಇತ್ತೀಚಿನ ಮತ್ತು ಹೆಚ್ಚು ಅಪಾಯಕಾರಿ ಹಾಗೂ ಹಾನಿಕಾರಕ ತಪ್ಪು ಮಾಹಿತಿ. ಈ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳೇ ವ್ಯವಹರಿಸಬೇಕು ಎಂದಿದ್ದಾರೆ. ಹಾಗೂ, ಡಿಜಿಟಲ್ ವಂಚನೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಕಾನೂನು ಬಾಧ್ಯತೆಗಳು ಮತ್ತು ಐಟಿ ನಿಯಮಗಳನ್ನು ಸಹ ಉಲ್ಲೇಖಿಸಿದ್ದಾರೆ.

ಕೃತಕ ಬುದ್ಧಿಮತ್ತೆಗೆ (AI) ಸಂಬಂಧಿಸಿದ ತಂತ್ರಜ್ಞಾನದಲ್ಲಿನ ಸುಧಾರಣೆಗಳೊಂದಿಗೆ, ಡೀಪ್‌ಫೇಕ್‌ ಅಂತರ್ಜಾಲದಲ್ಲಿ ಸಾಮಾನ್ಯವಾಗುತ್ತಿದೆ. ಡೀಪ್‌ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾದ ಚಿತ್ರಗಳು, ಆಡಿಯೋ ಅಥವಾ ವಿಡಿಯೋಗಳನ್ನು ಇದು ಒಳಗೊಂಡಿದೆ. ಇನ್ನು, ಅಂತಹ ಡೀಪ್‌ಫೇಕ್‌ಗಳನ್ನು ಗುರುತಿಸೋದು ಹೇಗೆ ಎಂಬ ಬಗ್ಗೆ ಇಲ್ನೋಡಿ..

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಿದ ವೈರಲ್‌ ವಿಡಿಯೋ; ಡೀಪ್‌ಫೇಕ್ ತಂತ್ರಜ್ಞಾನ ಎಂದರೇನು?

ಅಸ್ವಾಭಾವಿಕ ಕಣ್ಣಿನ ಚಲನೆಗಳು
ಡೀಪ್‌ಫೇಕ್ ವಿಡಿಯೋಗಳು ಸಾಮಾನ್ಯವಾಗಿ ಅಸ್ವಾಭಾವಿಕ ಕಣ್ಣಿನ ಚಲನೆಗಳು ಅಥವಾ ನೋಟದ ಮಾದರಿಗಳನ್ನು ಪ್ರದರ್ಶಿಸುತ್ತವೆ. ನಿಜವಾದ ವಿಡಿಯೋಳಲ್ಲಿ, ಕಣ್ಣಿನ ಚಲನೆಗಳು ಸಾಮಾನ್ಯವಾಗಿ ನಯವಾಗಿರುತ್ತದೆ ಮತ್ತು ವ್ಯಕ್ತಿಯ ಮಾತು ಹಾಗೂ ಕ್ರಿಯೆಗಳೊಂದಿಗೆ ಸಂಯೋಜಿಸಲ್ಪಡುತ್ತವೆ.

ಬಣ್ಣ ಮತ್ತು ಬೆಳಕಿನ ಹೊಂದಿಕೆಯಾಗುವುದಿಲ್ಲ
ಡೀಪ್‌ಫೇಕ್ ರಚನೆಕಾರರು ನಿಖರವಾದ ಬಣ್ಣದ ಟೋನ್‌ ಮತ್ತು ಬೆಳಕಿನ ಪರಿಸ್ಥಿತಿಗಳನ್ನು ಪುನರಾವರ್ತಿಸಲು ಕಷ್ಟಪಡಬಹುದು. ಈ ಹಿನ್ನೆಲೆ ಸಬ್ಜೆಕ್ಟ್‌ನ ಮುಖ ಮತ್ತು ಸುತ್ತಮುತ್ತಲಿನ ಬೆಳಕಿನ ಯಾವುದೇ ಅಸಂಗತತೆಗಳಿಗೆ ಗಮನ ಕೊಡಿ.

ಇದನ್ನೂ ಓದಿ: ಸ್ಕೂಲ್ ಅಥವಾ ಕಾಲೇಜಿನಲ್ಲಿ ಹೀಗೆ ನನ್ನ ಅಶ್ಲೀಲ ವಿಡಿಯೋ ವೈರಲ್ ಆಗಿದ್ದರೆ ಗತಿ ಏನಾಗಿರುತ್ತಿತ್ತೋ!

ಆಡಿಯೋ ಗುಣಮಟ್ಟವನ್ನು ಹೋಲಿಸಿ ಮತ್ತು ಕಾಂಟ್ರಾಸ್ಟ್ ಮಾಡಿ
ಡೀಪ್‌ಫೇಕ್ ವಿಡಿಯೋಗಳು ಸಾಮಾನ್ಯವಾಗಿ AI - ರಚಿತವಾದ ಆಡಿಯೋ ಬಳಸುತ್ತವೆ. ಅದು ಸೂಕ್ಷ್ಮ ಅಪೂರ್ಣತೆಗಳನ್ನು ಹೊಂದಿರಬಹುದು. ದೃಶ್ಯ ವಿಷಯದೊಂದಿಗೆ ಆಡಿಯೋ ಗುಣಮಟ್ಟವನ್ನು ಹೋಲಿಕೆ ಮಾಡಿ.

ವಿಚಿತ್ರವಾದ ದೇಹ ಆಕಾರ ಅಥವಾ ಚಲನೆ

ಡೀಪ್‌ಫೇಕ್‌ಗಳು ಕೆಲವೊಮ್ಮೆ ಅಸ್ವಾಭಾವಿಕ ದೇಹದ ಆಕಾರಗಳು ಅಥವಾ ಚಲನೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ಕೈಕಾಲುಗಳು ತುಂಬಾ ಉದ್ದವಾಗಿ ಅಥವಾ ಚಿಕ್ಕದಾಗಿ ಕಾಣಿಸಬಹುದು ಅಥವಾ ದೇಹವು ಅಸಾಮಾನ್ಯ ಅಥವಾ ವಿಕೃತ ರೀತಿಯಲ್ಲಿ ಚಲಿಸಬಹುದು. ವಿಶೇಷವಾಗಿ ದೈಹಿಕ ಚಟುವಟಿಕೆಯ ಸಮಯದಲ್ಲಿ ಈ ಅಸಂಗತತೆಗಳಿಗೆ ಗಮನ ಕೊಡಿ.

ಕೃತಕ ಮುಖದ ಚಲನೆಗಳು
ಡೀಪ್‌ಫೇಕ್ ಸಾಫ್ಟ್‌ವೇರ್ ಯಾವಾಗಲೂ ನಿಜವಾದ ಮುಖದ ಅಭಿವ್ಯಕ್ತಿಗಳನ್ನು ನಿಖರವಾಗಿ ಪುನರಾವರ್ತಿಸುವುದಿಲ್ಲ. ಈ ಹಿನ್ನೆಲೆ ಉತ್ಪ್ರೇಕ್ಷಿತವಾಗಿ ತೋರುವ ಮುಖದ ಚಲನೆ, ಮಾತಿನೊಂದಿಗೆ ಸಿಂಕ್ ಆಗಿದ್ಯಾ ಆಗಿಲ್ವಾ ಅಥವಾ ವಿಡಿಯೋದ ಸಂದರ್ಭಕ್ಕೆ ಸಂಬಂಧವಿವಿದ್ಯೋ ಇಲ್ಲವೋ ಎಂಬ ಬಗ್ಗೆ ನೋಡಿ..

ಮುಖದ ವೈಶಿಷ್ಟ್ಯಗಳ ಅಸ್ವಾಭಾವಿಕ ಸ್ಥಾನ
ಡೀಪ್‌ಫೇಕ್‌ಗಳು ಸಾಂದರ್ಭಿಕವಾಗಿ ಈ ವೈಶಿಷ್ಟ್ಯಗಳಲ್ಲಿ ವಿರೂಪ ಅಥವಾ ತಪ್ಪು ಜೋಡಣೆಗಳನ್ನು ಪ್ರದರ್ಶಿಸಬಹುದು. ಇದು ಕುಶಲತೆ (Manipulation) ಸಂಕೇತವಾಗಿರಬಹುದು.

ವಿಚಿತ್ರವಾದ ಭಂಗಿ ಅಥವಾ ಮೈಕಟ್ಟು
ಡೀಪ್‌ಫೇಕ್‌ಗಳು ನೈಸರ್ಗಿಕ ಭಂಗಿ ಅಥವಾ ಮೈಕಟ್ಟು ನಿರ್ವಹಿಸಲು ಹೆಣಗಾಡಬಹುದು. ಈ ಹಿನ್ನೆಲೆ ಅಸಾಮಾನ್ಯ ಅಥವಾ ಭೌತಿಕವಾಗಿ ನಂಬಲಾಗದ ರೀತಿ ಕಂಡುಬರುವ ಯಾವುದೇ ವಿಚಿತ್ರವಾದ ದೇಹದ ಸ್ಥಾನ, ಅನುಪಾತಗಳು ಅಥವಾ ಚಲನೆಗಳಿಗೆ ಗಮನ ಕೊಡಿ.

ಇದರ ಜತೆಗೆ ನೀವು ವಿಡಿಯೋದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಮೂಲ ವಿಡಿಯೋ ಪರಿಶೀಲಿಸಲು ರಿವರ್ಸ್ ಇಮೇಜ್ ಹುಡುಕಾಟ ಮಾಡಬಹುದು. ಇದನ್ನು ಮಾಡಲು, https://images.google.com/ ಗೆ ಹೋಗಿ ಮತ್ತು 'ಇಮೇಜ್‌ ಮೂಲಕ ಹುಡುಕಿ' ಎಂದು ಹೇಳುವ ಕ್ಯಾಮರಾ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಸ್ಕ್ರೀನ್‌ಶಾಟ್ ಅನ್ನು ಅಪ್‌ಲೋಡ್ ಮಾಡಬಹುದು ಮತ್ತು ಅದರೊಂದಿಗೆ ಸಂಯೋಜಿತವಾಗಿರುವ ದೃಶ್ಯಗಳನ್ನು ಹಳೆಯ ವಿಡಿಯೋಗಳಿಂದ ತೆಗೆದುಕೊಳ್ಳಲಾಗಿದೆಯೇ ಎಂದು Google ನಿಮಗೆ ತೋರಿಸುತ್ತದೆ.

Follow Us:
Download App:
  • android
  • ios