Asianet Suvarna News Asianet Suvarna News

mYoga App: ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಯೋಗ ಪ್ರ್ಯಾಕ್ಟೀಸ್‌ ಮಾಡ್ಬಹುದು!

* 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ mYoga Appಗೆ ಚಾಲನೆ

* ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಂಟಿಯಾಗಿ ಸಿದ್ಧಪಡಿಸಿದ App

* ಏನೆಲ್ಲಾ ಇದೆ? ಡೌನ್‌ಲೋಡ್‌ ಹೇಗೆ? ಇಲ್ಲಿದೆ ಮಾಹಿತಿ

mYoga app launched on International Yoga Day How to download and use on Android pod
Author
Bangalore, First Published Jun 21, 2021, 6:05 PM IST

ನವದೆಹಲಿ(ಜೂ.21): 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪಿಎಂ ಮೋದಿ ಯೋಗ ಆ್ಯಪ್‌ಗೆ ಚಾಲನೆ ನೀಡಿದ್ದಾರೆ. ಇದನ್ನು ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಂಟಿಯಾಗಿ ಸಿದ್ಧಪಡಿಸಿದ್ದು, ಇದರ ಉದ್ದೇಶ ಸಾಮಾನ್ಯ ಜನರನ್ನು ಯೋಗದೊಂದಿಗೆ ಸಂಪರ್ಕಿಸುವುದಾಗಿದೆ ಈ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದ ಪಿಎಂ ಮೋದಿ, ಡಬ್ಲ್ಯುಎಚ್‌ಒ ಸಹಾಯದಿಂದ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.

mYoga App ಪ್ರಾರಂಭಿಸುತ್ತಿದ್ದೇವೆ. ಈಗ ವಿಶ್ವಕ್ಕೆ Myoga ಆಪ್‌ ಶಕ್ತಿ ಸಿಗಲಿದೆ. ಈ ಆಪ್‌ನಲ್ಲಿ Common Yoga Protocol ಆಧಾರದಲ್ಲಿ ಯೋಗ ತರಬೇತಿಯ ಅನೇಕ ವಿಡಿಯೋಗಳು ವಿಶ್ವದ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಇದು ಆಧುನಿಕ ತಂತ್ರಜ್ಞಾನ ಹಾಗೂ ಪ್ರಾಚೀನ ವಿಜ್ಞಾನದ ಸಮಾಗಮವಾಗಿದೆ. ಈ ಆಪ್‌ ಯೋಗದ ವಿಸ್ತಾರ ವಿಶ್ವಾದ್ಯಂತ ಹಬ್ಬಿಸುತ್ತದೆ ಹಾಗೂ ಒಂದೇ ವಿಶ್ವ, ಒಂದೇ ಆರೋಗ್ಯ ಸಫಲವಾಗಿಸಲು ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ ಎಂಬ ಭರವಸೆ ಇದೆ ಎಂದೂ ಮೋದಿ ತಿಳಿಸಿದ್ದಾರೆ.

ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಯೋಗ: ಪಿಎಂ ಮೋದಿ

mYoga App ಯಾರು ಬಳಸಬಹುದು?

12-65 ವರ್ಷದೊಳಗಿನ ಜನರು ಈ ಅಪ್ಲಿಕೇಶನ್ ಅನ್ನು ಬಳಸಬಹುದು. mYoga ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ಯಾವುದೇ ಬಳಕೆದಾರರ ಡೇಟಾವನ್ನು ಯಾವುದೇ ರೀತಿಯಲ್ಲಿ ಸಂಗ್ರಹಿಸುವುದಿಲ್ಲ.

mYoga App ಎಲ್ಲಿಂದ ಡೌನ್‌ಲೋಡ್ ಮಾಡಬೇಕು?

ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಮೈಯೋಗ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಯಾವುದೇ ಅಪಾಯವಿಲ್ಲ.

mYoga App ಎಷ್ಟು ಭಾಷೆಗಳಲ್ಲಿ ಲಭ್ಯ?

ಸದ್ಯ mYoga App ಫ್ರೆಂಚ್, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಭಾಷೆಗಳನ್ನು ಇದಕ್ಕೆ ಸೇರಿಸಲಾಗುವುದು.

ಕೋವಿಡ್ ಕಾಲದಲ್ಲಿ ಯೋಗದ ಮಹತ್ವ; ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ!

mYoga App ನಲ್ಲಿ ಏನೇನಿದೆ?

mYoga App ನಲ್ಲಿ ವಿಡಿಯೋ ಮತ್ತು ಆಡಿಯೋ ಮೂಲಕ ಯೋಗ ತರಬೇತಿ ನೀಡಲಾಗುತ್ತದೆ. ನೀವು ಮನೆಯಲ್ಲಿರುವ ಸಮಯಕ್ಕೆ ಅನುಗುಣವಾಗಿ ಈ ವೀಡಿಯೊಗಳನ್ನು ನೋಡಿ ಯೋಗ ಕಲಿಯಬಹುದು.

mYoga App ಹೇಗೆ ತಯಾರಿಸಲಾಗಿದೆ?

ಇದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್ ಸಚಿವಾಲಯ), ಭಾರತ ಸರ್ಕಾರ ಸೇರಿ ಸಿದ್ಧಪಡಿಸಿದೆ.
 

Follow Us:
Download App:
  • android
  • ios