Asianet Suvarna News

ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಯೋಗ: ಪಿಎಂ ಮೋದಿ

* 7ನೇ ಅಂತಾರಾಷ್ಟ್ರೀಯ ಯೋಗ ದಿನ

* ಅಂತಾರಾಷ್ಟ್ರೀಯ ಯೋಗ ದಿನ: ದೇಶ ಉದ್ದೇಶಿಸಿ ಮೋದಿ ಬಾಷಣ

* ಕೊರೋನಾ ಕಾಲದಲ್ಲಿ ವಿಶ್ವಕ್ಕೇ ವಿಶ್ವಾಸ ತುಂಬಿದ ಯೋಗ

Yoga a ray of hope in India fight against Covid 19 pandemic says PM Modi pod
Author
Bangalore, First Published Jun 21, 2021, 7:08 AM IST
  • Facebook
  • Twitter
  • Whatsapp

ನವದೆಹಲಿ(ಜೂ.21): 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೊರೋನಾ ಹಿನ್ನೆಲೆ ಈ ಹಿಂದಿನಂತೆ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇನ್ನು ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಯೋಗ ಇಡೀ ವಿಶ್ವಕ್ಕೇ ವಿಶ್ವಾಸ ಕೊಟ್ಟಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ಇಂದು ವೈದ್ಯರೂ ರೋಗಿಗಳಿಗೆ ಯೋಗ ಮಾಡಲು ಸೂಚಿಸುತ್ತಿದ್ದಾರೆ ಎಂದಿದ್ದಾರೆ

ಮೋದಿ ಭಾಷಣದ ಪ್ರಮುಖ ಅಂಶಗಳು: 

* ಇಂದು ಇಡೀ ವಿಶ್ವ ಕೊರೋನಾವನ್ನೆದುರಿಸುತ್ತಿದೆ. ಹೀಗಿರುವಾಗ ಯೋಗ ಭರವಸೆಯ ಬೆಳಕಾಗಿದೆ. ಎರಡು ವರ್ಷದಿಂದ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಹಾಗೂ ಭಾರತದಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಾಗಿಲ್ಲ. ಆದರೆ ಯೋಗ ದಿನದ ಪ್ರತಿಯಾಗಿ ಉತ್ಸಾಹ ಕುಂದಿಲ್ಲ.

* ಕೊರೋನಾದಿಂದಾಗಿ ಈ ಬಾರಿ ಈ ಬಾರಿಯ ಯೋಗ ದಿನದ ಥೀಮ್ Yoga For Wellness ಕೋಟ್ಯಾಂತರ ಮಂದಿಯಲ್ಲಿ ಯೋಗದೆಡೆ ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ. ಹೀಗಿರುವಾಗ ಪ್ರತಿ ದೇಶ, ಸಮಾಜ ಹಾಗೂ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತರಾಗಿರಲೆಂದು ನಾನು ಆಶಿಸುತ್ತೇನೆ. ಎಲ್ಲರೂ ಒಂದಾಗಿ ಪರಸ್ಪರರಿಗೆ ಬಲ ತುಂಬೋಣ.

"

* ನಮ್ಮ ಋಷಿ-ಮುನಿಗಳು ಸುಖ ಹಾಗೂ ದುಃಖದಲ್ಲಿ ಒಂದೇ ರೀತಿ ಇರಲು, ಸಂಯಮವನ್ನು ಯೋಗದ ಪ್ಯಾರಾಮೀಟರ್ ಆಗಿಸಿಕೊಂಡಿದ್ದರು. ಇಂದು ಈ ಕೊರೋನಾ ಕಾಲದಲ್ಲಿ ಯೋಗ ಇದನ್ನು ಸಾಬೀತುಪಡಿಸಿದೆ. ಕೊರೋನಾದ ಈ ಒಂದೂವರೆ ವರ್ಷದಲ್ಲಿ ಭಾರತ ಸೇರಿ ಅನೇಕ ರಾಷ್ಟ್ರಗಳು ಬಹುದೊಡ್ಡ ಸಂಕಟವನ್ನೆದುರಿಸಿದೆ.

* ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಯೋಗ ದಿನ ಪುರಾತನ ಸಾಂಸ್ಕೃತಿಕ ಹಬ್ಬವಲ್ಲ. ಇಂತಹ ಸಂಕಟದ ಸಮಯದಲ್ಲಿ, ಇಷ್ಟೊಂದು ಸಮಸ್ಯೆಗಳ ನಡುವೆ ಜನರು ಈ ಯೋಗ ದಿನವನ್ನು ಮರೆಯಬಬಹುದಿತ್ತು. ಇಲ್ಲವೇ ಕಡೆಗಣಿಸಬಹುದಿತ್ತು. ಆದರೆ ಈ ನಡುವೆಯೂ ಜನರಲ್ಲಿ ಯೋಗದ ಪರ ಇರುವ ಉತ್ಸಾಹ ಮತ್ತಷ್ಟು ಹೆಚ್ಚಿದೆ. ಯೋಗದಿಂದ ಪ್ರೀತಿ ಹೆಚ್ಚಿದೆ. 

* ಕಳೆದ ಒಂದೂವರೆ ವರ್ಷದಿಂದ ವಿಶ್ವದ ಮೂಲೆ ಮೂಲೆಯಲ್ಲೂ ಲಕ್ಷಾಂತರ ಮಂದಿ ಯೋಗ ಸಾಧಕರಾಗಿದ್ದಾರೆ. ಸಂಯಮ ಹಾಗೂ ಶಿಸ್ತಿನ ಪರ್ಯಾಯ ಯೋಗ ಎನ್ನಲಾಗುತ್ತದೆ. ಎಲ್ಲರೂ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಲು ಯತ್ನಿಸುತ್ತಿದ್ದಾರೆ.

* ಕೊರೋನಾದಂತಹ ಅದೃಶ್ಯ ವೈರಸ್ ವಿಶ್ವದೆಲ್ಲೆಡೆ ಎಂಟ್ರಿ ಕೊಟ್ಟಾಗ, ಯಾವುದೇ ದೇಶ ಸಾಮರ್ಥ್ಯದಿಂದ, ಸಾಧನಗಳಿಂದ ಹಾಗೂ ಮಾನಸಿಕವಾಗಿ ಎದುರಿಸಲು ತಯಾರಿರಲಿಲ್ಲ. ನಾವೆಲ್ಲರೂ ಇಂತಹ ಕಠಿಣ ಸಂದರ್ಭದಲ್ಲಿ ಯೋಗ ಆತ್ಮವಿಶ್ವಾಸದ ಬಹುದೊಡ್ಡ ಮಾಧ್ಯಮವಾಗಿದ್ದನ್ನು ನೋಡಿದ್ದೇವೆ. ಯೋಗ ಜನರಲ್ಲಿ ನಾವು ಈ ರೋಗವನ್ನು ಮಣಿಸಬಹುದೆಂಬ ವಿಶ್ವಾಸ ಹುಟ್ಟಿಸಿತು.
 
* ನಾನು ಫ್ರಂಟ್‌ಲೈನ್ ವಾರಿಯರ್ಸ್ ಹಾಗೂ ವೈದ್ಯರ ಜೊತೆ ಮಾತನಾಡುವಾಗ ಕೊರೋನಾದ ವಿರುದ್ಧ ಹೋರಾಟದಲ್ಲಿ ತಾವು ಯೋಗವನ್ನೂ ತಮ್ಮ ಸುರಕ್ಷಾ ಕವಚವನ್ನಾಗಿಸಿದ್ದೇವೆಂದು ಹೇಳಿದ್ದಾರೆ. ಡಾಕ್ಟರ್‌ಗಳು ಯೋಗದಿಂದ ತಮ್ಮನ್ನು ತಾವು ಮತ್ತಷ್ಟು ಬಲಶಾಲಿಗಳನ್ನಾಗಿಸಿದ್ದಲ್ಲದೇ, ತಮ್ಮ ರೋಗಿಗಳು ಅತ್ಯಂತ ವೇಗವಾಗಿ ಗುಣಮುಖರಾಗಲು ಇದನ್ನು ಬಳಸಿದರು. ಇಂದು ಆಸ್ಪತ್ರೆಗಳಿಂದ ವೈದ್ಯರು, ನರ್ಸ್‌ಗಳು ರೋಗಿಗಳಿಗೆ ಯೋಗ ಕಲಿಸುತ್ತಿರುವ ಫೋಟೋಗಳು ಬರುತ್ತಿವೆ. ಪ್ರಾಣಾಯಾಮ, ಉಸಿರಾಟದ ವ್ಯಾಯಾಮಗಳನ್ನು ಮಾಡಿಸುತ್ತಾರೆ. ಇದರಿಂದ ಉಸಿರಾಟಕ್ಕೆ ಅದೆಷ್ಟು ಉಪಯೋಗವಾಗುತ್ತದೆ ಎಂದು ಇಡೀ ವಿಶ್ವದ ತಜ್ಞರು ತಿಳಿಸುತ್ತಿದ್ದಾರೆ. 

* ಪ್ರಖ್ಯಾತ ತಮಿಳು ಸಂತ, ಶ್ರೀ ತಿರುವಳ್ಳವರ್ 'ನೋಯಿನಾಡಿ, ನೋಯಿಮುದ್ದಲ್‌ನಾಡಿ ಹದೂ ತನಿಖುಂ ವಾಯನಾಡಿ, ವಾಯಪಚ್ಚೆಯಲ್' ಅಂದರೆ, ಯಾವುದಾದರೂ ರೋಗ ಇದ್ದರೆ ಪತ್ತೆ ಹಚ್ಚಿ. ಬಳಿಕ ಅದನ್ನು ಆಳವಾಗಿ ಅರಿಯಿರಿ. ರೋಗಕ್ಕೇನು ಕಾರಣ ಎಂದು ತಿಳಿದು ಇದಕ್ಕೆ ಪರಿಹಾರ ಕಂಡುಕೊಳ್ಳಿ. ಯೋಗ ಕೂಡಾ ಇದೇ ಮಾರ್ಗ ತಿಳಿಸತ್ತದೆ.

* ಇಂದು ಮೆಡಿಕಲ್ ಸೈನ್ಸ್ ಕೂಡಾ ಚಿಕಿತ್ಸೆ ಜೊತೆ ಹೀಲಿಂಗ್‌ಗೂ ಹೆಚ್ಚಿನ ಮಹತ್ವ ನೀಡುತ್ತದೆ. ಹೀಗಿರುವಾಗ ಯೀಗ ಈ ಹೀಲಿಂಗ್ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 

* ನನಗೆ ಇಂದು ಯೋಗದ ಬಗ್ಗೆ ವಿಶ್ವಾದ್ಯಂತ ಅನೇಕ ವಿಶ್ವಾನಿಗಳು ವಿಭಿನ್ನ ಬಗೆಯ ಸಂಶೋಧನೆ ನಡೆಸುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಯೋಗದಿಂದ ನಮ್ಮ ಶರೀರಕ್ಕಾಗುವ ಲಾಭದ ಬಗ್ಗೆ, ನಮ್ಮ ರೋಗ ನಿರೋಧಕ ಶಕ್ತಿ ಮೇಲಾಗುವ ಸಕಾರಾತ್ಮಕ ಪ್ರಭಾಗಳ ಬಗ್ಗೆ ಅಧ್ಯಯನಗಳಾಗುತ್ತಿವೆ.

* ಇಂದು ಅನೇಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್‌ಗಳ ಆರಂಭದಲ್ಲಿ ಹತ್ತರಿಂದ ಹದಿನೈದು ನಿಮಿಷ ಮಕ್ಕಳಿಗೆ ಯೋಗ ಹಾಗೂ ಪ್ರಾಣಾಯಾಮ ಮಾಡಿಸಲಾಗುತ್ತದೆ. ಇದು ಕೊರೋನಾ ವಿರುದ್ಧ ಹೋರಾಟಕ್ಕೆ ಮಕ್ಕಳನ್ನು ಶಾರೀರಿಕವಾಗಿ ಸಜ್ಜಾಗಿಸುತ್ತಿದೆ.

* ಭಾರತದ ಋಷಿಗಳು ಯೋಗ ಹಾಗೂ ವ್ಯಾಯಾಮದಿಂದ ನಮಗೆ ಉತ್ತಮ ಆರೋಗ್ಯ ಸಿಗುತ್ತದೆ, ಬಲ ಸಿಗುತ್ತದೆ ಹಾಗೂ ದೀರ್ಘ, ಸುಖಕರ ಜೀವನ ಸಿಗುತ್ತದೆ. ನಮ್ಮ ಪಾಲಿಗೆ ಆರೋಗ್ಯವೇ ಎಲ್ಲಕ್ಕಿಂತ ದೊಡ್ಡ ಭಾಗ್ಯವಾಗಿದೆ. ಉತ್ತಮ ಆರೋಗ್ಯ ಇದ್ದರೆ ಎಲ್ಲಾ ಯಶಸ್ಸಿನ ಗುಟ್ಟಾಗುತ್ತದೆ. 

* ಭಾರತದ ಋಷಿಗಳು ಭಾರತದಲ್ಲಿ ಯಾವಾಗೆಲ್ಲಾ ಆರೋಗ್ಯದ ಬಗ್ಗೆ ಮಾತನಾಡಿದ್ದಾರೋ, ಅದೆಲ್ಲವೂ ಕೇವಲ ಶಾರೀರಿಕ ಆರೋಗ್ಯವನ್ನುದ್ದೇಶಿಸಿ ಮಾತನಾಡಿದ್ದಲ್ಲ. ಯೋಗದಲ್ಲಿ ಶಾರೀರಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ಒತ್ತು ಕೊಡಲಾಗಿದೆ. ಪ್ರಾಣಾಯಾಮ, ಧ್ಯಾನ ಮಾಡುವಾಗ ನಮ್ಮ ಅಂತರ್ಚೇತನದ ಅನುಭವ ಮಾಡುತ್ತೇವೆ. 

* ಯೋಗದಿಂದ ನಮಗೆ ನಮ್ಮ ವಿಚಾರಶಕ್ತಿ, ನಮ್ಮ ಆಂತರಿಕ ಸಾಮರ್ಥ್ಯ ಅದೆಷ್ಟು ಹೆಚ್ಚಿದೆ ಎಂದರೆ ವಿಶ್ವದ ಯಾವುದೇ ಸಮಸ್ಯೆ, ಧನಾತ್ಮಕತೆ ನಮ್ಮನ್ನು ಮಣಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ ಮೂಡಿಸುತ್ತದೆ. 

* ಯೋಗ ನಮಗೆ ಒತ್ತಡದಿಂದ ಬಲದೆಡೆಗೆ ಹಾಗೂ ಋಣಾತ್ಮಕತೆಯಿಂದ ಧನಾತ್ಮಕತೆಯೆಡೆ ಕೊಂಡೊಯ್ಯುತ್ತದೆ. ಯೋಗ ನಮಗೆ ಪ್ರಮಾದದಿಂದ ಪ್ರಸಾದದೆಡೆ ಕೊಂಡೊಯ್ಯುತ್ತದೆ. 

* ನಮಗೆ ಅದೆಷ್ಟೇ ಸಮಸ್ಯೆಗಳಿರಬಹುದು ಆದರೆ ಈ ಎಲ್ಲಾ ಸಮಸ್ಯೆಗಳಿಗೆ ನಮ್ಮಲ್ಲೇ ಒಂದು ಪರಿಹಾರ ಇದೆ ಎಂಬುವುದನ್ನು ಯೋಗ ತಿಳಿಸುತ್ತದೆ. ವಿಶ್ವದಲ್ಲೇ ಅತೀ ಹೆಚ್ಚು ಬಲ ನಮ್ಮೊಳಗೇ ಇದೆ ಎಂದು ತಿಳಿಸಿಕೊಡುತ್ತದೆ. 

* ಅನೇಕ ದ್ವಂದ್ವಗಳಿಂದ ಇಂತಹುದ್ದೊಂದು ಶಕ್ತಿ ನಮ್ಮಲ್ಲಿದೆ ಎಂದು ನಮಗೆ ಅರಿವಾಗುವುದಿಲ್ಲ. ಈ ದ್ವಂದ್ವ ನಮ್ಮ ಪರ್ಸನಾಲಿಟಿಯಲ್ಲೂ ಕಂಡು ಬರುತ್ತದೆ. ಇದನ್ನು ದೂರ ಓಡಿಸುವ ಸಾಧನವೇ ಯೋಗ

* ಪುರಾತನ ಕಾಲದಿಂದ ಭಾರತ ನಂಬಿಕೊಂಡು, ಪಾಲಿಸಿಕೊಂಡು ಬಂದ ವಸುದೈವ ಕುಟುಂಬಕಂ ಈಗ ಇಡೀ ವಿಶ್ವವೇ ಒಪ್ಪಿಕೊಳ್ಳುತ್ತಿದೆ. ನಾವೆಲ್ಲರೂ ಪರಸ್ಪರರ ಒಳ್ಳೆಯದಕ್ಕಾಗಿ ಪಗ್ರಾರ್ಥಿಸುತ್ತೇವೆ. 

* ಮಾನವಕುಲಕ್ಕೆ ಸಂಕಟ ಇದೆ ಎಂದಾಗ ಯೋಗ ಆರೋಗ್ಯ ಮರಳಿ ಪಡೆಯಲು ಮಾರ್ಗ ತೋರಿಸುತ್ತದೆ. ಯೋಗ ಒಂದು ಸುಖಕರ ಜೀವನ ನೀಡುತ್ತದೆ. 

* ಭಾರತ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನಿಟ್ಟಾಗ ಅದರ ಹಿಂದೆ ಯೋಗ ವಿಜ್ಞಾನ ಇಡೀ ವಿಶ್ವಕ್ಕೇ ಲಭ್ಯವಾಗಬೇಕೆಂಬ ಉದ್ದೇಶವಿತ್ತು. ಇಂದು ಈ ನಿಟ್ಟಿನಲ್ಲಿ ಭಾರತ ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸೇರಿ ಮತ್ತೊಂದು ಮಹತ್ವಪೂರ್ಣ ಹೆಜ್ಜೆ ಇಟ್ಟಿದೆ. ಈಗ ವಿಶ್ವಕ್ಕೆ Myoga ಆಪ್‌ ಶಕ್ತಿ ಸಿಗಲಿದೆ. ಈ ಆಪ್‌ನಲ್ಲಿ Common Yoga Protocol ಆಧಾರದಲ್ಲಿ ಯೋಗ ತರಬೇತಿಯ ಅನೇಕ ವಿಡಿಯೋಗಳು ವಿಶ್ವದ ಅನೇಕ ಭಾಷೆಗಳಲ್ಲಿ ಲಭ್ಯವಿದೆ.

* ಇದು ಆಧುನಿಕ ತಂತ್ರಜ್ಞಾನ ಹಾಗೂ ಪ್ರಾಚೀನ ವಿಜ್ಞಾನದ ಸಮಾಗಮವಾಗಿದೆ. ಈ ಆಪ್‌ ಯೋಗದ ವಿಸ್ತಾರ ವಿಶ್ವಾದ್ಯಂತ ಹಬ್ಬಿಸುತ್ತದೆ ಹಾಗೂ ಒಂದೇ ವಿಶ್ವ, ಒಂದೇ ಆರೋಗ್ಯ ಸಫಲವಾಗಿಸಲು ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ ಎಂಬ ಭರವಸೆ ಇದೆ.

* ಗೀತಾದಲ್ಲಿ ದುಃಖ ಹಾಗೂ ವಿಯೋಗದಿಂದ ಸಿಗುವ ಮುಕ್ತಿಯನ್ನೇ ಯೋಗ ಎನ್ನುತ್ತೇವೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮಾನವರ ಈ ಯೋಗ ಯಾತ್ರೆ ನಮ್ಮನ್ನು ಹೀಗೇ ಮುಂದುವರೆಸಲಿ.

* ಯಾವುದೇ ಸ್ಥಳವಿರಲಿ, ಯಾವುದೇ ಪರಿಸ್ಥಿತಿ ಇರಲಿ, ಯಾವುದೇ ವಯಸ್ಸಿರಲಿ ಪ್ರತಿಯೊಂದಕ್ಕೂ ಯೋಗದಲ್ಲಿ ಪರಿಹಾರ ಇದೆ.  

* ಇಂದು ವಿಶ್ವದಲ್ಲಿ ಯೋಗದ ಪರ ಆಸಕ್ತಿ ಇರುವವರ ಸಂಖ್ಯೆ ಹೆಚ್ಚಿದೆ. ದೇಶ ವಿದೇಶದಲ್ಲಿ ಯೋಗ ಸಂಸ್ಥೆಗಳು ವೃದ್ಧಿಸುತ್ತಿವೆ. ಹೀಗಿರುವಾಗ ಯೋಗದ ಮೂಲಭೂತ ಸಿದ್ಧಾಂತ ಅದನ್ನು ಖಾಯಂ ಆಗಿರಿಸಿ, ಇದು ಪ್ರತಿಯೊಬ್ಬರಿಗೂ ತಲುಪಲಿ. ನಿರಂತರವಾಗಿ ಸಾಗಲಿ. ಇದು ಅತ್ಯವಶ್ಯಕ. 

Follow Us:
Download App:
  • android
  • ios