ಚಾಟ್‌ಜಿಪಿಟಿ ಕಂಪನಿ ಒಪನ್ಎಐ ಕಂಪನಿಯಿಂದ ವಜಾಗೊಂಡಿದ್ದ ಸಿಇಒ ಸ್ಯಾಮ್‌ ಆಲ್ಟ್‌ಮನ್‌‌ನ್ನು ಮತ್ತೆ ಕಂಪನಿ ಸೇರಿಸಿಕೊಂಡಿದೆ. ಆದರೆ ಇದರ ನಡುವೆ ನಡೆದ ಘಟನೆ ಇದೀಗ ಐಫೋನ್ ಖರೀದಿಸಿದ ಬಳಿಕ ಫೋನ್ ನಿಮ್ಮದಾದರೂ, ನಿಯಂತ್ರಣ ಸಂಪೂರ್ಣ ಆ್ಯಪಲ್ ಬಳಿ ಇರುತ್ತೆ ಅನ್ನೋ ಹೇಳಿಕೆ ಹೊಸ ಸಂಚಲನ ಸೃಷ್ಟಿಸಿದೆ. 

ಸ್ಯಾನ್‌ಫ್ರಾನ್ಸಿಸ್ಕೋ(ಡಿ.11) ಚಾಟ್‌ಜಿಪಿಟಿ ಅಭಿವೃದ್ಧಿಪಡಿಸಿ ವಿಶ್ವದಲ್ಲೇ ಆರ್ಟಿಫಿಶೀಯಲ್ ಇಂಟಲಿಜೆನ್ಸಿನಲ್ಲಿ ಹೊಸ ಅಧ್ಯಾಯ ಬರೆದ ಸ್ಯಾಮ್ ಅಲ್ಟಮನ್ ನೀಡಿದ ಹೇಳಿಕೆ ಇದೀಗ ತಂತ್ರಜ್ಞಾನ, ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬಳಸುವ ಗ್ರಾಹಕರ ಆತಂಕ ಹೆಚ್ಚಿಸಿದೆ. ಕಾರಣ OpenAI ಕಂಪನಿಯಿಂದ ಸ್ಯಾಮ್ ಆಲ್ಟಮನ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಆಲ್ಟ್‌ಮನ್ ಐಫೋನ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿತ್ತು ಎಂದಿದ್ದಾರೆ. ಈ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

OpenAI ಕಂಪನಿ ನನ್ನನ್ನು ಕೆಲಸದಿಂದ ಏಕಾಏಕಿ ವಜಾ ಮಾಡಿತ್ತು. ಈ ಬೆಳವಣಿಗೆ ಗೊಂದಲದಿಂದ ಕೂಡಿತ್ತು. ಇದೇ ವೇಳೆ ನನ್ನ ಐಫೋನ್ ಕೆಲಸ ಮಾಡುವುದನ್ನೂ ನಿಲ್ಲಿಸಿತ್ತು. ನಾನು ಹೊಟೆಲ್‌ನಲ್ಲಿರುವಾಗ ಕಂಪನಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನನಗೆ ಈ ಕುರಿತು ಯಾವುದೇ ಸುಳಿವು, ಸೂಚನೆ ಇರಲಿಲ್ಲ. ಆದರೆ ಕಂಪನಿ ನನ್ನನ್ನು ವಜಾ ಮಾಡಿತ್ತು ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.

ಇಂಜಿನಿಯರ್‌ಗಳ ಪ್ರತಿಭಟನೆ, OpenAI ಸಿಇಒ ಆಗಿ ಮರಳಿದ ಸ್ಯಾಮ್‌ ಆಲ್ಟ್‌ಮನ್‌!

ನನ್ನ ಐಫೋನ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ನಿರಂತರವಾಗಿ ನೋಟಿಫಿಕೇಶ್ ಬಂದಿತ್ತು. ಫೋನ್ ಕಾರ್ಯನಿರ್ವಹಣೆ ಸ್ಥಗಿತಗೊಂಡ ಬೆನ್ನಲ್ಲೇ ಐಮೆಸೇಜ್ ಈ ನೋಟಿಫಿಕೇಶ್ ಕಳುಹಿಸಿತ್ತು. ಕೆಲ ಹೊತ್ತು ಫೋನ್ ಸಂಪೂರ್ಣ ನಿಷ್ಕ್ರೀಯವಾಗಿತ್ತು. ನನಗೆ ಕರೆ, ಸಂದೇಶ, ಇಮೇಲ್ ಸೇರಿದಂತೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಲ ಸಮಯದ ಬಳಿಕ ಒಂದೇ ಸಮನೆ ಹಲವು ಸಂದೇಶಗಳು ಬಂದಿತ್ತು. ಆದರೆ ಈ ಎಲ್ಲಾ ಸಂದೇಶಗಳನ್ನು ಈಗಾಗಲೇ ಓದಲಾಗಿದೆ ಎಂದು ತೋರಿಸುತ್ತಿತ್ತು ಎಂದು ಸ್ಯಾಮ್ ಆಲ್ಟಮನ್ ಹೇಳಿದ್ದಾರೆ.

ಕಂಪನಿಯಿಂದ ವಜಾಗೊಂಡ ಐದೇ ದಿನಕ್ಕೆ ಸ್ಯಾಮ್ ಆಲ್ಟಮನ್ ಮತ್ತೆ ಒಪನ್ಎಐ ಸೇರಿಕೊಂಡಿದ್ದರು. ಸ್ಯಾಮ್‌ ಆಲ್ಟ್‌ಮನ್‌ ಅವರನ್ನು ಓಪನ್‌ ಎಐ ಕಂಪನಿ ಮರಳಿ ತನ್ನ ಸಿಇಒ ಆಗಿ ಮರು ನೇಮಕ ಮಾಡಿದಷ್ಟೇ ಅಲ್ಲ, ಜೊತೆಗೆ ಆಲ್ಟ್‌ಮನ್‌ ವಜಾಕ್ಕೆ ಕಾರಣವಾಗಿದ್ದ ಆಡಳಿತ ಮಂಡಳಿಯನ್ನು ವಜಾ ಮಾಡಿ ಹೊಸ ಆಡಳಿತ ಮಂಡಳಿಯನ್ನು ನೇಮಕ ಮಾಡಲಾಗಿತ್ತು.

ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಬೆಂಬಲ: ವಜಾ ಆಗಿದ್ದ ಆಲ್ಟ್‌ಮನ್‌ಗೆ ಮತ್ತೆ ಓಪನ್‌ ಎಐ ಸಿಇಒ ಸ್ಥಾನ?

ಕಂಪನಿಯ ಹಲವು ಹಿರಿಯ ಅಧಿಕಾರಿಗಳು ಮತ್ತು ನೂರಾರು ಕುಶಲ ಸಿಬ್ಬಂದಿ, ಆಲ್ಟ್‌ಮನ್‌ ಅವರನ್ನು ಮರಳಿ ಕರೆತರದೇ ಇದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ಅದರ ಬೆನ್ನಲ್ಲೇ ಒತ್ತಡಕ್ಕೆ ಮಣಿದಿರುವ ಕಂಪನಿ, ಆಲ್ಟ್‌ಮನ್‌ ಅವರನ್ನು ಮರಳಿ ಸಿಇಒ ಹುದ್ದೆಗೆ ನೇಮಕ ಮಾಡಲು ಮುಂದಾಗಿದೆ. ಓಪನ್‌ಎಐ ಚಾಟ್‌ಜಿಪಿಟಿಯಂಥ ಕೃತಕಬುದ್ಧಿಮತ್ತೆಯ ತಂತ್ರಜ್ಞಾನಕ್ಕೆ ಖ್ಯಾತಿ ಹೊಂದಿದೆ.