ಇಂಜಿನಿಯರ್‌ಗಳ ಪ್ರತಿಭಟನೆ, OpenAI ಸಿಇಒ ಆಗಿ ಮರಳಿದ ಸ್ಯಾಮ್ ಆಲ್ಟ್‌ಮನ್!
ಕೊನೆಗೂ ಇಂಜಿನಿಯರ್‌ಗಳ ಪ್ರತಿಭಟನೆಗೆ ಮಣಿದ ಚಾಟ್ ಜಿಪಿಟಿಯ ಮೂಲ ಕಂಪನಿ ಓಪನ್ ಎಐ ತನ್ನ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರನ್ನು ಮತ್ತೆ ಕಂಪನಿಗೆ ಸೇರಿಸಿಕೊಂಡಿದೆ.
ನವದೆಹಲಿ (ನ.22): ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿರುವ ಚಾಟ್ ಜಿಪಿಟಿಯ ಮೂಲ ಸಂಸ್ಥೆ ಓಪನ್ ಎಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸ್ಯಾಮ್ ಆಲ್ಟ್‌ಮನ್ ಮರಳಿ ನೇಮಕವಾಗಿದ್ದಾರೆ. ಕಳೆದ ವಾರ ಕಂಪನಿಯ ಬೋರ್ಡ್ ಮೀಟಿಂಗ್ ವೇಳೆ ಓಪನ್ ಎಐನ ನಿರ್ದೇಶಕ ಮಂಡಳಿ ಸಿಇಒ ಆಗಿದ್ದ ಸ್ಯಾಮ್ ಆಲ್ಟ್‌ಮನ್ ಅವರನ್ನು ವಜಾ ಮಾಡಿತ್ತು. ಆ ಬಳಿಕ ಕಂಪನಿಯ ಆಂತರಿಕ ವಲಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾದ ಕಾರಣದಿಂದ ಸ್ಯಾಮ್ ಆಲ್ಟ್‌ಮನ್ ವಾಪಾಸ್ ಅದೇ ಹುದ್ದೆಗೆ ಮರಳಲು ಓಪನ್ ಎಐ ತಾತ್ಕಾಲಿಕ ಒಪ್ಪಂದವನ್ನು ನೀಡಿದ.ೆ ಅದರೊಂದಿಗೆ ಬ್ರೆಟ್ ಟೇಲರ್, ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ'ಏಂಜೆಲೊ ಅವರನ್ನು ಒಳಗೊಂಡ ಹೊಸ ಮಂಡಳಿಯನ್ನು ರಚಿಸಿತು, ಡಿ'ಏಂಜೆಲೋ ಹಿಂದಿನ ನಿರ್ದೇಶಕ ಮಂಡಳಿಯಲ್ಲೂ ಸ್ಥಾನ ಪಡೆದಿದ್ದರು.
"ನಾನು ಓಪನ್‌ಎಐ ಅನ್ನು ಪ್ರೀತಿಸುತ್ತೇನೆ, ಮತ್ತು ಕಳೆದ ಕೆಲವು ದಿನಗಳಿಂದ ನಾನು ಮಾಡಿದ ಎಲ್ಲವೂ ಈ ತಂಡವನ್ನು ಮತ್ತು ಅದರ ಮಿಷನ್ ಅನ್ನು ಒಟ್ಟಿಗೆ ಇರಿಸುವ ಕಾರ್ಯದಲ್ಲಿದೆ. ನಾನು ಒಂದು ದಿನದ ಹಿಂದೆ ಮೈಕ್ರೋಸಾಫ್ಟ್‌ಅನ್ನು ಸೇರಲು ನಿರ್ಧಾರ ಮಾಡಿದಾಗ, ನನಗೆ ಉತ್ತಮ ಮಾರ್ಗವಿದೆ ಎನ್ನುವುದು ನನಗೆ ಸ್ಪಷ್ಟವಾಗಿತ್ತು. ಅಲ್ಲಿಯ ತಂಡ ಕೂಡ ಉತ್ತಮವಾಗಿತ್ತು. ಹೊಸ ಆಡಳಿತ ಮಂಡಳಿಯೊಂದಿಗೆ ಸತ್ಯಾ ಅವರ (ಮೈಕ್ರೋಸಾಫ್ಟ್ ಸಿಒಒ ಸತ್ಯ ನಾದೆಳ್ಳ) ಬೆಂಬಲದೊಂದಿಗೆ, ನಾನು ಓಪನ್ ಎಐಗೆ ಮರಳುವ ದಿನವನ್ನು ನೋಡುತ್ತಿದ್ದೇನೆ. ಅದರೊಂದಿಗೆ ಮೈಕ್ರೋಸಾಫ್ಟ್ ಜೊತೆ ನಮ್ಮ ಬಲವಾದ ಪಾಲುದಾರಿಕೆಯನ್ನು ನಿರ್ಮಾಣ ಮಾಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಓಪನ್ ಎಐ ಸಿಇಒ ಆಗಿ ಮರಳಿದ ಬಳಿಕ ಸ್ಯಾಮ್ ಆಲ್ಟ್‌ಮನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾದೆಳ್ಳ ಕೂಡ ಸ್ಯಾಮ್ ಆಲ್ಟ್‌ಮನ್, ಓಪನ್ ಎಐಗೆ ಮರಳಿರುವುದನ್ನು ಖುಷಿ ಪಟ್ಟಿದ್ದಾರೆ. ಓಪನ್ ಎಐ ಬೋರ್ಡ್ ನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು, ಇದು ಸ್ಥಿರ ಮತ್ತು ಪರಿಣಾಮಕಾರಿ ಆಡಳಿತವನ್ನು ಸಾಧಿಸುವ ನಿಟ್ಟಿನಲ್ಲಿ ನಿರ್ಣಾಯಕ ಮೊದಲ ಹೆಜ್ಜೆ ಎಂದು ಪರಿಗಣಿಸಿದ್ದಾರೆ.
OpenAI ಬೋರ್ಡ್‌ನಲ್ಲಿನ ಬದಲಾವಣೆಗಳಿಂದ ನಾವು ಉತ್ತೇಜಿತರಾಗಿದ್ದೇವೆ. ಇದು ಹೆಚ್ಚು ಸ್ಥಿರವಾದ, ಉತ್ತಮ ತಿಳುವಳಿಕೆಯುಳ್ಳ ಮತ್ತು ಪರಿಣಾಮಕಾರಿ ಆಡಳಿತದ ಹಾದಿಯಲ್ಲಿ ಇದು ಮೊದಲ ಅತ್ಯಗತ್ಯ ಹೆಜ್ಜೆಯಾಗಿದೆ ಎಂದು ನಾವು ನಂಬುತ್ತೇವೆ. ಸ್ಯಾಮ್, ಗ್ರೆಗ್ ಮತ್ತು ನಾನು ಮಾತನಾಡಿದ್ದೇವೆ ಮತ್ತು ಅವರು ಪ್ರಮುಖ ಪಾತ್ರವನ್ನು ಹೊಂದಿದ್ದಾರೆಂದು ಒಪ್ಪಿಕೊಂಡರು. OAI ಅಭಿವೃದ್ಧಿ ಹೊಂದುವುದನ್ನು ಮತ್ತು ಅದರ ಧ್ಯೇಯವನ್ನು ನಿರ್ಮಿಸುವುದನ್ನು ಖಾತ್ರಿಪಡಿಸುವಲ್ಲಿ OAI ನಾಯಕತ್ವದ ತಂಡದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಸತ್ಯ ನಾಡೆಲ್ಲಾ ಹೇಳಿದ್ದಾರೆ. "ನಮ್ಮ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ಮತ್ತು ಈ ಮುಂದಿನ ಪೀಳಿಗೆಯ AI ನ ಮೌಲ್ಯವನ್ನು ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ತಲುಪಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಅವರು ಹೇಳಿದರು.
ಚಾಟ್ ಜಿಪಿಟಿಯ ಮೂಲ ಕಂಪನಿ ಓಪನ್ ಎಐ ಸಹ ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್ ಕಂಪನಿಯಿಂದಲೇ ವಜಾ!
ದಿ ವರ್ಜ್ ಮಾಡಿರುವ ವರದಿಯ ಪ್ರಕಾರ, ಸ್ಯಾಮ್ ಆಲ್ಟ್‌ಮನ್ ಅವರು ಓಪನ್ ಎಐಗೆ ಹಿಂತಿರುಗಿದ್ದು ಅಚ್ಚರಿಯ ವಿಚಾರವಾಗಿದೆ. ಇದು ಅವರ ನಿರ್ಗಮನಕ್ಕಿಂತ ಹೆಚ್ಚು ಅಚ್ಚರಿಯ ವಿಚಾರ ಎಂದು ವರದಿ ಮಾಡಿದೆ. ಕಳೆದ ಶುಕ್ರವಾರ ಓಪನ್ ಎಐ ಈ ನಿರ್ಧಾರ ಮಾಡಿತ್ತು. ಆಲ್ಟ್‌ಮನ್ ಅವರನ್ನು ಹೊರಹಾಕಿದ ಬಳಿಕ ಕಳೆದ ಮೂರು ದಿನಗಳ ಕಾಲ ಇಬ್ಬರು ಸಿಇಒಗಳ ಜೊತೆ ಕೆಲಸ ಮಾಡುವ ಮೂಲಕ ಅವರನ್ನು ಮರಳಿ ಕರೆತರುವ ಯಾವುದೇ ಇಂಗಿತವಿಲ್ಲ ಎಂದು ತಿಳಿಸಿತ್ತು. ಇದರ ನಡುವೆ ಓಪನ್ ಎಐನ ಇಂಜಿನಿಯರ್‌ಗಳು ಪ್ರತಿಭಟನೆಗ ಮಾಡಲು ಆರಂಭಿಸಿದ್ದರು.
Twitch ಮಾಜಿ ಸಿಇಒ ಎಮ್ಮೆಟ್ ಶಿಯರ್ ಒಪನ್ ಎಐ ನೂತನ ಸಾರಥಿ; ಮೈಕ್ರೋಸಾಫ್ಟ್ ಸೇರಿದ ಸ್ಯಾಮ್ ಆಲ್ಟ್‌ಮನ್
ಹಾಗೇನಾದರೂ ಆಲ್ಟ್‌ಮನ್ ವಾಪಾಸ್ ಬರದೇ ಇದ್ದಲ್ಲಿ ತಾವೂ ಕೂಡ ಆಲ್ಟ್‌ಮನ್ ಹಾಗೂ ಓಪನ್‌ಎಐ ಸಹ ಸಂಸ್ಥಾಪಕ ಗ್ರೇಗ್ ಬ್ರೂಕ್‌ಮನ್ ಅವರೊಂದಿಗೆ ಮೈಕ್ರೋಸಾಫ್ಟ್‌ಗೆ ಸೇರುವುದಾಗಿ ಎಚ್ಚರಿಸಿದ್ದರು. ಹೊಸ ನಿರ್ದೇಶಕ ಮಂಡಳಿ ತಕ್ಷಣವೇ ವಿಸರ್ಜನೆ ಆಗಬೇಕು ಎಂದು ಒತ್ತಾಯ ಮಾಡಿದ್ದರು. ಈ ಎಲ್ಲದರ ನಡುವೆ ಸ್ಯಾಮ್ ಆಲ್ಟ್‌ಮನ್ ಅವರನ್ನು ವಜಾ ಮಾಡಿದ್ದರ ಹಿಂದಿನ ಕಾರಣವೇನು ಅನ್ನೋದನ್ನು ಓಪನ್ ಎಐ ಸ್ಪಷ್ಟವಾಗಿ ತಿಳಿಸಿರಲಿಲ್ಲ. ನುವಾರ, ನಿರ್ಣಾಯಕ ಮಂಡಳಿಯ ಸದಸ್ಯರಾದ ಇಲ್ಯಾ ಸುಟ್‌ಸ್ಕೇವರ್, ಆಲ್ಟ್‌ಮ್ಯಾನ್‌ನ ಪರ ಮಾತನಾಡಿದ್ದಾರೆ.