ಮುಂಬೈ(ಜು.03): ವರ್ಕ್ ಫ್ರಮ್ ಹೋಮ್, ಗೆಳೆಯರ ಮಾತುಕತೆ ಸೇರಿದಂತೆ ಕೊರೋನಾ ವೈರಸ್ ಸಂದರ್ಭದಲ್ಲಿ ಬಹುತೇಕರು Zoom ವಿಡಿಯೋ ಮೀಟಿಂಗ್ ಆ್ಯಪ್  ಮೊರೆ ಹೋಗಿದ್ದಾರೆ. ಆದರೆ ಸರ್ಕಾರ ಝೂಮ್ ಬಳಸದಂತೆ ಸೂಚಿಸಿತ್ತು. ಝೂಮ್ ಮೂಲ ಅಮೆರಿಕವಾಗಿದ್ದರೂ, ಚೀನಾದ ಬಹುತೇಕರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಝೂಮ್ ಅಬ್ಬರ ಹೆಚ್ಚಾಗುತ್ತಿದ್ದಂತೆ ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಆಂದೋಲನಗಳು ನಡೆಯತೊಡಗಿದೆ. ಇದರ ನಡುವೆ ಇದೀಗ ಭಾರತಲ್ಲಿ ಜಿಯೋ ಮೂಲಕ ಟಿಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಮುಖೇಶ್ ಅಂಬಾನಿ ಜೂಮ್‌ಗೆ ಪ್ರತಿಸ್ಪರ್ಧಿಯಾಗಿ ಜಿಯೋ ಮೀಟ್ ಲಾಂಚ್ ಮಾಡಿದ್ದಾರೆ.

4.5 ಲಕ್ಷ ಕೋಟಿ ಆಸ್ತಿ: ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ!.

ಜೂಮ್‌ಗೆ ಪ್ರತಿಸ್ಪರ್ಧಿಯಾಗಿರುವ Jiomeet ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ವಿಡಿಯೋ ಮೀಟಿಂಗ್ ಸೇವೆಗಿಂತ ಉತ್ತಮವಾಗಿದೆ. ಜೂಮ್, ಗೂಗಲ್ ಮೀಟ್ ಸೇರಿದಂತೆ ಕೆಲ ವಿಡಿಯೋ ಕಾಲ್ ಮೀಟಿಂಗ್ ಸೇವೆಯನ್ನು ತಡೆರಹಿತವಾಗಿ ಬಳಸಲು ಪಾವತಿಸಬೇಕು. ಇಲ್ಲವಾದಲ್ಲಿ 40 ನಿಮಿಷ ಪೂರ್ಣಗೊಳ್ಳುತ್ತಿದ್ದಂತೆ ಝೂಮ್ ಸೇವೆ ಕಡಿತಗೊಳ್ಳಲಿದೆ. ಆದರೆ ಜಿಯೋಮೀಟ್ ಸತತ 24 ಗಂಟೆ ಉಚಿತವಾಗಿ ಹಾಗೂ ನಿರಂತರವಾಗಿ ಸೇವೆ ನೀಡಲಿದೆ. ಇಷ್ಟೇ ಅಲ್ಲ ಯಾವುದೇ ಪಾವತಿ ಇಲ್ಲ.

ಲಾಕ್‌ಡೌನ್‌ನ 58 ದಿನದಲ್ಲಿ 1.68 ಲಕ್ಷ ಕೋಟಿ ರೂ ಸಂಗ್ರಹಿಸಿ ದಾಖಲೆ ಬರೆದ ರಿಲಾಯನ್ಸ್!.

ಏಕ ಕಾಲದಲ್ಲಿ 100 ಮಂದಿ Jiomeetನಲ್ಲಿ ಪಾಲ್ಗೊಳ್ಳಬಹುದು. ನೂತನವಾಗಿ ಲಾಂಚ್ ಮಾಡಿರುವ ಎಲ್ಲವೂ ಉಚಿತವಾಗಿದೆ. ಗ್ರಾಹಕರ ಸುರಕ್ಷತೆ, ಮಾಹಿತಿ ಎಲ್ಲವೂ ಭದ್ರ.  ಪ್ರತಿ ಕಾಲ್‌ಗೂ ಪಾಸ್‌ವರ್ಡ್ ಸೇರಿದಂತೆ ಹಲವು ಸುರಕ್ಷತಾ ವಿಧಾನ ನಮೂದಿಸಬೇಕು. ಸದ್ಯ ಭಾರತದಲ್ಲಿ 35 ಮಿಲಿಯನ್ ಸಕ್ರಿಯ ಜಿಯೋ ಬಳಕೆದಾರಿದ್ದಾರೆ.