4.5 ಲಕ್ಷ ಕೋಟಿ ಆಸ್ತಿ: ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ!

4.5 ಲಕ್ಷ ಕೋಟಿ ಆಸ್ತಿ: ಅಂಬಾನಿ ಈಗ ವಿಶ್ವದ 11ನೇ ಶ್ರೀಮಂತ| 4.58 ಲಕ್ಷ ಕೋಟಿ ಕೋಟಿ ರು. ಸಂಪತ್ತು

Mukesh Ambani Is World 11th Richest Person After Selling Bits Of Jio Over Two Months

ನವದೆಹಲಿ(ಜೂ.20): ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಇದೀಗ ವಿಶ್ವದ 11ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಂಬಾನಿ ಅವರ ಸಂಪತ್ತಿನ ಮೌಲ್ಯ ಮೊದಲ ಬಾರಿಗೆ 60 ಬಿಲಿಯನ್‌ ಡಾಲರ್‌ ದಾಟಿದೆ.

ಬ್ಲೂಮ್‌ಬರ್ಗ್‌ ಬಿಲಿಯನೇ​ರ್‍ಸ್ (ಕೋಟ್ಯಧೀಶರು) ಸೂಚ್ಯಂಕದ ಪ್ರಕಾರ, ಮುಕೇಶ್‌ ಅಂಬಾನಿ ಅವರ ನೈಜ ಸಮಯದ ಆಸ್ತಿ ಮೌಲ್ಯ 60.3 ಬಿಲಿಯನ್‌ ಡಾಲರ್‌ (4.58 ಲಕ್ಷ ಕೋಟಿ) ಆಗಿದೆ. ರಿಲಯನ್ಸ್‌ನ ಷೇರು ಮೌಲ್ಯ ಏರಿಕೆ ಕಂಡಿದ್ದರಿಂದ ಅಂಬಾನಿ ಆಸ್ತಿ ಮೌಲ್ಯ ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಒಂದೇ ದಿನದಲ್ಲಿ 1.16 ಬಿಲಿಯನ್‌ (8816 ಕೋಟಿ ರು.) ಹೆಚ್ಚಳವಾಗಿದೆ. ಈ ಮೂಲಕ ರಿಲಯನ್ಸ್‌ನ ಮಾರುಕಟ್ಟೆಮೌಲ್ಯ 11.50 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ.

ಹೀಗಾಗಿ ಮುಕೇಶ್‌ ಅಂಬಾನಿ ಹೊಂದಿರುವ ಷೇರುಗಳ ಮೌಲ್ಯ ವೃದ್ಧಿಯಾಗಿದೆ. ತನ್ಮೂಲಕ ಸ್ಪೇನ್‌ನ ಉದ್ಯಮಿ ಅಮಾನ್ಸಿಯೋ ಒರ್ಟೆಗಾ (4.48 ಲಕ್ಷ ಕೋಟಿ ರು.) ಅವರನ್ನು ಹಿಂದಿಕ್ಕಿ ಮುಕೇಶ್‌ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಏರಿದ್ದಾರೆ. ಈ ಪಟ್ಟಿಯಲ್ಲಿ ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ (12 ಲಕ್ಷ ಕೋಟಿ ರು.) ಮೊದಲ ಸ್ಥಾನ ಹಾಗೂ ಬಿಲ್‌ಗೇಟ್ಸ್‌ (8.58 ಲಕ್ಷ ಕೋಟಿ ರು.) 2ನೇ ಸ್ಥಾನದಲ್ಲಿದ್ದಾರೆ.

Latest Videos
Follow Us:
Download App:
  • android
  • ios