ನಿಷೇಧಿತ ವಿಷಯ ಡಿಲೀಟ್ ಮಾಡದ ಗೂಗಲ್‌ಗೆ ದುಬಾರಿ ದಂಡ ವಿಧಿಸಿದ ರಷ್ಯಾ!

  • ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಐಟಿ ನಿಯಮ ಮತ್ತಷ್ಟು ಕಠಿಣ
  • ನಿಷೇಧಿತ ಕಂಟೆಂಟ್ ತೆಗೆಯದ ಗೂಗಲ್ ಮೇಲೆ ಕಠಿಣ ಕ್ರಮ ಕೈಗೊಂಡ ರಷ್ಯಾ
  • ಗೂಗಲ್‌ಗೆ ದಂಡ ಹಾಕಿದ ಮಾಸ್ಕೋ ಕೋರ್ಟ್ 
Moscow court Fined google for violating Russian rules on not deleting banned content ckm

ಮಾಸ್ಕೋ(ಆ.17): ಭಾರತದಲ್ಲಿ ಇತ್ತೀಚೆಗೆ ಹೊಸ ಐಟಿ ನಿಯಮ ಭಾರಿ ಸದ್ದು ಮಾಡಿತ್ತು. ಪರ ವಿರೋಧಗಳು ಕೇಳಿಬಂದಿತ್ತು. ಭಾರತ ಈಗಷ್ಟೇ ಹೊಸ ನಿಯಮ ಜಾರಿಗೊಳಿಸಿದೆ. ಆದರೆ ಇತರ ದೇಶಗಳು ಐಟಿ ನಿಯಮ ಪರಿಷ್ಕರಿಸಿ ವರ್ಷಗಳೇ ಉರುಳಿವೆ. ಇದೀಗ ನಿಯಮ ಉಲ್ಲಂಘಿಸಿದ ಐಟಿ ದಿಗ್ಗಜರಿಗೆ ದಂಡ ವಿಧಿಸುತ್ತಿದೆ. ಇದೀಗ ನಿಷೇಧಿತ ವಿಷಯ ಡಿಲೀಟ್ ಮಾಡದ ಗೂಗಲ್‌ಗೆ ರಷ್ಯಾ ದುಬಾರಿ ದಂಡ ವಿಧಿಸಿದೆ.

ಕೇಂದ್ರದ ವಿರುದ್ಧ ಸಮರ ಸಾರಿದ್ದ ಟ್ವಿಟರ್‌ಗೆ ಹಿನ್ನಡೆ; ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಎಂದ ಕೋರ್ಟ್!

ಆಲ್ಫಾಬೆಟ್ ಇಂಕ್  ಗೂಗಲ್‌ಗೆ ರಷ್ಯಾ ಐಟಿ ನಿಯಮ ಉಲ್ಲಂಘನೆ ಕುರಿತು ನೊಟೀಸ್ ನೀಡಲಾಗಿತ್ತು. ಇಷ್ಟೇ ಅಲ್ಲ ನಿಯಮ ಉಲ್ಲಂಘನೆಗೆ ಕಾರಣವಾಗಿದ್ದ ನಿಷೇಧಿತ ಕಂಟೆಂಟ್ ತೆಗೆದುಹಾಕುವಂತೆ ಸೂಚಿಸಲಾಗಿತ್ತು. ಆದರೆ ಕಂಟೆಂಟ್ ಬ್ಯಾನ್ ಮಾಡದ ಗೂಗಲ್‌ಗೆ ಮಾಸ್ಕೋ ಕೋರ್ಟ್ ದಂಡ ವಿಧಿಸಿದೆ. $ 54,444(ಅಮೆರಿಕನ್ ಡಾಲರ್) ಮೊತ್ತ ದಂಡ ಹಾಕಿದೆ.

ರಷ್ಯಾ ನಿಯಮ ಉಲ್ಲಂಘನೆಗೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ. ಇಷ್ಟೇ ಅಲ್ಲ ಈ ಕೂಡಲೇ ನಿಷೇಧಿತ ಕಂಟೆಂಟ್ ಡಿಲೀಟ್ ಮಾಡುವಂತೆ ಮಾಸ್ಕೋ ಕೋರ್ಟ್ ಗೂಗಲ್‌ಗೆ ತಾಕೀತು ಮಾಡಿದೆ.  ಇತ್ತ ಫೇಸ್‌ಬುಕ್ ಹಾಗೂ ವ್ಯಾಟ್ಸ್ಆ್ಯಪ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ಕಡೆಗೂ ಮೆತ್ತಗಾದ ಟ್ವೀಟರ್‌:ಕಾಯಂ ಅಧಿಕಾರಿಗಳ ನೇಮಕ!

ಫೇಸ್‌ಬುಕ್ ಹಾಗೂ ವ್ಯಾಟ್ಸ್ಆ್ಯಪ್ ನಿಷೇಧಿತ ಕಂಟೇಂಟ್ ಡಿಲೀಟ್ ಮಾಡಲು ಸೂಚಿಸಲಾಗಿದೆ.  ಇದೇ ವೇಳೆ ಫೇಸ್‌ಬುಕ್ ಹಾಗೂ ವ್ಯಾಟ್ಸ್ಆ್ಯಪ್ ವಿರುದ್ಧ ರಷ್ಯಾ ಆಡಳಿತಾತ್ಮಕ ಕ್ರಮ ಆರಂಭಿಸಿದೆ. ರಷ್ಯಾ ಬಳಕೆದಾರರ ಡೇಟಾವನ್ನು ಸ್ಥಳೀಕರಿಸುವಲ್ಲಿ ವಿಫಲವಾಗಿರುವ ಈ ಕ್ರಮ ತೆಗೆದುಕೊಂಡಿದೆ.
 

Latest Videos
Follow Us:
Download App:
  • android
  • ios