ತಾವೇ ಕೆಳಗೆ ಬಿದ್ದು ಬೈಕ್ ಸವಾರನೊಂದಿಗೆ ವಾದಕ್ಕಿಳಿದ ಜೋಡಿ: ಕ್ಯಾಮರಾದಿಂದಾಗಿ ಬಚಾವಾದ ಬೈಕರ್
ರಸ್ತೆ ಅಪಘಾತಗಳಲ್ಲಿ ಕೆಲವೊಮ್ಮೆ ತಪ್ಪಿಲ್ಲದೇ ಶಿಕ್ಷೆಗೊಳಗಾಗುವ ಸನ್ನಿವೇಶಗಳು ನಡೆದಿರುವುದನ್ನು ನೀವು ನೋಡಿರಬಹುದು. ಹೇಗೋ ಅಚಾನಕ್ ಆಗಿ ಅಪಘಾತವಾಗುತ್ತದೆ. ಈ ವೇಳೆ ಸಮೀಪದಲ್ಲಿದ್ದ ವಾಹನವೇ ತನ್ನ ವಾಹನಕ್ಕೆ ಡಿಕ್ಕಿ ಹೊಡೆಯಿತು ಎಂದು ಜಗಳವಾಗುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕ್ಯಾಮರಾವೊಂದು ಬೈಕರ್‌ನನ್ನು ಅನಾಹುತದಿಂದ ಪಾರು ಮಾಡಿದೆ.
ರಸ್ತೆ ಅಪಘಾತಗಳಲ್ಲಿ ಕೆಲವೊಮ್ಮೆ ತಪ್ಪಿಲ್ಲದೇ ಶಿಕ್ಷೆಗೊಳಗಾಗುವ ಸನ್ನಿವೇಶಗಳು ನಡೆದಿರುವುದನ್ನು ನೀವು ನೋಡಿರಬಹುದು. ಹೇಗೋ ಅಚಾನಕ್ ಆಗಿ ಅಪಘಾತವಾಗುತ್ತದೆ. ಈ ವೇಳೆ ಸಮೀಪದಲ್ಲಿದ್ದ ವಾಹನವೇ ತನ್ನ ವಾಹನಕ್ಕೆ ಡಿಕ್ಕಿ ಹೊಡೆಯಿತು ಎಂದು ಜಗಳವಾಗುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಆದರೆ ಹಿಂಬದಿ ಇದ್ದ ಬೈಕ್ ಸವಾರನ ಅದೃಷ್ಟ ಚೆನ್ನಾಗಿತ್ತೋ ಏನೋ ಆತನ ವಾಹನದಲ್ಲಿದ್ದ ಕ್ಯಾಮರಾದಲ್ಲಿ ಘಟನೆ ಸೆರೆಯಾದ ಕಾರಣ ಆತ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ.
ಜೋಡಿಯೊಂದು ಬೈಕೊಂದರಲ್ಲಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದು, ದೂರ ಹೋಗುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಇವರು ಪ್ರಯಾಣಿಸುತ್ತಿದ್ದ ಸ್ಕೂಟಿ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತದೆ. ಸ್ಕೂಟರ್‌ನಲ್ಲಿದ್ದ ಇಬ್ಬರು ಕೆಳಗೆ ಬೀಳುತ್ತಾರೆ. ಕೂಡಲೇ ಮೇಲೆದ್ದ ಮಹಿಳೆ ಸೀದಾ ಬಂದು ಹಿಂಬದಿ ಬರುತ್ತಿದ್ದ ಬೈಕ್ ಸವಾರನಿಗೆ ಧಮ್ಕಿ ಹಾಕಲು ಶುರು ಮಾಡುತ್ತಾಳೆ. ನೀವು ಬೈಕ್‌ನಲ್ಲಿ ಹಿಂದಿನಿಂದ ಗುದ್ದಿದ್ದರಿಂದಲೇ ನಾವು ಕೆಳಗೆ ಬಿದ್ದೆವು ಎಂದು ಮಹಿಳೆ ಆರೋಪ ಮಾಡುತ್ತಾಳೆ. ಆದರೆ ಈತ ತನ್ನ ವಾಹನದಲ್ಲಿದ್ದ ಕ್ಯಾಮರಾ ರೆಕಾರ್ಡಿಂಗ್ ಅನ್ನು ಅವರಿಗೆ ತೋರಿಸಲು ಯತ್ನಿಸುತ್ತಾನೆ ಆದಾಗ್ಯೂ ಆಕೆ ರೆಕಾರ್ಡಿಂಗ್ ನೋಡಲು ಇಷ್ಟ ಪಡದೇ ಈತನೊಂದಿಗೆ ವಾದ ಮುಂದುವರೆಸುತ್ತಾಳೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಡ್ಯಾಸ್‌ಕ್ಯಾಮ್‌ಗಳ ಅಗತ್ಯತೆ ಬಗ್ಗೆ ಚರ್ಚೆ ಹುಟ್ಟಿಸಿದೆ. ವಿದೇಶಗಳಲ್ಲಿ ಇಂತ ಡ್ಯಾಶ್‌ಕ್ಯಾಮ್‌ಗಳ ಬಳಕೆ ಸಾಮಾನ್ಯವಾಗಿದೆ. ಆದರೆ ಭಾರತದಲ್ಲಿ ಇಲ್ಲ. ವೈರಲ್ ವೀಡಿಯೊದಲ್ಲಿ, ಸ್ಕೂಟರ್ ತನ್ನ ಸಮತೋಲನವನ್ನು ಕಳೆದುಕೊಂಡು ರಸ್ತೆಯಲ್ಲಿ ಬೀಳುತ್ತದೆ. ಅದರಲ್ಲಿರುವ ಸವಾರರು ನೆಲಕ್ಕೆ ಬೀಳುತ್ತಾರೆ. ಘಟನೆಯಲ್ಲಿ ಅವರಿಗೇನೂ ತೀವ್ರವಾದ ಗಾಯಗಳಾಗಿಲ್ಲ.
ರಸ್ತೆಯಲ್ಲಿ ಜಗಳ: ಬೈಕರ್‌ಗೆ ಬೇಕಂತಲೇ ಡಿಕ್ಕಿ ಹೊಡೆದು ಬೀಳಿಸಿದ ಸ್ಕಾರ್ಪಿಯೋ ಚಾಲಕ
ಇವರ ವಾಹನದ ಹಿಂದೆಯೇ ವೇಗವಾಗಿ ಬರುತ್ತಿದ್ದ ಬೈಕ್ ಸವಾರ ಇವರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್‌ಗಳನ್ನು ಹಿಡಿಯುತ್ತಿರುವುದು ಕಂಡುಬಂದಿದೆ. ಆದರೆ ಕೆಳಗೆ ಬಿದ್ದ ಮಹಿಳೆ ಮೇಲೆದ್ದು ಬಂದು ನಿಮಗೆ ಕಾಣಿಸುವುದಿಲ್ಲವೇ ಎಂದು ಕೇಳುತ್ತಾಳೆ. ಅದಕ್ಕೆ ಪ್ರತಿಯಾಗಿ ಈತ ನನ್ನ ಗಾಡಿ ನಿಮಗೆ ಡಿಕ್ಕಿ ಹೊಡೆದಿಲ್ಲ ಎಂದು ಬೈಕರ್ ಹೇಳುತ್ತಾನೆ. ಇದಾದ ಬಳಿಕ ದಂಪತಿ ಆತನ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲು ಬಯಸಿದ್ದಾರೆ. ಅಷ್ಟರಲ್ಲಿ ಬೈಕರ್ ಪೊಲೀಸರಿಗೆ ಹೋಗಿ ತನ್ನ ಬೈಕ್‌ನ ರೆಕಾರ್ಟಿಂಗ್ ಅನ್ನು ತೋರಿಸಿದ್ದಾರೆ.
ಲಡಾಖ್‌ನಲ್ಲಿ ಭಾರೀ ರಸ್ತೆ ಅಪಘಾತ, ನದಿಗುರುಳಿದ 26 ಯೋಧರಿದ್ದ ಸೇನಾ ವಾಹನ, 7 ಸಾವು!
ಈ ವೀಡಿಯೊದ ಉದ್ದೇಶವು ಯಾವ ರೀತಿ ಘಟನೆಗಳು ಸಂಭವಿಸಬಹುದು ಎಂಬುದನ್ನು ತೋರಿಸುವ ಸಲುವಾಗಿ ಆಗಿದೆ. ಮತ್ತು ಒಂದು ಸಣ್ಣ ತಪ್ಪು ನಡೆ ನಿಮ್ಮ ತಪ್ಪಲ್ಲದಿದ್ದರೂ ಸಹ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಯಾವಾಗಲೂ ನಿಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಿರಿ ಮತ್ತು ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಬೈಕರ್ ಆನ್‌ಲೈನ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ಅಜಾಗರೂಕ ಬೈಕರ್‌ಗಳು ಪಾದಚಾರಿಗಳು ಮತ್ತು ಇತರ ವಾಹನಗಳಿಗೆ ಆಗಾಗ್ಗೆ ಡಿಕ್ಕಿ ಹೊಡೆಯುತ್ತಾರೆ ಎಂದು ಹೇಳಿದರೆ, ಮತ್ತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬೈಕರ್‌ನನ್ನು ಬೆಂಬಲಿಸಿದರು, ಈ ಬಾರಿ ಅದು ಹಾಗಲ್ಲ ಎಂದು ಹೇಳಿದರು.