ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಚಾಲಕನೊಬ್ಬ ವಾಗ್ವಾದದ ನಂತರ ಬೈಕ್ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. 

ನವದೆಹಲಿ: ಕೆಲವೊಮ್ಮೆ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರ ಮಧ್ಯೆ ವಾಗ್ವಾದವಾಗುವುದನ್ನು ನೋಡಿದ್ದೇವೆ. ಓವರ್‌ ಟೇಕ್‌ ಮಾಡಿದ್ದಕ್ಕೆ ಕೊಲೆಯಾದ ಘಟನೆಯೂ ನಡೆದಿದೆ. ಅದೇ ರೀತಿ ದೆಹಲಿಯಲ್ಲಿ ನಡೆದ ಉದ್ದೇಶ ಪೂರಿತ ಅಪಘಾತ ಪ್ರಕರಣವೊಂದರ ವಿಡಿಯೋ ವೈರಲ್ ಆಗಿದ್ದು, ಬೈಕರ್‌ಗಳನ್ನುಬೆಚ್ಚಿ ಬೀಳಿಸುವಂತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದ (Arjan Garh metro station) ಬಳಿ ಇಂದು (ಜೂನ್ 6, 2022) ಬೆಳಗ್ಗೆ ಈ ಆಘಾತಕಾರಿ ಘಟನೆ ನಡೆದಿದೆ. 

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಚಾಲಕನೊಬ್ಬ ವಾಗ್ವಾದದ ನಂತರ ಬೈಕ್ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಆತನ ಹಿಂದೆಯೇ ಬರುತ್ತಿದ್ದ ಇನ್ನೋರ್ವ ಬೈಕ್ ಸವಾರ ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆಘಾತಕಾರಿ ಘಟನೆಯ ವಿಡಿಯೋ ಭಯ ಮೂಡಿಸುವಂತಿದೆ. ಸುದ್ದಿಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬೈಕ್ ಸವಾರ ಮಹೀಂದ್ರಾ ಸ್ಕಾರ್ಪಿಯೋ ಚಾಲಕನೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು, ನಂತರ ಮಹೀಂದ್ರಾ ಸ್ಕಾರ್ಪಿಯೋದ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ಆತನನ್ನು ಬೀಳಿಸಿ ವೇಗವಾಗಿ ಮುಂದೆ ಸಾಗುತ್ತಾನೆ.

Scroll to load tweet…

ಈ ಬೈಕ್ ಸವಾರ ತನ್ನ 8 ರಿಂದ 10 ಸ್ನೇಹಿತರೊಂದಿಗೆ ಗುರುಗ್ರಾಮದಿಂದ ( Gurugram) ಹಿಂತಿರುಗುತ್ತಿದ್ದನು. ಹಿಂತಿರುಗುವಾಗ ಮಹೀಂದ್ರಾ ಸ್ಕಾರ್ಪಿಯೋ ಚಾಲಕ ಅತಿರೇಕದಿಂದ ವಾಹನ ಚಲಾಯಿಸುತ್ತಿದ್ದನು ಎಂದು ಬೈಕ್ ಸವಾರರು ತಿಳಿಸಿದ್ದಾರೆ. ನಾಲ್ಕು ಚಕ್ರದ ವಾಹನದ ಚಾಲಕನೊಂದಿಗೆ ಚರ್ಚೆಗೆ ಪ್ರಯತ್ನಿಸಿದಾಗ, ಆತ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವರದಿಯಾಗಿದೆ.

ಓವರ್ ಟೇಕ್ ಮಾಡಿದ್ದಕ್ಕೆ ಹತ್ಯೆ: ರಾಕಿ ಯಾದವ್ ಅಪರಾಧಿ

ನಾನು ನನ್ನ 8-10 ಸ್ನೇಹಿತರೊಂದಿಗೆ ಗುರುಗ್ರಾಮ್‌ನಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಮಹೀಂದ್ರ ಸ್ಕಾರ್ಪಿಯೋ ಚಾಲಕ ನಮ್ಮ ಬಳಿಗೆ ಬಂದು ರಾಶ್ ಡ್ರೈವಿಂಗ್ ಮಾಡಲು ಶುರು ಮಾಡಿದ. ಅಲ್ಲದೇ ಆತ ನಮ್ಮ ಸ್ನೇಹಿತನಿಗೆ ಬೆದರಿಕೆ ಹಾಕಿದ ಮತ್ತು ಮೌಖಿಕವಾಗಿ ನಿಂದಿಸಿದ. ಈ ವೇಳೆ ನನ್ನ ಸ್ನೇಹಿತ ವಾಹನವನ್ನು ಸ್ವಲ್ಪ ನಿಧಾನಗೊಳಿಸಿದರು ಆದರೆ ನಾನು ಮುಂದೆ ಸಾಗಿದೆ. ಆಗ ಆ ವ್ಯಕ್ತಿ ವೇಗವಾಗಿ ಬಂದು ನನ್ನ ಬೈಕ್‌ಗೆ ಡಿಕ್ಕಿ ಹೊಡೆದು ಓಡಿಹೋದ ಎಂದು ಬೈಕ್ ಸವಾರ ಹೇಳಿದ್ದಾರೆ. ಈ ಘಟನೆಯಲ್ಲಿ ದ್ವಿಚಕ್ರವಾಹನ ಸವಾರನಿಗೆ ತೀವ್ರ ಪೆಟ್ಟಾಗಿದೆ. ಸುದ್ದಿ ಸಂಸ್ಥೆಯ ಪ್ರಕಾರ, ಪೊಲೀಸರು ಈ ವಿಷಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ.

1988ರ ಹಲ್ಲೆ ಮಾಡಿ ಹತ್ಯೆ ಪ್ರಕರಣ : ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು