ಬರುತ್ತಿದೆ ಬ್ಯಾಟರಿ ಚಾಲಿತ LG ಏರ್‌ ಪ್ಯೂರಿಫೈಯರ್ ಮಾಸ್ಕ್!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಮಾಸ್ಕ್ ಅವಿಭಾಜ್ಯ ಅಂಗವಾಗಿದೆ.  ಆದರೆ ಮಾಸ್ಕ್ ಕೊರೋನಾ ವೈರಸ್‌ನಿಂದ ಸಂಪೂರ್ಣ ಸುರಕ್ಷತೆ ಒದಗಿಸುತ್ತಿದೆಯಾ ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರ ಕಷ್ಟ. ಇದಕ್ಕಾಗಿ ವೈರಸ್, ಬ್ಯಾಕ್ಟೀರಿಯಾ, ವಾಹನದಿಂದ ಹೊಸ ಸೂಸುವ ಇಂಗಾಲ ಡೈ ಆಕ್ಸೈಡ್ ‌ನಿಂದಲೂ ಸುರಕ್ಷತೆ ಒದಗಿಸುವ ನೂತನ LG ಏರ್ ಪ್ಯೂರಿಫೈಯರ್ ಮಾಸ್ಕ್ ಮಾರುಕಟ್ಟೆಗೆ ಬರುತ್ತಿದೆ.

LG set to Introduce Battery power air purifier mask

ದಕ್ಷಿಣ ಕೊರಿಯಾ(ಆ.28): ಕೊರೋನಾ ವೈರಸ್ ಜನ ಜೀವನವನ್ನೇ ಬುಡ ಮೇಲು ಮಾಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಸಭೆ ಸಮಾರಂಭಗಳಿಂದ ದೂರ ಉಳಿಯಲೇಬೇಕಾಗಿದೆ. ಮಾಸ್ಕ್ ಕಡ್ಡಾಯವಾಗಿದೆ. ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ವಿಶೇಷವಾಗಿ ಮಾಸ್ಕ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಆದರೆ ಮಾಸ್ಕ್ ಕೊರೋನಾದಿಂದ ಸಂಪೂರ್ಣ ಸುರಕ್ಷತೆ ನೀಡುವುದರ ಕುರಿತು ಖಚಿತತೆ ಇಲ್ಲ. ಆದರೆ ಒಂದು ಹಂತದ ಸುಕ್ಷತೆ ನೀಡುವುದು ಸ್ಪಷ್ಟ. ಇದಕ್ಕಾಗಿ ಎಲೆಕ್ಟ್ರಾನಿಕ್ ದಿಗ್ಗಜ LG ನೂತನ ಮಾಸ್ಕ್ ಬಿಡುಗಡೆ ಮಾಡುತ್ತಿದೆ.

ದೇಶೀಯ ಮೈಕ್ರೋಚಿಪ್ ಬಳಸಿ 4 ಕೋಟಿ ರೂ. ಬಹುಮಾನ ಗೆಲ್ಲಿ!...

ಬ್ಯಾಟರಿ ಚಾಲಿತ ಏರ್ ಪ್ಯೂರಿಫೈಯರ್ ಮಾಸ್ಕ್ ಬಿಡುಗಡೆಗೆ LG ಬಿಡುಗಡೆ ಮಾಡಿದೆ. ಈ ಮಾಸ್ಕ್‌ನಲ್ಲಿ ಫ್ಯಾನ್ ಅಳವಡಿಸಲಾಗಿದ್ದು, ಉಸಿರಾಟದ ಅನುಗುಣಕ್ಕೆ ಈ ಫ್ಯಾನ್ ತಿರುಗಲಿದೆ. ಉಸಿರಾಡುವ ಗಾಳಿಯನ್ನು ಸಂಸ್ಕರಿಸಿ ನೀಡಲಿದೆ. ವಾಹನ ಹೊಸ ಸೂಸುವ ಕಾರ್ಬನ್ , ಕೊರೋನಾ ವೈರಸ್  ಸೇರಿದಂತೆ ಕಲುಷಿತ ಗಾಳಿಯನ್ನು ಸಂಸ್ಕರಿಸಿ ಉಸಿರಾಟಕ್ಕೆ ನೀಡಲಿದೆ. ಇಷ್ಟೇ ಅಲ್ಲ ಹೊರಸೂಸುವ ಗಾಳಿಯನ್ನು ಹೊರಬಿಡಲಿದೆ.

 ಕೇಂದ್ರಕ್ಕೆ ಮನಸೋತ ಸ್ಯಾಮ್ಸಂಗ್; ವಿಯೆಟ್ನಾಂನಿಂದ ಇಂಡಿಯಾ ಕಡೆಗೆ 3 ಲಕ್ಷ ಕೋಟಿ ರೂ. ಹೆಜ್ಜೆ

ಈ ಮಾಸ್ಕ್ ಒಳಗೆ ಸೆನ್ಸಾರ್ ಅಳವಡಿಸಲಾಗಿದೆ. ಈ ಸೆನ್ಸಾರ್ ಬಳಕೆದಾರರ ಉಸಿರಾಟದ ವೇಗ ಪ್ರಮಾಣವನ್ನು ಗ್ರಹಸಲಿದೆ. ಇಷ್ಟೇ ಅಲ್ಲ ಪ್ರತಿಯೊಬ್ಬ ಬಳಕೆದಾರರ ಉಸಿರಾಟಕ್ಕೆ ತಕ್ಕಂತೆ ಶುದ್ಧಗಾಳಿಯನ್ನು ಸಂಸ್ಕರಿಸಿ ನೀಡಲಿದೆ. ಈ ಸೆನ್ಸಾರ್ ಮೂಲಕ ಸಂಜ್ಞೆಗಳನ್ನು ಪಡೆಯುವ ಫ್ಯಾನ್ ಬಳಕೆದಾರರ ಉಸಿರಾಟಕ್ಕೆ ತಕ್ಕಂತೆ ತಿರುಗಿ ಗಾಳಿಯನ್ನು ಸಂಸ್ಕರಿಸಲಿದೆ.

ಎರಡು ಫ್ಯಾನ್‌ಗಳನ್ನು ಇಡಲಾಗಿದೆ. ಇಷ್ಟೇ ಅಲ್ಲ ಬಳಕೆ ದಾರರು ಫ್ಯಾನ್‌ಗಳನ್ನು ಶುದ್ದೀಕರಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ UV LED ಲೈಟ್ ಬಳಸಲಾಗಿದೆ. ಈ ಲೈಟ್‌ಗಳು ವೈರಸ್, ಬ್ಯಾಕ್ಟೀರಿಯಾದಂತೆ ವೈರಸ್‌ಗಳನ್ನು ನಾಶಪಡಿಸಲಿದೆ. ಫಿಲ್ಟರ್ ಮೂಲಕ ಗಾಳಿ ಶುದ್ದವಾಗಿ ಬಳಕೆದಾರರಿಗೆ ನೀಡಲಿದೆ. ಈ ಫಿಲ್ಟರ್ ಬದಲಿಸಲು ಅವಕಾಶ ನೀಡಲಾಗಿದೆ. 

ಈ ಬ್ಯಾಟರಿ ಚಾಲಿತ ಮಾಸ್ಕ್ ಹಲವು ಗಾತ್ರಗಳಲ್ಲಿ ಲಭ್ಯವಿದೆ. ಇದರಿಂದ ಬಳಕೆದಾರರ ಮುಖಕ್ಕೆ ಸರಿಹೊಂದು ಮಾಸ್ಕ್ ಖರೀದಿಸಲು ಸಾಧ್ಯವಿದೆ. ಇಷ್ಟೇ ಅಲ್ಲ ಕೆನ್ನೈ ಹಾಗೂ ಮೂಗಿನ ಮೇಲ್ಬಾಗದಿಂದ ಗಾಳಿ ಪ್ರವೇಶಿಸುವ ಸಾಧ್ಯತೆಗಳಿಲ್ಲ. 820mAh ಬ್ಯಾಟರಿ ಬಳಸಲಾಗಿದೆ. ಮೊಬೈಲ್ ಚಾರ್ಜ್ ಮಾಡುವ ರೀತಿ ಈ ಬ್ಯಾಟರಿ ಚಾರ್ಜ್ ಮಾಡಬಹುದು. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 8 ಗಂಟೆ ಬ್ಯಾಟರಿ ಚಾಲಿತ ಮಾಸ್ಕ್ ಬಳಕೆ ಮಾಡಬಹುದು. 

ಈ ನೂತನ ಮಾಸ್ಕ್ ಬಿಡುಗಡೆ ಗುರಿತು LG ಯಾವುದೇ ಸ್ಪಷ್ಟ ಮಾಹಿತಿ ಬಹಿರಂಗ ಪಡಿಸಿಲ್ಲ. ಇಷ್ಟೇ ಅಲ್ಲ ಇದರ ಬೆಲೆಯನ್ನು ಬಹಿರಂಗ ಪಡಿಸಿಲ್ಲ.

Latest Videos
Follow Us:
Download App:
  • android
  • ios