ಸರಾಸರಿ ಡೇಟಾ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಅಗ್ರಸ್ಥಾನ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ವರದಿ ಜಿಯೋ ಡೌನ್‌ಲೋಡ್ ವೇಗದೊಂದಿಗೆ ಇರುವ ಅಂತರ ಕಡಿಮೆ

ನವದೆಹಲಿ(ಏ.21): ಪ್ರತಿ ಸೆಕೆಂಡ್‌ಗೆ ಸರಾಸರಿ 21.1 ಮೆಗಾಬೈಟ್ ಡೌನ್‌ಲೋಡ್ ವೇಗ ಕಾಯ್ದುಕೊಳ್ಳುವ ಮೂಲಕ 4ಜಿ ವಿಭಾಗದಲ್ಲಿನ ಅಧಿಕ ಸರಾಸರಿ ಡೇಟಾ ಡೌನ್‌ಲೋಡ್‌ ವೇಗದಲ್ಲಿ ಮಾರ್ಚ್ ತಿಂಗಳಲ್ಲಿ ಕೂಡ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಈ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ವರದಿ ಬಿಡುಗಡೆ ಮಾಡಿದೆ.ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗ ಫೆಬ್ರವರಿಗೆ ಹೋಲಿಸಿದರೆ ಶೇ 2.5ರಷ್ಟು ಹೆಚ್ಚಳ ಕಂಡಿದೆ. ಫೆಬ್ರವರಿಯಲ್ಲಿ ಜಿಯೋ ಡೌನ್‌ಲೋಡ್ ವೇಗ 20.6 ಎಂಬಿಪಿಎಸ್ ಇತ್ತು. ಅದು ಮಾರ್ಚ್‌ನಲ್ಲಿ 21.21 ಎಂಬಿಪಿಎಸ್ ವೇಗಕ್ಕೆ ಏರಿಕೆಯಾಗಿದೆ. 

ವೊಡಾಫೋನ್ ಐಡಿಯಾ (ವಿಐಎಲ್) ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ ಪ್ರತಿ ಸೆಕೆಂಡ್‌ಗೆ 17.9 ಮೆಗಾಬೈಟ್ (ಎಂಬಿಪಿಎಸ್) ಮತ್ತು 13.7 ಎಂಬಿಪಿಎಸ್ ಡೌನ್‌ಲೋಡ್ ವೇಗಗಳೊಂದಿಗೆ ಅಲ್ಪ ಇಳಿಕೆ ಕಂಡಿವೆ. ಆದರೆ ಕಳೆದ ಆರು ತಿಂಗಳಲ್ಲಿ ಎರಡೂ ಕಂಪೆನಿಗಳು ಜಿಯೋ ಡೌನ್‌ಲೋಡ್ ವೇಗದೊಂದಿಗೆ ಇರುವ ಅಂತರವನ್ನು ಕಡಿಮೆ ಮಾಡಿವೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ 6.1 ಎಂಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿದೆ ಎಂದು ವರದಿ ತಿಳಿಸಿದೆ.

6 ಹೊಸ JioFiber ಪ್ಲಾನ್‌ ಪ್ರಾರಂಭಿಸಿದ ಜಿಯೋ: ಬೆಲೆ ₹399ರಿಂದ ಪ್ರಾರಂಭ, ಜ಼ಿರೋ ಇನ್ಸ್ಟಾಲೇಷನ್‌ ಫೀ

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.

ಟ್ರಾಯ್ ಪ್ರಕಾರ, ವೊಡಾಫೋನ್ ಐಡಿಯಾ ಮಾರ್ಚ್ ತಿಂಗಳಲ್ಲಿ 8.2 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿದ್ದು, ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. 7.3 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ನಂತರದ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ 6.1 ಹಾಗೂ ಬಿಎಸ್‌ಎನ್‌ಎಲ್ 5.1 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಮೈಸ್ಪೀಡ್ ಆಪ್‌ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.

ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರವೇಶಾತಿ ಆರಂಭ
ಕೃತಕ ಬುದ್ಧಿಮತ್ತೆ ಮತ್ತು ಮಾರುಕಟ್ಟೆ ಸಂವಹನ ಈ ಹಿಂದೆಂದಿಗಿಂತಲೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ದೂರ ಸಂವಹನದಿಂದ ಹಿಡಿದು ಸಾಮಾಜಿಕ ಮಾಧ್ಯಮ, ಇಮೇಲ್, ಮೆಸೇಜಿಂಗ್, ಇಂಟರ್ನೆಟ್ ಸರ್ಚ್, ಸ್ಮಾರ್ಟ್ ಗ್ಯಾಜೆಟ್‌ಗಳು, ಬ್ಯಾಂಕಿಂಗ್, ಮನರಂಜನೆಯಿಂದ ಶಾಪಿಂಗ್‌ವರೆಗೆ ಇವು ಬಳಕೆಯಾಗುತ್ತಿವೆ.

EV solutions ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಜಿಯೋ ಬಿಪಿ, ಟಿವಿಎಸ್ ಮೋಟರ್ ಒಪ್ಪಂದ!

ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ವಿಜ್ಞಾನ ಹಾಗೂ ಡಿಜಿಟಲ್ ಮಾಧ್ಯಮ ಮತ್ತು ಮಾರುಕಟ್ಟೆ ಸಂವಹನಗಳಲ್ಲಿ ಒಂದು ವರ್ಷದ ಪೂರ್ಣಾವಧಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ (ಪಿಜಿಪಿ) ಜಿಯೋ ಸಂಸ್ಥೆ ಅರ್ಜಿಗಳನ್ನು ಆಹ್ವಾನಿಸುವುದನ್ನು ಆರಂಭಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನ (ಎಐ & ಡಿಎಸ್) ವಿಷಯಗಳಲ್ಲಿನ ಪಿಜಿಪಿ, ಸೈದ್ಧಾಂತಿಕ ಸಾಮರ್ಥ್ಯಗಳನ್ನು ಹಾಗೂ ಉದ್ಯಮಶೀಲತೆ ಮತ್ತು ಸಮಾಜಕ್ಕೆ ಪ್ರಾಯೋಗಿಕ ಪರಿಹಾರಗಳನ್ನು ಹೇಗೆ ನೀಡುವುದು ಎಂದು ತಿಳಿವಳಿಕೆಗಳನ್ನು ನೀಡುವ ಗುರಿ ಹೊಂದಿದೆ. ಡಿಜಿಟಲ್ ಮಾಧ್ಯಮ & ಮಾರುಕಟ್ಟೆ ಸಂವಹನ (ಡಿಎಂ & ಎಂಸಿ) ವಿಷಯದಲ್ಲಿನ ಪಿಜಿಪಿ, ವಿನೂತನವಾಗಿ ತೊಡಗಿಸಿಕೊಳ್ಳುವ, ಸೇವೆಗಳು ಮತ್ತು ಸಂವಹನದ ಮೂಲಕ ಡಿಜಿಟಲ್ ಯುಗದಲ್ಲಿ ಗ್ರಾಹಕ ಅನುಭವವನ್ನು ಹೇಗೆ ನಿಭಾಯಿಸುವುದು ಎಂಬ ಜ್ಞಾನವನ್ನು ಸಂಪಾದಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

"ವಿಶ್ವ ದರ್ಜೆಯ ಬೋಧನಾ ವಿಭಾಗ, ಅಂತಾರಾಷ್ಟ್ರೀಯ ಸಹಭಾಗಿತ್ವ, ಕಠಿಣ ಶಿಕ್ಷಣ ಶಾಸ್ತ್ರ ಮತ್ತು ಉದಾರ ವಿದ್ಯಾರ್ಥಿವೇತನಗಳ ಸಹಾಯದೊಂದಿಗೆ ಯುವಜನರನ್ನು ಪರಿವರ್ತಿಸುವ ಮಿಷನ್ ಅನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಜಾಗತಿಕ ಪರಿಣಾಮದೊಂದಿಗೆ ಭಾರತದ ಮೌಲ್ಯಗಳನ್ನು ಬಿತ್ತಲು ನಾವು ಆಶಿಸುತ್ತೇವೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಕೈಗಾರಿಕಾ ಪ್ರಸ್ತುತತೆಯನ್ನು ಸಂಯೋಜಿಸುವ ಉದ್ಗಾಟನಾ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಆರಂಭಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಜಿಯೋ ಇನ್‌ಸ್ಟಿಟ್ಯೂಟ್‌ನ ಉಪ ಕುಲಪತಿ ಡಾ ದೀಪಕ್ ಜೈನ್ ಹೇಳಿದ್ದಾರೆ.