Asianet Suvarna News Asianet Suvarna News

ಕ್ಲೈಮೇಟ್ ಬದಲಾವಣೆ ಬಿಕ್ಕಟ್ಟಿಗೆ ಟೆಡ್‌ನೊಂದಿ ಜಿಯೋ ಒಪ್ಪಂದ!

  • ಕ್ಲೈಮೇಟ್ ಕೌಂಟ್‌ಡೌನ್ ಇನಿಶಿಯೇಟಿವ್’ಗಾಗಿ ಟೆಡ್‌ನೊಂದಿಗೆ ಪಾಲುದಾರಿಕೆ
  • ಜಿಯೋ ಬಳಕೆದಾರರಿಗೆ ಅಕ್ಟೋಬರ್ 10ರ ಸಂಜೆ 8:30ರಿಂದ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವ ಅವಕಾಶ
Jio partnering with TEDs Climate Change Countdown Initiative ckm
Author
Bengaluru, First Published Oct 10, 2020, 6:04 PM IST

ಬೆಂಗಳೂರು(ಅ.10): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಈ ವರ್ಷದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣ ತಾತ್ಕಾಲಿಕವಾಗಿ ಕಡಿಮೆಯಾಗಿದೆ. ಆದರೆ ಹಸಿರುಮನೆ ಅನಿಲ ಹೊರಸೂಸುವಿಕೆಯ ಹವಾಮಾನ ಪರಿಣಾಮಗಳು ಇದ್ದೇ ಇವೆ. ಜಾಗತಿಕ ತಾಪಮಾನ ಸೇರಿದಂತೆ ಹಲವು ಕಾರಣಗಳಿಂದ  ಹವಾಮಾನ ಬದಲಾವಣೆ ಯಾಗುತ್ತಿದೆ.  ತಮ್ಮ ‘ಕೌಂಟ್‌ಡೌನ್' ಉಪಕ್ರಮದೊಂದಿಗೆ ಹವಾಮಾನ ಬದಲಾವಣೆಯನ್ನು ಸಂಬೋಧಿಸಲು ಟೆಡ್‌ನೊಂದಿಗೆ ಜಿಯೋ ಕೈಜೋಡಿಸಿದೆ.

Jioದಿಂದ ಮತ್ತೊಂದು ಕೊಡುಗೆ: ವಿಮಾನದೊಳಗೆ ಮೊಬೈಲ್ ಸೇವೆ

ಟೆಡ್ ಕ್ಲೈಮೇಟ್ ಕೌಂಟ್‌ಡೌನ್:
ಹವಾಮಾನ ಬಿಕ್ಕಟ್ಟಿಗೆ ಪರಿಹಾರಗಳನ್ನು ಬೆಂಬಲಿಸಲು ಮತ್ತು ಚುರುಕುಗೊಳಿಸಲು, ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು, ಟೆಡ್ ಕ್ಲೈಮೇಟ್ ಕೌಂಟ್‌ಡೌನ್ ಒಂದು ಜಾಗತಿಕ ಉಪಕ್ರಮವಾಗಿದೆ.

ಎಲ್ಲರಿಗೂ ಹೆಚ್ಚು ಸುರಕ್ಷಿತ, ಸ್ವಚ್ಛ ಹಾಗೂ ತೃಪ್ತಿಕರವಾದ ಶೂನ್ಯ-ಇಂಗಾಲದ ಜಗತ್ತಿನ ಕಡೆಗಿನ ಓಟದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2030ರ ವೇಳೆಗೆ ಅರ್ಧಕ್ಕೆ ಇಳಿಸುವ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸುವುದು ಇದರ ಗುರಿ.

ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಲಾಂಚ್; ಪ್ಲಾನ್ ಒಂದು, ಲಾಭ ಹಲವು!

ನಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರಮುಖ ಪಾತ್ರವಿರುವುದರಿಂದ ಇದು ಎಲ್ಲರಿಗೂ ಮುಕ್ತವಾದ ಆಂದೋಲನವಾಗಿದೆ. ಕೌಂಟ್‌ಡೌನ್ ಜೊತೆ ಸಹಕರಿಸಲು ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯದ ಬಗ್ಗೆ ಕ್ರಮ ಕೈಗೊಳ್ಳಲು ಪ್ರತಿಯೊಂದು ಸಂಘಟನೆ, ಸಂಸ್ಥೆ, ನಗರ ಮತ್ತು ದೇಶವನ್ನೂ ಆಹ್ವಾನಿಸಲಾಗಿದೆ.

ಇನ್ನಷ್ಟು ಸ್ವಚ್ಛವಾದ ಭವಿಷ್ಯಕ್ಕಾಗಿ ನೀಲನಕ್ಷೆಯನ್ನು ರೂಪಿಸಲು ಸಹಾಯ ಮಾಡುವ ಐದು ಮೂಲಭೂತ, ಅಂತರ್‌ಸಂಪರ್ಕಿತ ಪ್ರಶ್ನೆಗಳಿಗೆ ಉತ್ತರಿಸಲು ಕೌಂಟ್‌ಡೌನ್ ಪ್ರಯತ್ನಿಸುತ್ತದೆ.

ಜಿಯೋ ಮತ್ತು ಟೆಡ್: ಒಟ್ಟಾಗಿ, ಉತ್ತಮವಾಗಿ ಟೆಡ್ ಸಹಯೋಗದೊಂದಿಗೆ ಜಿಯೋ ವಿಜ್ಞಾನಿಗಳು, ಕಾರ್ಯಕರ್ತರು, ಉದ್ಯಮಿಗಳು, ನಗರ ಯೋಜಕರು, ರೈತರು, ಸಿಇಒಗಳು, ಹೂಡಿಕೆದಾರರು, ಕಲಾವಿದರು, ಸರ್ಕಾರಿ ಅಧಿಕಾರಿಗಳು ಮತ್ತಿತರರನ್ನು ಒಟ್ಟುಗೂಡಿಸಿ ಹೆಚ್ಚು ಪರಿಣಾಮಕಾರಿಯಾದ, ಪುರಾವೆ-ಆಧಾರಿತವಾದ ಆಲೋಚನೆಗಳನ್ನು ಅನ್ವೇಷಿಸುತ್ತಿದೆ.

ಜನರು ಪ್ರತ್ಯೇಕವಾಗಿ ಯೋಚಿಸುವುದನ್ನು ಬಿಟ್ಟು ಸವಾಲನ್ನು ಒಟ್ಟಾಗಿ ಎದುರಿಸಿದಾಗ ಸಕ್ರಿಯಗೊಳಿಸಬಹುದಾದ ದಿಟ್ಟ ಪರಿಹಾರಗಳನ್ನು ಗುರುತಿಸುವುದು ಇದರ ಗುರಿಯಾಗಿದೆ. ಫಲಿತಾಂಶವನ್ನು ಪೋಷಿಸುವತ್ತ ತೀಕ್ಷ್ಣವಾದ ಗಮನವನ್ನು ಹೊಂದಿರುವ ಟೆಡ್‌ನ ಕ್ಲೈಮೇಟ್ ಕೌಂಟ್‌ಡೌನ್   ಉಪಕ್ರಮವನ್ನು ಜಿಯೋ ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹೆಚ್ಚಿನ ಜನರನ್ನು ತಲುಪಲು ನೆರವಾಗುವ ಮೂಲಕ ಬೆಂಬಲಿಸುತ್ತಿದೆ.

ಜಿಯೋ ಸೆಟ್ ಟಾಪ್ ಬಾಕ್ಸ್ ಬಳಕೆದಾರರಿಗಾಗಿ ಟೆಡ್ ಅಪ್ಲಿಕೇಶನ್ ಜಿಯೋಸ್ಟೋರ್‌ನಲ್ಲಿ ಲಭ್ಯವಿದೆ, ಮತ್ತು ಆ ಮೂಲಕ ಟಾಕ್ಸ್‌ಗೆ ಭಾರತದಲ್ಲಿ 1 ದಶಲಕ್ಷ ಕುಟುಂಬಗಳನ್ನು ತಲುಪುವ ಪ್ರವೇಶಾವಕಾಶವನ್ನು ಸುಗಮವಾಗಿಸಲಾಗುತ್ತಿದೆ.

ಕಾರ್ಯಕ್ರಮ ಕುರಿತು:
ಜಿಯೋ ಬಳಕೆದಾರರು ಅಧೀಕೃತ ಜಿಯೋ ತಾಣದಲ್ಲಿ ಅಕ್ಟೋಬರ್ 10ರ ಸಂಜೆ 8:30ರಿಂದ ಈ ಕಾರ್ಯಕ್ರಮದ ತಡೆರಹಿತ ಲೈವ್ ಸ್ಟ್ರೀಮಿಂಗ್ ಅನುಭವವನ್ನು ಪಡೆಯಬಹುದಾಗಿದೆ. ಆಪ್ಟಿಮೈಸ್ ಮಾಡಲಾದ ಅನುಭವಕ್ಕಾಗಿ ಜಿಯೋ ಫೈಬರ್ ಬಳಕೆದಾರರು ಜಿಯೋ ಸೆಟ್ ಟಾಪ್ ಬಾಕ್ಸ್‌ನಲ್ಲಿ ಜಿಯೋಪೇಜಸ್ ಮೂಲಕ ಈ ಕೊಂಡಿಯನ್ನು ಪ್ರವೇಶಿಸಬಹುದು. ಕಾರ್ಯಕ್ರಮದ ನಂತರ, ಬಳಕೆದಾರರಿಗೆ ಜಿಯೋಪೇಜಸ್ ಮೂಲಕ ಹವಾಮಾನ ಬದಲಾವಣೆಯ ಕುರಿತು ಟಾಕ್‌ಗಳಿಗೆ ತ್ವರಿತ ಪ್ರವೇಶಾವಕಾಶವೂ ಇರಲಿದೆ.

Follow Us:
Download App:
  • android
  • ios