ಜಮ್ಮು ಕಾಶ್ಮೀರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ 7 ನ್ಯೂಸ್ ವೆಬ್‌ಸೈಟ್‌ಗೆ ನಿಷೇಧ!
ಸುಳ್ಳು ಮಾಹಿತಿ, ಭಾರತದ ವಿರುದ್ಧ ಸುದ್ದಿಗಳನ್ನು ಹರಡುತ್ತಿರುವ ಸುದ್ದಿ ವಾಹನಿ, ಯೂಟ್ಯೂಬ್, ವೆಬ್‌ಸೈಟ್ ಮೇಲೆ ಮತ್ತೆ ಕಠಿಣ ಕ್ರಮ ಜಾರಿಗೊಳಿಸಲಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ವೈಬ್‌ಸೈಟ್ ನಿಷೇಧಿಸಲಾಗಿದೆ
ಶ್ರೀನಗರ(ಆ.16): ಕೇಂದ್ರ ಸರ್ಕಾರ ಈಗಾಗಲೇ ಭಾರತ ವಿರೋಧಿ ಸುದ್ಧಿ, ಸುಳ್ಳು ಮಾಹಿತಿ ಹರಡುತಿದ್ದ ಯೂಟ್ಯೂಬ್ ಚಾನೆಲ್, ಸುದ್ದಿ ವಾಹನಿ, ವೆಬ್‌ಸೈಟ್‌ಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇದೀಗ ಜಮ್ಮು ಮಕ್ಕು ಕಾಶ್ಮೀರದ ಸರದಿ. ರಂಬನ್ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಇಲ್ಲಿನ ಕೆಲ ನ್ಯೂಸ್ ವೆಬ್‌ಸೈಟ್‌ಗಳು ಸುಳ್ಳು ಸುದ್ದಿ ಹಾಗೂ ಕಣಿವೆ ರಾಜ್ಯದ ಶಾಂತಿ ಕದಡುವ ಯತ್ನ ಮಾಡಿತ್ತು. ಈ ಕುರಿತು ಎಚ್ಚೆತ್ತ ಜಿಲ್ಲಾಡಳಿತ 7 ನ್ಯೂಸ್ ವೆಬ್‌ಸೈಟ್ ನಿಷೇಧಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುವು, ಗಲಭೆಗೆ ಪ್ರಚೋದಿಸುವ ಹಾಗೂ ಭಾರತ ವಿರೋಧಿ ಚಟುವಟಿಕೆಗೆ ಪ್ರಚೋದನೆ ನೀಡುವ ಮಾಹಿತಿಗಳನ್ನು ಈ ವೈಸ್‌ಸೈಟ್‌ಗಳಲ್ಲಿ ಹಾಕಲಾಗುತ್ತಿತ್ತು. ಸುಳ್ಳು ಮಾಹಿತಿಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದ 7 ನ್ಯೂಸ್ ವೆಬ್‌ಸೈಟ್‌ನ್ನು ರಂಬನ್ ಜಿಲ್ಲಾಡಳಿತ ಬ್ಯಾನ್ ಮಾಡಿದೆ.
ಯುನೈಟೆಡ್ ನ್ಯೂಸ್ ಉರ್ದು, ವಿಡಿ ನ್ಯೂಸ್, ನ್ಯೂಸ್ ವರ್ಸ್ ಇಂಡಿಯಾ, ಕರೆಂಟ್ ನ್ಯೂಸ್ ಆಫ್ ಇಂಡಿಯಾ, ನ್ಯೂಸ್ ಬ್ಯೋರೋ ಆಫ್ ಇಂಡಿಯಾ, ಟುಡೆ ನ್ಯೂಸ್ ಲೈವ್ ಸೇರಿದಂತೆ 7 ವೆಬ್‌ಸೈಟ್‌ಗಳು ನಕಲಿ ಸುದ್ದಿಗಳನ್ನೇ ಬಿತ್ತರ ಮಾಡುತ್ತಿತ್ತು. ಇದರಿಂದ ಈ ನ್ಯೂಸ್ ವೆಬ್‌ಸೈಟ್ ನಿಷೇಧಿಸಲಾಗಿದೆ ಎಂದು ರಂಬನ್ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದೆ.
ಭಾರತದ ವಿರುದ್ಧ ಸುಳ್ಳು ಮಾಹಿತಿ, 1 ವರ್ಷದಲ್ಲಿ 747 ವೆಬ್‌ಸೈಟ್, 94 ಯೂಟ್ಯೂಬ್‌ಗೆ ನಿರ್ಬಂಧ
ಸುಳ್ಳು ಮಾಹಿತಿ ಹರಡುವ ವಾಹನಿಗಳು, ಸಾಮಾಜಿಕ ಜಾಲತಾಣ ಖಾತೆಗಳು, ಸುದ್ದಿ, ವೆಬ್‌ಸೈಟ್‌ಗಳ ಮೇಲೆ ಕೇಂದ್ರ ಸರ್ಕಾರ ತೀವ್ರ ನಿಘಾವಹಿಸಿದೆ. ಈಗಾಗಲೇ ಹಲವು ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ನಿಷೇಧಿಸಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಸುಳ್ಳು ಮಾಹಿತಿ ಪ್ರಸಾರ: 16 ಯೂಟ್ಯೂಬ್ ಚಾನೆಲ್ ನಿರ್ಬಂಧ
ದೇಶದ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧ ಮತ್ತು ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಚಾನೆಲ್ ಸೇರಿದಂತೆ 16 ಯೂಟ್ಯೂಬ್ ಚಾನೆಲ್‌ಗಳನ್ನು ಸೋಮವಾರ ಭಾರತ ನಿರ್ಬಂಧಿಸಿದೆ. ಇವುಗಳಲ್ಲಿ 6 ಚಾನಲ್‌ಗಳು 1 ಫೇಸ್‌ಬುಕ್ ಪೇಜ್ ಪಾಕಿಸ್ತಾನದಿಂದ ನಿರ್ವಹಿಸಲ್ಪಡುತ್ತಿದ್ದವು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ಒಟ್ಟಾರೆಯಾಗಿ 68 ಕೋಟಿಗೂ ಅಧಿಕ ವೀಕ್ಷಕರನ್ನು ಹೊಂದಿದ್ದವು. ದೇಶದಲ್ಲಿ ಆತಂಕ, ಕೋಮು ದ್ವೇಷ ಸೃಷ್ಟಿಸಲು ಈ ಚಾನಲ್‌ಗಳ ಮೂಲಕ ಸುಳ್ಳು, ಪರೀಶೀಲಿಸದ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇವುಗಳಲ್ಲಿ ಯಾವುದೇ ಚಾನೆಲ್‌ಗಳು ಐಟಿ ನಿಯಮದಂತೆ ಸರ್ಕಾರದಿಂದ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಐಟಿ ಸಚಿವಾಲಯ ತಿಳಿಸಿದೆ.
Govt blocks channels ಸುಳ್ಳು ಹರಡುತ್ತಿದ್ದ ಭಾರತದ 18, ಪಾಕಿಸ್ತಾನದ 4 YouTube ಚಾನೆಲ್ ಬ್ಲಾಕ್!
ಜಾಲತಾಣಗಳಿಗೆ ಕೇಂದ್ರದ ನೋಟಿಸ್
ಯಾವುದೇ ವಿಷಯ ಇತ್ಯರ್ಥಕ್ಕೆ ನೇಮಕವಾಗಿರುವ ನೋಡಲ್ ಸಂಪರ್ಕದ ವ್ಯಕ್ತಿ, ಸಮಸ್ಯೆ ಇತ್ಯರ್ಥದ ಅಧಿಕಾರಿ, ಮುಖ್ಯ ಅನುಸರಣೆ ಅಧಿಕಾರಿಯ ಸಂಪರ್ಕದ ಮಾಹಿತಿ ಸಲ್ಲಿಸುವಂತೆ ಕೇಂದ್ರ ಐಟಿ ಸಚಿವಾಲಯ ಕೋರಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ನೂತನ ನಿಯಮಗಳನ್ನು ಜಾರಿಗೊಳಿಸದೇ ಇದ್ದರೆ, ನಿಮ್ಮ ಸಂಸ್ಥೆ ಭಾರತದಲ್ಲಿ ನೀಡುತ್ತಿರುವ ಸೇವೆ ಮತ್ತು ನೂತನ ಕಾನೂನು ಜಾರಿ ಏಕೆ ಸಾಧ್ಯವಾಗಿಲ್ಲ ಎಂಬ ವಿವರಣೆ ಸಲ್ಲಿಸಬೇಕು. ಅಲ್ಲದೆ ನಿಮ್ಮಿಂದ ಹೆಚ್ಚುವರಿ ಮಾಹಿತಿ ಪಡೆಯಲು ನೂತನ ಕಾನೂನಿನ ಅಡಿ ಅವಕಾಶವಿದೆ ಎಂದು ಸಾಮಾಜಿಕ ಜಾಲತಾಣಗಳ ಕಂಪನಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ರೂಪದ ಸಂದೇಶ ನೀಡಿದೆ.