ಭಾರತದ ವಿರುದ್ಧ ಸುಳ್ಳು ಮಾಹಿತಿ, 1 ವರ್ಷದಲ್ಲಿ 747 ವೆಬ್‌ಸೈಟ್, 94 ಯೂಟ್ಯೂಬ್‌ಗೆ ನಿರ್ಬಂಧ!

ಭಾರತದ ವಿರುದ್ದ ಕಾರ್ಯನಿರ್ವಹಿಸುತ್ತಿದ್ದ ವೆಬ್‌ಸೈಟ್, ಯೂಟ್ಯೂಬ್‌ಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. 2021-22ರ ಸಾಲಿನಲ್ಲಿ ಕೇಂದ್ರ ನಿಷೇಧಿಸಿದ ವೆಸ್‌ಸೈಟ್ ಹಾಗೂ ಯೂಟ್ಯೂಬ್‌ ಚಾನೆಲ್ ಕುರಿತು ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಗಿದೆ.

Modi Govt blocks 747 website 94 YouTube channels working against interest of India in 2021 22 ckm

ನವದೆಹಲಿ(ಜು.21):  ಭಾರತದಲ್ಲಿ ಹೊಸ ಐಟಿ ನಿಯಮದಡಿ ಈಗಾಗಲೇ ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಭಾರತದ ವಿರುದ್ದ ಸಂಚು ರೂಪಿಸುವ, ಸುಳ್ಳು ಮಾಹಿತಿ ಹರಡುವ, ಜನರನ್ನು ತಪ್ಪುದಾರಿಗೆ ಎಳೆಯುವ ಹಲವು ವೈಬ್‌ಸೈಟ್, ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವ ಅನುರಾಗ್ ಠಾಕೂರ್, ಮಹತ್ವಗ ಮಾಹಿತಿ ಬಹಿರಂಗ ಪಡಿಸಿದ್ದಾರೆ. 2021-22ರ ಸಾಲಿನಲ್ಲಿ ಭಾರತದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದ  747 ವೆಬ್‌ಸೈಟ್, 94 ಯೂಟ್ಯೂಬ್ ಚಾನೆಲ್‌ ಹಾಗೂ 19 ಸಾಮಾಜಿಕ ಜಾಲತಾಣದ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ 60 ಎ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಭಾರತದ ಸೌರ್ವಭೌಮತ್ವಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಸಂಸ್ಥೆಗಳ ವಿರುದ್ಧ ಕೇಂದ್ರ ಕಠಿಣ ಕ್ರಮ ಕೈಗೊಂಡಿದೆ ಎಂದು ಠಾಕೂರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್‌ಗಳಲ್ಲಿ ಭಾರತದ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. ನಿಯಮ(IT Rules) ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಇತ್ತೀಚೆಗೆಷ್ಟೇ ಕೇಂದ್ರ ಸರ್ಕಾರ(PM Modi Govt) ಭಾರತದ ವಿರುದ್ಧ ಸುಳ್ಳು ಮಾಹಿತಿ ಹರಡುತ್ತಿದ್ದ ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್ ಪೇಜ್ ನಿರ್ಬಧಿಸಿತ್ತು.  ದೇಶದ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧ ಮತ್ತು ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಶುತ್ರರಾಷ್ಟ್ರ ಪಾಕಿಸ್ತಾನ ಮೂಲದ ಚಾನೆಲ್‌ ಸೇರಿದಂತೆ 16 ಯೂಟ್ಯೂಬ್‌ ಚಾನೆಲ್‌ಗಳನ್ನು ಭಾರತ ಇತ್ತೀಚೆಗೆ ನಿರ್ಬಂಧಿಸಿದೆ. ಇವುಗಳಲ್ಲಿ 6 ಚಾನಲ್‌ಗಳು 1 ಫೇಸ್‌ಬುಕ್‌ ಪೇಜ್‌ ಪಾಕಿಸ್ತಾನದಿಂದ ನಿರ್ವಹಿಸಲ್ಪಡುತ್ತಿದ್ದವು. ಈ ಮೂಲಕ ಭಾರತದ ವಿರುದ್ದ ಮಾಹಿತಿಗಳನ್ನು ನೀಡಲಾಗುತ್ತಿತ್ತು.   ಈ ಎಲ್ಲಾ ಯೂಟ್ಯೂಬ್‌ ಚಾನೆಲ್‌ಗಳು(YouTube Channel) ಒಟ್ಟಾರೆಯಾಗಿ 68 ಕೋಟಿಗೂ ಅಧಿಕ ವೀಕ್ಷಕರನ್ನು ಹೊಂದಿದ್ದವು. ದೇಶದಲ್ಲಿ ಆತಂಕ, ಕೋಮು ದ್ವೇಷ ಸೃಷ್ಟಿಸಲು ಈ ಚಾನಲ್‌ಗಳ ಮೂಲಕ ಸುಳ್ಳು, ಪರೀಶೀಲಿಸದ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇವುಗಳಲ್ಲಿ ಯಾವುದೇ ಚಾನೆಲ್‌ಗಳು ಐಟಿ ನಿಯಮದಂತೆ ಸರ್ಕಾರದಿಂದ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಐಟಿ ಸಚಿವಾಲಯ ತಿಳಿಸಿತ್ತು.

ಹೊಸ ಐಟಿ ನಿಯಮಕ್ಕೆ ನಕಲಿ ಖಾತೆ ಬ್ಲಾಕ್
ಹೊಸ ಐಟಿ ನಿಯಮದಡಿ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಹೊಸ ನಿಯಮದಡಿ 2021ರ ನವೆಂಬರ್ ತಿಂಗಳಲ್ಲಿ 17.5 ಲಕ್ಷ ವ್ಯಾಟ್ಸಪ್ ಖಾತೆಗಳನ್ನು ವ್ಯಾಟ್ಸಆ್ಯಪ್ ಬ್ಲಾಕ್ ಮಾಡಿತ್ತು. ಭಾರತದಲ್ಲಿ 40 ಕೋಟಿಗೂ ಅಧಿಕ ವಾಟ್ಸಾಪ್‌ ಬಳಕೆದಾರರಿದ್ದಾರೆ. ಹೀಗಾಗಿ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್‌ ಮಾಧ್ಯಮದ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಟ್ವಿಟರ್ ಖಾತೆಗಳು ಬ್ಲಾಕ್
ಹೊಸ ಐಟಿ ನಿಯಮದಡಿ ಕಳೆದ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ 31, 637 ಟ್ವಿಟರ್ ಖಾತೆಗಳು ಬ್ಯಾನ್ ಆಗಿತ್ತು. ಕುಂದು ಕೊರತೆ ಅಧಿಕಾರಿ ನೇಮಸಿದ ಬೆನ್ನಲ್ಲೇ ಟ್ವಿಟರ್ ಈ ಕ್ರಮ ಕೈಗೊಂಡಿತ್ತು. ಕಿರುಕುಳ, ದೌರ್ಜನ್ಯ, ತಪ್ಪು, ಮಾಹಿತಿ, ಮಾನನಷ್ಟ, ಭಯೋತ್ಪಾದನೆ, ಗೌಪ್ಯತೆಯ ಉಲ್ಲಂಘನೆ ವಿಷಯಕ್ಕೆ ಸಂಬಂಧಿತ ದೂರುಗಳನ್ನು ಟ್ವಿಟರ್ ಸ್ವೀಕರಿಸಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಂಡಿತ್ತು. ಭಾರತದಲ್ಲಿ 1.75 ಕೋಟಿ ಬಳಕೆದಾರರಿರುವ ಟ್ವೀಟರ್‌ ಪ್ರತಿ ತಿಂಗಳು ದೂರು ಕುರಿತ ವರದಿ ಹಾಗೂ ತೆಗೆದುಕೊಂಡಿರುವ ಕ್ರಮಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು. 

Latest Videos
Follow Us:
Download App:
  • android
  • ios