ಗ್ರಾಮಭಾರತದ ಮಿತ್ರ, ಈ ಸ್ಮಾರ್ಟ್‌ಫೋನ್ ಬೆಲೆ ಆರೂವರೆ ಸಾವಿರ ಮಾತ್ರ!

ಈ ಅಗ್ಗದ ಸ್ಮಾರ್ಟ್‌ಫೋನ್‌ನಲ್ಲಿ ಎಚ್‌ಡಿಪ್ಲಸ್‌ ಡಿಸ್‌ಪ್ಲೇಯಿಂದ ಹಿಡಿದು ಫಿಂಗರ್‌ಪ್ರಿಂಟ್‌ನಿಂದ ಫೇಸ್‌ ಅನ್‌ಲಾಕ್‌ವರೆಗೆ ಎಲ್ಲಾ ಇದೆ. ಫೋನಿನ ಜೊತೆಗೇ ಒಂದು ಇಯರ್‌ಫೋನೂ ಉಚಿತವಾಗಿ ದೊರೆಯುತ್ತದೆ. ಯಾವುದೀ ಫೋನ್? ಇಲ್ಲಿದೆ ಡೀಟೆಲ್ಸ್...

iTel Vision 1 Budget Smartphone Designed For Rural India Price Features

ಟ್ರಾನ್ಶನ್‌ ಸಂಸ್ಥೆಯ ಸಿಇಎ ಅರಿಜೀತ್‌ ತಾಳಪತ್ರ ಪ್ರಕಾರ ಮುಂಬರುವ ದಿನಗಳಲ್ಲಿ ಮೊಬೈಲ್‌ ಬಳಕೆದಾರರು ಭಾರತದ ಹಳ್ಳಿಗಳ ಮಂದಿ. ಈಗ ಅವರ ಡಾಟಾ ಬಳಕೆ ಕೇವಲ ಶೇ.18 ಮಾತ್ರ. ಭಾರತದ್ದು ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಆಗಿದ್ದರೂ ಗ್ರಾಮೀಣ ಭಾರತ ಮಾತ್ರ ಯಾಕೆ ಹಿಂದುಳಿದಿದೆ ಎಂಬ ಪ್ರಶ್ನೆಯನ್ನು ಅವರು ಕೇಳಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳಲು ಹೋದಾಗ ಹುಟ್ಟಿಕೊಂಡದ್ದು ಈ ಬ್ರಾಂಡು. ಗ್ರಾಮೀಣ ಪ್ರದೇಶಕ್ಕೆ ಬೇಕಾದ ಫೋನನ್ನು ಕಡಿಮೆ ಬೆಲೆಯಲ್ಲಿ ನೀಡಲು ಸಂಸ್ಥೆ ನಿರ್ಧರಿಸಿತು.

ಅದರ ಪರಿಣಾಮವಾಗಿ ಬಂದಿರುವುದು ಐಟೆಲ್‌ ವಿಷನ್‌ 1. ಆರು ಸಾವಿರ ರೂಪಾಯಿ ಬೆಲೆಯ ಈ ಫೋನಲ್ಲಿ ಏನುಂಟು ಏನಿಲ್ಲ! ದೊಡ್ಡ ಬೆಲೆಯ ಫೋನುಗಳಲ್ಲಿ ಇರುವ ಎಲ್ಲವೂ ಇಲ್ಲಿವೆ. ಎಚ್‌ಡಿಪ್ಲಸ್‌ ಡಿಸ್‌ಪ್ಲೇಯಿಂದ ಹಿಡಿದು 4000 ಎಂಎಎಚ್‌ ಬ್ಯಾಟರಿ ತನಕ, ಎರಡು ರೇರ್‌ ಕ್ಯಾಮರಾದಿಂದ ಹಿಡಿದು 2ಜಿಬಿ ರಾರ‍ಯಮ್‌ ತನಕ, ಫಿಂಗರ್‌ಪ್ರಿಂಟ್‌ನಿಂದ ಫೇಸ್‌ ಅನ್‌ಲಾಕ್‌ ತನಕ- ಕೇಳಿದ್ದೆಲ್ಲ ಕೊಡುತ್ತದೆ. ಕೊಟ್ಟ ಬೆಲೆಗೆ ಬಾಳುತ್ತದೆ.

ಹೀಗೆ ಗ್ರಾಮೀಣ ಭಾರತದ ಗ್ರಾಹಕರಿಗೆಂದೇ ಫೋನುಗಳನ್ನು ತಯಾರು ಮಾಡುವ ಅನೇಕ ಸಂಸ್ಥೆಗಳಿವೆ. ಅವುಗಳ ಪೈಕಿ ಟ್ರಾನ್‌ಷನ್‌ ಮುಂಚೂಣಿಯಲ್ಲಿದೆ. ಇದೀಗ ಹೊರತಂದಿರುವ ವಿಷನ್‌ 1 ಫೋನಿನ ಬೆಲೆ 6,499 ಎಂದಿದೆ. ಫೋನಿನ ಜೊತೆಗೇ ಒಂದು ಇಯರ್‌ಫೋನೂ ಉಚಿತವಾಗಿ ದೊರೆಯುತ್ತದೆ. 

ಇದನ್ನೂ ಓದಿ | ಜಿಯೋನಿಂದ ಹೊಸ ಪ್ಲಾನ್; ಮೊದ್ಲೇ ರಿಚಾರ್ಜ್ ಮಾಡಿದ್ದಿದ್ರೆ ಉಳಿತಿತ್ತು ಹಣ! 

ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ದೊರೆಯುತ್ತದೆ. ಎರಡು ಸಿಮ್‌ಕಾರ್ಡ್‌ ಹಾಕುವ ಅವಕಾಶವಿರುವ, ಆಂಡ್ರಾಯಿಡ್‌ 9 ಆಪರೇಟಿಂಗ್‌ ಸಿಸ್ಟಮ್‌ ಹೊಂದಿರುವ ಫೋನು ಇದು. ಎರಡು 8 ಮೆಗಾಪಿಕ್ಸೆಲ್‌ ಕ್ಯಾಮೆರಾಗಳಿವೆ. 32 ಜಿಬಿ ಸ್ಟೋರೇಜ್‌ ಇದೆ. ಮೈಕ್ರೋಕಾರ್ಡ್‌ ಹಾಕಿಕೊಂಡು 128 ಜಿಬಿಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ. ಆರ್ಟಿಫಿಷಿಯನ್‌ ಇಂಟೆಲಿಜೆನ್ಸ್‌ ಮೋಡ್‌, ಎಚ್‌ಡಿಆರ್‌ ಜೊತೆಗೆ 5 ಮೆಗಾಪಿಕ್ಸೆಲ್‌ ಫ್ರಂಟ್‌ ಕೆಮರಾ ಮುಖವನ್ನು ಚಂದಗೊಳಿಸುತ್ತದೆ.

ಇದನ್ನೂ ಓದಿ |  'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ

ನೀವು ಮೊದಲ ಬಾರಿಗೆ ಒಂದು ಫೋನ್‌ ಕೊಳ್ಳಬೇಕು ಅಂತ ನಿರ್ಧರಿಸಿದರೆ, ವಿಷನ್‌ 1 ಅತ್ಯುತ್ತಮ ಆಯ್ಕೆ.

Latest Videos
Follow Us:
Download App:
  • android
  • ios