ಬಹುಶಃ ಕೊರೋನಾ ಸಾಂಕ್ರಾಮಿಕ ಸ್ಥಿತಿ ಸೃಷ್ಟಿಯಾಗುವ ಮುಂಚೆ ಬಹಳಷ್ಟು ಜನರಿಗೆ ಝೂಮ್ ಆಪ್‌ ಸೇವೆಯ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ರಿಮೋಟ್ ಆಗಿ ಕೆಲಸ ಮಾಡೋರಿಗೆ ಮಾತ್ರ ಈ ಆಪ್‌ನ ಸೇವೆ ಬಗ್ಗೆ ಅರಿವಿತ್ತು. ಆದರೆ, ಯಾವಾಗ ಕೊರೊನಾ ವೈರಸ್‌ ಸಾಂಕ್ರಾಮಿಕವಾಗಿ ಇಡೀ ಜಗತ್ತನ್ನು ಆವರಿಸಿತೋ, ಎಲ್ಲರು ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯ ಸೃಷ್ಟಿಯಾಯಿತೋ ಆಗ ಪ್ರತಿಯೊಬ್ಬರ ನಾಲಿಗೆಯ ಮೇಲೂ ಝೂಮ್ ನಲಿಯ ತೊಡಗಿತು. ಇದರ ಪರಿಣಾಮ ಝೂಮ್ ಕಂಪನಿಯ ಷೇರುಗಳು ಶೇ.500ರಷ್ಟು ಹೆಚ್ಚಳವಾಯಿತು ಎಂದರೆ ನಂಬುತ್ತೀರಾ.... ನಂಬಲೇಬೇಕು.

BSNLನಿಂದ 199 ರೂ. ಪ್ರಿಪೇಡ್ ಪ್ಲ್ಯಾನ್, ನಿತ್ಯ 2ಜಿಬಿ ಹೈಸ್ಪೀಡ್ ಇಂಟರ್ನೆಟ್!

ವಿಡಿಯೋ ಕಾನ್ಫೆರೆನ್ಸಿಂಗ್ ವೇದಿಕೆಯಾಗಿರುವ ಝೂಮ್ ತನ್ನ ಸೇವೆಯನ್ನು ಅಷ್ಟಕ್ಕೆ ಮಿತಿಗೊಳಿಸಲು ನಿರ್ಧರಿಸಿಲ್ಲ. ಹೊಸ ಸಾಹಸಕ್ಕೆ ಮುಂದಾಗಲಿದ್ದು, ಇಮೇಲ್ ಮತ್ತು ಕ್ಯಾಲೆಂಡರ್ ಆಪ್ ಸೇವೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ  ದಿ ಇನ್ಫರ್ಮೇಷನ್ ವರದಿ ಪ್ರಕಟಿಸಿದೆ. ಇದೇ ವರದಿಯನ್ನು ಉಲ್ಲೇಖಿಸಿ ಅನೇಕ ಜಾಲತಾಣಗಳು ಈ ಬಗ್ಗೆ ವರದಿ ಮಾಡಿವೆ.

ಅಮೆರಿಕ ಮೂಲದ  ಝೂಮ್, ಇಮೇಲ್ ಸೇವೆ ಆರಂಭಿಸುವ ಮೂಲಕ ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿ ಸೆಡ್ಡು ಹೊಡೆಯಲಿದೆಯಾ ಎಂಬ ಚರ್ಚೆಗಳೂ ನಡೆಯುತ್ತಿವೆ. ಏತನ್ಮಧ್ಯೆ, ಇ ಮೇಲ್ ಸೇವೆ ಆರಂಭಿಸುವ ಬಗ್ಗೆ ಝೂಮ್ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂಬುದು ನಿಮ್ಮ ಗಮ್ಮನದಲ್ಲಿರಲಿ.

ಕಂಪನಿ ಈಗಾಗಲೇ ಇ ಮೇಲ್ ಸೇವೆ ಒದಗಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಮುಂದಿನ ವರ್ಷ ಈ ಹೊಸ ಉತ್ಪನ್ನದ ಟೆಸ್ಟಿಂಗ್ ಕೂಡ ನಡೆಯಲಿದ್ದು, ಇದು ವೆಬ್ ಮೇಲ್ ಆಗಿರಲಿದೆಂದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಕ್ಯಾಲೆಂಡರ್ ಆಪ್ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಅದರ ಬಗ್ಗೆ ಕೆಲಸ ಆರಂಭವಾಗಿರುವ ಬಗ್ಗೆ ಖಚಿತ ಮಾಹಿತಿಯೂ ಇಲ್ಲ. ಸಾಂಕ್ರಾಮಿಕ ಪರಿಸ್ಥಿತಿ ಮುಕ್ತಾಯವಾಗಿ ಜಗತ್ತು ಮೊದಲಿನ ಸ್ಥಿತಿಗೆ ಮರಳಿದರೆ, ವಿಡಿಯೋಕಾನ್ಫಿರೆನ್ಸಿಂಗ್ ಆಪ್‌ಗಳ ಬಳಕೆ ಕಡಿಮೆಯಾಗಲಿದೆ. ಹಾಗಾಗಿ, ಮುಂದಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಝೂಮ್ ಇ ಮೇಲ್ ಸೇವೆಗೂ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಝೂಮ್ ಯಾವುದೇ ಮಾಹಿತಿನ್ನು ನೀಡಿಲ್ಲ.

ಜಿಯೋಗೆ ಸೆಡ್ಡು: ಕಡಿಮೆ ದರದಲ್ಲಿ ಎಕ್ಸ್‌ಕ್ಲೂಸಿವ್ ಪ್ಲ್ಯಾನ್ ಆರಂಭಿಸಿದ Vi

ಝೂಮ್‌ನ ಪ್ರತಿಸ್ಪರ್ಧಿ ಕಂಪನಿಗಳಾದ ಮೈಕ್ರೋಸಾಫ್ಟ್ 365 ಮೇಲಿಂಗ್ ಸೇವೆಯನ್ನು ಹೊಂದಿದ್ದರೆ, ಗೂಗಲ್ ಕೂಡ ವರ್ಕ್‌ಸ್ಪೇಸ್ ಸೇವೆಯನ್ನು ಒದಗಿಸುತ್ತಿದೆ. ಈ ಎರಡೂ ವೇದಿಕೆಗಳು ಬಳಕೆದಾರರಿಗೆ ಕ್ಯಾಲೆಂಡರ್, ಇಮೇಲ್ ವಿಡಿಯೋ ಕಾನ್ಫರೆನ್ಸಿಂಗ್ ಸೇವೆಯನ್ನು ಒದಗಿಸುತ್ತಿವೆ. ಹಾಗಾಗಿ, ಝೂಮ್ ಕೂಡ ಇಮೇಲ್ ಮತ್ತು ಕ್ಯಾಲೆಂಡರ್‌ನಂಥ ಸೇವೆಗಳನ್ನು ಆರಂಭಿಸುವ ಮೂಲಕ ಪೈಪೋಟಿಯೊಡ್ಡವುದರಲ್ಲಿ ಅರ್ಥವಿದೆ ಎನ್ನಲಾಗುತ್ತಿದೆ. 

ಹಾಗೆ ನೋಡಿದರೆ, 2020 ವರ್ಷವೂ ಝೂಮ್‌ಗೆ ವ್ಯಾಪಾರದ ದೃಷ್ಟಿಯಿಂದ ಅತ್ಯದ್ಭುತ ವರ್ಷ ಎಂದು ಹೇಳಬೇಕು. ವರ್ಷದ ಆರಂಭದಲ್ಲಿ ಝೂಮ್ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣದ ಮೌಲ್ಯ 19 ಶತಕೋಟಿ ಡಾಲರ್‌ನಷ್ಟಿತ್ತು. ಆದರೆ ಕೊರೋನಾ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿ ಸಾಂಕ್ರಾಮಿಕ ಪರಿಸ್ಥಿತಿ ನಿರ್ಮಾಣದ ಆದ ಮೇಲೆ, ಅಂದರೆ 2020 ನವೆಂಬರ್‌ನಲ್ಲಿ ಅದು 140 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. 

ಕೆಲವು ಸರಕ್ಷತೆಯ ಲೋಪಗಳು ಮತ್ತು ಸಮಸ್ಯೆಗಳ ನಡುವೆಯೂ ಝೂಮ್ 2020ರಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದೆ. ಇದೀಗ ಇ ಮೇಲ್ ಸೇವೆ ಆರಂಭಿಸುತ್ತಿರುವುದು ಮುಂದಿನ ದಿನಗಳಲ್ಲಿ ಝೂಮ್‌ಗೆ ಬಹುದೊಡ್ಡ ಹೆಜ್ಜೆಯಾಗಬಹುದು. ಯಾಕೆಂದರೆ, ಇಮೇಲ್ ಸೇವೆ ಆರಂಭವಾದವರೆ ಪೋಸ್ಟ್ ಕೊರೋನಾ ಕಾಲಘಟ್ಟದಲ್ಲಿ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತ ದಿಗ್ಗಜ ಕಂಪನಿಗಳ ಜೊತೆ ಸ್ಪರ್ಧಿಗೆ ಇಳಿಯಲು ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್‌ ಟುಗೆದರ್’ ಫೀಚರ್!