ಚೀನಾದ ಆಲಿಬಾಬ ಕಂಪನಿ ಭಾರತೀಯ ಮಾಹಿತಿ ಕದಿಯುತ್ತಿದೆ; ಗುಪ್ತಚರ ಇಲಾಖೆ!
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಆಲಿ ಬಾಬಾ ಕಂಪನಿ ಫ್ರಿಬೈಸ್ ಹೆಸರಲ್ಲಿ ಭಾರತೀಯರ ಮಾಹಿತಿ ಕದಿಯುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಬಹಿರಂಗ ಪಡಿಸಿದೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಆಲಿಬಾಬ್ ಕಂಪನಿ ಮೇಲೆ ತನಿಖೆ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.
ನವದೆಹಲಿ(ಸೆ.15): ಚೀನಾದ ಮೂಲದ ಆಲಿಬಾಬಾ ಕಂಪನಿ ಭಾರತದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚೈನೀಸ್ ಟೆಕ್ನಾಲಜಿ ಗ್ರೂಪ್ ಆಲಿಬಾಬ ಭಾರತದ ಹಲವು ಕಂಪನಿಗಳಿಗೆ ಡಾಟಾ ಸರ್ವರ್ ಸರ್ವೀಸ್ ಒದಗಿಸುತ್ತಿದೆ. ಯುರೋಪಿಯನ್ ರಾಷ್ಟ್ರಗಳ ಡಾಟಾ ಸರ್ವರ್‌ಗಿಂತ ಕಡಿಮೆ ಬೆಲೆ ಹಾಗೂ ತಕ್ಷಣ ಸರ್ವೀಸ್ ನೀಡಬಲ್ಲ ಆಲಿಬಾಬ ಸರ್ವರ್ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಹೀಗೆ ಸಂಸ್ಥೆಗಳು ಬಳಸುತ್ತಿರುವ ಡಾಟಾ ಸರ್ವರ್ ಮೂಲಕ ಆಲಿಬಾಬಾ ಭಾರತೀಯರ ಮಾಹಿತಿ ಕದಿಯುತ್ತಿದೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಬ್ಯಾನ್ ಬಳಿಕ ಮೌನ ಮುರಿದ PUBG; ಚೀನಾ ಗೇಮಿಂಗ್ ಕಂಪನಿ ಜೊತೆ ಒಪ್ಪಂದ ರದ್ದು
ಆಲಿ ಬಾಬಾ ಕಂಪನಿಯ 72 ಸರ್ವರ್‌ಗಳು ಭಾರತೀಯರ ಮಾಹಿತಿ ಕದ್ದು, ಚೀನಾಗೆ ಕಳುಹಿಸಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಇದು ಚೀನಾದ ಅಧಿಕಾರಿಗಳು ಮಾಡಿದ ವ್ಯವಸ್ಥಿತ ಯೋಜನೆ.. ಹಲವು ಸಂಸ್ಥೆಗಳಿಗೆ ಉಚಿತ ಸರ್ವೀಸ್ ಸೇರಿದಂತೆ ಹಲವು ಆಫರ್ ಮೂಲಕ ಡಾಟಾ ಸರ್ವರ್ ನೀಡುತ್ತಿದೆ. ಈ ದತ್ತಾಂಶ ಸರ್ವರ್‌ಗಳು ಎಲ್ಲಾ ಸೂಕ್ಷ್ಮ ಮತ್ತು ಪೂರಕ ದತ್ತಾಂಶಗಳನ್ನು ಚೀನಾದ ಸರ್ವರ್‌ಗಳಿಗೆ ರವಾನಿಸುತ್ತಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ ಎಂದು ನ್ಯೂಸ್ 18 ತನ್ನ ವರದಿಯಲ್ಲಿ ಹೇಳಿದೆ.
ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!.
ಚೀನಾ ಸರ್ಕಾರದ ಜೊತೆ ಕಾರ್ಯನಿರ್ವಹಿಸುತ್ತಿರುವ ಕೆಲ ಡಾಟಾ ಸರ್ವರ್ ಎಜೆನ್ಸಿಗಳು ಈ ಮಾಹಿತಿಗಳನ್ನು ಪಡೆಯುತ್ತಿದೆ. ಈಗಾಗಲೇ ಭಾರತದೊಂದಿಗೆ ಸೈಬರ್ ವಾರ್ ನಡೆಸಲು ಚೀನಾ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ ಎಂಬ ಮಾಹಿತಿಯೂ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಗುಪ್ತಚರ ಮೂಲಗಳು ಚೀನಾ ಕಂಪನಿಗಳು ಭಾರತೀಯರ ಮಾಹಿತಿ ಕದಿಯುತ್ತಿರುವ ಕುರಿತು ಮಾಹಿತಿ ಬಹಿರಂಗ ಪಡಿಸಿರಿವುದು ಮತ್ತಷ್ಟು ಆತಂಕ ತಂದಿದೆ.
ಆಲಿ ಬಾಬಾ ಕಂಪನಿ ಮಾಹಿತಿ ಕದಿಯುತ್ತಿರುವ ಕುರಿತು ಗುಪ್ತಚರ ಮೂಲ ಹೇಳಿರುವ ಕಾರಣ ಸಮಗ್ರ ತನಿಖೆಯಾಗುವು ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಆಲಿಬಾಬಾ ಮಾತ್ರವಲ್ಲ ಚೀನಾ ಮೂಲದ ಕಂಪನಿಗಳ ಅಸಲಿ ಮುಖ ಬಯಲಾಗಲಿದೆ.