ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗೆ ಬ್ಲೂಟಿಕ್ ಬೇಕಾ..? ಇನ್ಮುಂದೆ ಇಷ್ಟು ಶುಲ್ಕ ಕಟ್ಬೇಕು..
ಬ್ಲೂಟಿಕ್ ಹೊಂದಿದ ಖಾತೆಗಳಿಗೆ ಹೆಚ್ಚುವರಿ ಸೇವೆಗಳು, ಸುರಕ್ಷತಾ ವ್ಯವಸ್ಥೆ, ನೇರ ಗ್ರಾಹಕ ಸಂಪರ್ಕ ಸೌಲಭ್ಯ ಲಭ್ಯವಾಗಲಿದೆ.
ನವದೆಹಲಿ (ಮಾರ್ಚ್ 30, 2023): ಟ್ವಿಟ್ಟರ್ ಮಾದರಿಯಲ್ಲಿ ತನ್ನ ಫೇಸ್‌ಬುಕ್ ಮತ್ತು ಇನ್ಸಾಗ್ರಾಂ ಚಂದಾದಾರರಿಗೆ ಬ್ಲೂಟಿಕ್ ಆಧರಿತ ವ್ಯವಸ್ಥೆ ಜಾರಿಗೆ ಮುಂದಾಗಿರುವ ಮೆಟಾ, ಇದಕ್ಕಾಗಿ ಭಾರತದಲ್ಲಿ ಚಂದಾದಾರರಿಗೆ ಮಾಸಿಕ 1450 ರು. ಶುಲ್ಕ ವಿಧಿಸುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಈಗಾಗಲೇ ಫೇಸ್‌ಬುಕ್ ಮತ್ತು ಇನ್ಸ್ಟಾದ ವೆರಿಫೈಡ್ ಖಾತೆ ಹೊಂದಲು ಬಯಸುವವರಿಗೆ ಮಾಸಿಕ 14.99 ಡಾಲರ್ (1230 ರೂ.) ಶುಲ್ಕ ನಿಗದಿಪಡಿಸಲಾಗಿದೆ.
ಇದೇ ಲೆಕ್ಕಾಚಾರದ ಅನ್ವಯ ಭಾರತದಲ್ಲಿ (India) ಮೊಬೈಲ್‌ನಲ್ಲಿ (Mobile) ಈ ಎರಡೂ ಆ್ಯಪ್ (App) ಬಳಸುವವರಿಗೆ ಮಾಸಿಕ 1099 ರೂ. ಮತ್ತು ಕಂಪ್ಯೂಟರ್‌ನಲ್ಲಿ (Computer) ಬಳಸುವವರಿಗೆ ಮಾಸಿಕ 1450 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಬ್ಲೂಟಿಕ್ (Blue Tick) ಹೊಂದಿದ ಖಾತೆಗಳಿಗೆ ಹೆಚ್ಚುವರಿ ಸೇವೆಗಳು, ಸುರಕ್ಷತಾ ವ್ಯವಸ್ಥೆ, ನೇರ ಗ್ರಾಹಕ ಸಂಪರ್ಕ ಸೌಲಭ್ಯ ಲಭ್ಯವಾಗಲಿದೆ. ಪ್ರಸ್ತುತ ಬ್ಲೂಟಿಕ್ ಖಾತೆ ಸೇವೆಯು ವ್ಯಾಪಾರ (Business) ಸಂಸ್ಥೆ ಮತ್ತು ಅಪ್ರಾಪ್ತರಿಗೆ (Minor) ಲಭ್ಯವಾಗುವುದಿಲ್ಲ.
ಇದನ್ನು ಓದಿ: ಟ್ವಿಟ್ಟರ್ ಬ್ಲೂಟಿಕ್ ಸೇವೆ ಜಾರಿ: ಟ್ವೀಟ್ ಪದಗಳ ಮಿತಿ 4000ಕ್ಕೆ ಹೆಚ್ಚಳ..!