ಭಾರೀ ನಿರೀಕ್ಷೆ ಹುಟ್ಟಿಸಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್21 ಸೀರಿಸ್ ಜಾಗತಿಕವಾಗಿ ಬಿಡುಗಡೆಯಾಗುವುದು ಖಚಿತವಾಗಿದೆ. ಇತ್ತೀಚೆಗಷ್ಟೇ ಇಂಟರ್ನೆಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ನ ಟೀಸರ್ ಸೋರಿಕೆಯಾಗಿ ಭಾರಿ ಸದ್ದು ಮಾಡಿತ್ತು.

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಬರ್ದಸ್ತ್ ಪಾಲು ಹೊಂದಿರುವ ಸ್ಯಾಮ್ಸಂಗ್ ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಬಳಕೆದಾರರನ್ನು ಹಿಡಿದಿಟ್ಟುಕೊಂಡಿದೆ. ಇದೀಗ ಎಸ್‌21 ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಜನವರಿ 14ರಂದು ಜಾಗತಿಕವಾಗಿ ಬಿಡುಗಡೆ ಮಾಡುವ ವಿಷಯವನ್ನು ಕಂಪನಿ ಖಚಿತಪಡಿಸಿದೆ ಎಂದು ಆಂಡ್ರಾಯ್ಡ್ ಅಥಾರಿಟಿ ವರದಿ ಮಾಡಿದೆ.

ಜಾಗತಿಕ ಬಿಡುಗಡೆ ಸಿದ್ಧವಾದ Mi Watch Lite: ಇದು ಬಜೆಟ್ ಫ್ರೆಂಡ್ಲೀ

ಬೆಂಗಳೂರಿನ ಸ್ಯಾಮ್ಸಂಗ್ ಓಪೇರಾ ಹೌಸ್ ಮಳಿಗೆ ಸ್ಯಾಮ್ಸಂಗ್ ಎಸ್21 ಸೀರಿಸ್ ಬಿಡುಗಡೆ ಖಚಿತಪಡಿಸಿದೆ. ಜಾಗತಿಕ ಬಿಡುಗಡೆಯಾದ ಒಂದು ವಾರದ ಬಳಿಕ ಈ ಫೋನ್ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಆಂಡ್ರಾಯ್ಡ್ ಅಥಾರಿಟಿ ತನ್ನ ವರದಿಯಲ್ಲಿ ಹೇಳಿದೆ.

ಸ್ಯಾಮ್ಸಂಗ್ ಸ್ಟೋರ್ ಈಗಾಗಲೇ ಗ್ಯಾಲಕ್ಸಿ ಎಸ್21, ಗ್ಯಾಲಕ್ಸಿ ಎಸ್21 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್21 ಅಲ್ಟ್ರಾ ಫೋನ್‌ಗಳಿಗಾಗಿ ಪ್ರಿ ಆರ್ಡರ್ ತೆಗೆದುಕೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್21 ಬೂದು, ಗುಲಾಬಿ, ನೇರಳೆ, ಬಿಳಿ ಬಣ್ಣಗಳಲ್ಲಿ ದೊರೆಯಲಿದೆ. ಗ್ಯಾಲಕ್ಸಿ ಎಸ್21 ಪ್ರೋ ಫೋನ್ ನಿಮಗೆ ಗುಲಾಬಿ, ನೇರಳೆ, ಬೆಳ್ಳಿ ಮತ್ತು ಕಪ್ಪು ಬಣ್ಣಗಳಲ್ಲಿ ಸಿಗಲಿದೆ. ಇನ್ನೂ ಗ್ಯಾಲಕ್ಸಿ ಎಸ್21 ಅಲ್ಟ್ರಾ ಮಾತ್ರ ಕೇವಲ ಎರಡು ಬಣ್ಣಗಳಲ್ಲಿ ಸಿಗಲಿದೆ ಅಂದರೆ ಬೆಳ್ಳಿ  ಮತ್ತು ಕಪ್ಪು ಬಣ್ಣಗಳಲ್ಲಿ ಮಾತ್ರವೇ ದೊರೆಯಲಿದೆ. 

ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಗೊತ್ತು, ರೋಲೆಬಲ್ ಫೋನ್?

ಗ್ಯಾಲಕ್ಸಿ ಎಸ್21 ಅಲ್ಟ್ರಾ ಫೋನ್‌ನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮರಾ ಇರಲಿದ್ದು, 10 ಮೆಗಾಪಿಕ್ಸೆಲ್ ಸೆನ್ಸರ್‌ಗಳಿದ್ದು ಈ ಪೈಕಿ ಒಂದು 10x ಆಪ್ಟಿಕಲ್ ಝೂಮ್ ಹಾಗೂ ಲೇಸರ್ ಆಟೋಫೋಕಸ್‌ಗೆ ಸಪೋರ್ಟ್ ಮಾಡಲಿದೆ. ಇನ್ನು ನಾಲ್ಕೆನೇ ಕ್ಯಾಮರ 14 ಮೆಗಾಪಿಕ್ಸೆಲ್ ಇರಬಹುದು ಎಂದು ಹೇಳಲಾಗುತ್ತಿದೆ.

ನೀವೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ‘ವಾಚ್ ಪಾರ್ಟಿ’ ಮಾಡಬಹುದು!

ನವೆಂಬರ್‌ನಲ್ಲಿ ಸೋರಿಕೆಯಾದ ಮಾಹಿತಿ ಪ್ರಕಾರ ಈ ಫೋನ್‌ಗಳು 120ಎಚ್‌ಜೆಡ್ ಡಿಸ್‌ಪ್ಲೇಗಳನ್ನು ಒಳಗೊಳ್ಳಲಿವೆ. ಅವು 6.2 ಇಂಚಿನಿಂದ 6.8 ಇಂಚಿನವರೆಗೂ ಇರಬಹುದು. ಹಾಗೆಯೇ, 4000 ಎಂಎಎಚ್‌ನಿಂದ 5,000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಗಳನ್ನು ಅಳವಡಿಸಿರಬಹುದು. ಕ್ವಾಲಕಾಮ್‌ನ ಹೊಸ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಹೊಸ ಗ್ಯಾಲಕ್ಸಿ ಎಸ್21 ಸೀರಿಸ್ ಫೋನ್‌ಗಳ ವೈಶಿಷ್ಟ್ಯಗಳ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.