ಮೋಟೋ ಜಿ ಸರಣಿ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದ ಮೋಟೊರೋಲಾ ಇದೀಗ ಮತ್ತೊಂದು ಸ್ಮಾರ್ಟ್‌ಫೋನ್‌ನೊಂದಿಗೆ ಜಾಗತಿಕ ಮಾರುಕಟ್ಟೆಗೆ ಅಡಿಯಿಟ್ಟಿದೆ. ಯುರೋಪ್ ಮಾರುಕಟ್ಟೆಯಲ್ಲಿ ಮೋಟೋ G 5G ಸ್ಮಾರ್ಟ್‌ಫೋನ್ ಜೊತೆಗೆ ಮೋಟೋ 9G ಪವರ್  ಸ್ಮಾರ್ಟ್‌ಫೋನ್‌ ಕೂಡ ಎಂಟ್ರಿ ಕೊಟ್ಟಿದೆ. ಸದ್ಯಕ್ಕೆ ಈ ಫೋನ್ ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಶೀಘ್ರವೇ ಭಾರತದ ಮಾರುಕಟ್ಟೆಗೂ ಕಾಲಿಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. 

5ಜಿ ಕನೆಕ್ಟಿವಿಟಿ ಹೊಂದಿರುವ ಈ ಫೋನ್, 5000 ಎಂಎಂಎಚ್ ಬ್ಯಾಟರಿಯನ್ನು ಒಳಗೊಂಡಿದೆ. ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮರಾಗಳಿರುವುದು ಈ ಫೋನಿನ ವಿಶೇಷವಾಗಿವೆ. ಅಮೆರಿಕಾ ಮೂಲದ ಮೋಟೊರೋಲಾ ಕಂಪನಿಯನ್ನು 2014ರಲ್ಲಿ ಚೀನಾ ಮೂಲದ ಲೆನೆವೋ ಕಂಪನಿ ಸ್ವಾಧೀನಪಡಿಸಿಕೊಡಿಂತ್ತು. ಇದೀಗ ಕಂಪನಿ ಮೋಟೊರೋಲಾ ಬ್ರ್ಯಾಂಡ್‌ನಡಿ  ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

Micromax is Back: 6,999 ಮತ್ತು 10,999 ರೂ.ಗೆ ಫೋನ್!

ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಮೋಟೋ G 5G ಯುರೋಪಿಯನ್ ಮಾರುಕಟ್ಟೆಯಲ್ಲಿ 2,99 ಯುರೋ ಆಗಿದೆ. ಇದನ್ನು ನೀವು ಭಾರತೀಯ ಕರೆನ್ಸಿಗೆ ಕನ್ವರ್ಟ್ ಮಾಡಿದರೆ ಅಂದಾಜು 26,200 ರೂಪಾಯಿ ಆಗಲಿದೆ. ಅಂದರೆ, ಮೋಟೋ G 5G ಪ್ರೀಮಿಯಮ್ ಸಾಲಿನ ಸ್ಮಾರ್ಟ್ ಫೋನ್ ಎನಿಸಿಕೊಳ್ಳಲಿದೆ. ಐರೋಪ್ಯ ಒಕ್ಕೂಟದ ದೇಶಗಳಲ್ಲಿ 4ಜಿಬಿ ಮತ್ತು 64ಜಿಬಿ ಸ್ಟೋರೇಜ್ ಆಯ್ಕೆಯೊಂದಿಗೆ ಈ ಫೋನ್ ಅನ್ನು ಮಾರಾಟ ಮಾಡಲಾಗುತ್ತದೆ. ಭಾರತ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ, ಏಷ್ಯಾನ್ ರಾಷ್ಟ್ರಗಳಲ್ಲಿ ಮುಂದಿನ ವಾರ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. 

ವಿಶೇಷತೆಗಳೇನು?
ವೋಲ್ಕಾನಿಕ್ ಗ್ರೇ ಮತ್ತು ಫ್ರಾಸ್ಟೆಡ್ ಸಿಲ್ವರ್ ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಮೋಟೋ G 5G ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್ 10 ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದ್ದು, 6.7 ಇಂಚ್ ಫುಲ್ ಎಚ್‌ಡಿ ಎಲ್‌ಟಿಪಿಎಸ್ ಡಿಸ್‌ಪ್ಲೇ ಹೊಂದಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 750G SoS ಪ್ರೊಸೆಸರ್ ಇದ್ದು 4 ಜಿಬಿ ರಾಮ್ ಜೊತೆಗೆ 6‌4 ಜಿಬಿ ಸ್ಟೋರೇಜ್ ಕೂಡ ಸಿಗಲಿದೆ. 

ಒನ್‌ಪ್ಲಸ್‌ನಿಂದ ಲಿಮಿಟೆಡ್ ಎಡಿಷನ್ ಫೋನ್, ವಿಶೇಷತೆಗಳೇನು?

ಕ್ಯಾಮರಾ ಹೇಗಿದೆ?
ಮೋಟೋ G 5G ಫೋನ್‌ನ ಹಿಂಬದಿಯಲ್ಲಿ ಮೂರು ಕ್ಯಾಮರಾಗಳ ಸೆಟ್‌ಅಪ್ ಇದ್ದು, ಈ ಪೈಕಿ ಪ್ರೈಮರಿ ಕ್ಯಾಮರಾ 48 ಮೆಗಾ ಪಿಕ್ಸೆಲ್ ಕ್ಯಾಮರಾವಾಗಿದೆ. ಸೆಕೆಂಡರಿ ಕ್ಯಾಮರಾ 8 ಮೆಗಾಪಿಕ್ಸೆಲ್ ಹಾಗೂ ವೈಡ್ ಆಂಗಲ್ ಮತ್ತು 118 ಡಿಗ್ರಿ ಫೀಲ್ಡ್ ವ್ಯೂ ಸೆರೆ ಹಿಡಿಯಲು ಅನುಕೂಲ ಕಲ್ಪಿಸಲು 2 ಮೆಗಾಪಿಕ್ಸೆಲ್ ಕ್ಯಾಮರಾ ಇದರಲ್ಲಿದೆ. ಹಾಗೆಯೇ, ಫೋನಿನ ಫ್ರಂಟ್‌ನಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮರಾ ಕೊಡಲಾಗಿದೆ ಮತ್ತು ಅದ್ಭುತವಾದ ಸೆಲ್ಫಿಗಳನ್ನು ಸೆರೆ ಹಿಡಿಯಲು ಈ ಕ್ಯಾಮರಾದಿಂದ ಸಾಧ್ಯವಾಗಲಿದೆ. 

ಬ್ಯಾಟರಿ ದೃಷ್ಟಿಯಿಂದಲೂ ಈ ಫೋನ್ ಉತ್ತಮವಾಗಿದೆ. ಯಾಕೆಂದರೆ, ಕಂಪನಿ ಈ ಫೋನ್‌ನಲ್ಲಿ 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. 20 ವ್ಯಾಟ್ ಟರ್ಬೋಪವರ್ ಫಾಸ್ಟ್ ಚಾರ್ಚಿಂಗ್ ಫೀಚರ್ ಕೂಡ ಇದೆ. ಒಮ್ಮೆ ನೀವು ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಅದು ನಿರಂತರವಾಗಿ 2 ದಿನಗಳವರೆಗೂ ಬರುತ್ತದೆ. ಫೋನ್ ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನೀಡಲಾಗಿದೆ. ಇನ್ನು ಫೋನ್‌ನ ಕನೆಕ್ಟಿವಿಟಿ ಬಗ್ಗೆ ಹೇಳಬೇಕೆಂದರೆ, ಇದು 5ಜಿ, ಎನ್‌ಎಫ್‌ಸಿ, ಬ್ಲೂಟೂಥ್ 5.1, ವೈಫೈ 802.11, ಯುಎಸ್‌ಬಿ ಟೈಪ್ ಸಿ ಪೋರ್ಟ್, ಜಿಪಿಎಸ್ ಹಾಗೂ ಮತ್ತಿತರ ಕನೆಕ್ಟಿವಿಟಿ ಫೀಚರ್‌ಗಳಿಗೆ ಬೆಂಬಲ ನೀಡುತ್ತದೆ. 

QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?